ನೋಡುವ ದೃಷ್ಟಿ: ಒಂದು ಹೆಣ್ಣಿನ ಅನುಭವ

Upayuktha
0


ಪ್ರತಿಯೊಬ್ಬರ ಜೀವನದಲ್ಲೂ ಅನೇಕ ವ್ಯಕ್ತಿಗಳು ಬರುತ್ತಾರೆ–ಹೋಗುತ್ತಾರೆ. ಆದರೆ ಎಲ್ಲರ ದೃಷ್ಟಿಯೂ ಒಂದೇ ರೀತಿಯಿರಬೇಕು ಅಥವಾ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಿಶೇಷವಾಗಿ ಒಂದು ಹುಡುಗಿಯ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸುಲಭವಲ್ಲ.


ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ನೋಡುವ ದೃಷ್ಟಿ ಆತನ ವ್ಯಕ್ತಿತ್ವಕ್ಕಿಂತಲೂ ಪರಿಸ್ಥಿತಿ ಮತ್ತು ಊಹೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳ ವಿಷಯದಲ್ಲಿ ಈ ದೃಷ್ಟಿ ಇನ್ನೂ ಕಠಿಣವಾಗಿರುತ್ತದೆ. ಅಂತಹ ಒಂದು ಅನುಭವವೇ ಈ ಕಥೆಯಾಗಿ ನಮ್ಮ ಮುಂದೆ ಬರುತ್ತದೆ.



ಹೆಣ್ಣು ಮಗುವಿನ ಬದುಕು ಅನೇಕ ಪ್ರಶ್ನೆಗಳ ನಡುವೆ ಸಾಗುತ್ತದೆ. ಅವಳ ಪ್ರತಿಯೊಂದು ನಡೆಗೂ, ಪ್ರತಿಯೊಂದು ಸಂಬಂಧಕ್ಕೂ ಸಮಾಜ ತನ್ನದೇ ಆದ ಅರ್ಥಗಳನ್ನು ಹಚ್ಚುತ್ತದೆ. ಈ ಕಥೆಯೂ ಸಹ ಒಂದು ಹೆಣ್ಣನ್ನು ನೋಡುವ ಸಮಾಜದ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.
ಕಾರುಣ್ಯ ಎಂಬ ಹುಡುಗಿಗೆ ಇಬ್ಬರು ಅಕ್ಕಂದಿರು ಹಾಗೂ ಒಬ್ಬಳು ತಂಗಿ ಇದ್ದರು. ನಾಲ್ಕು ಹೆಣ್ಣು ಮಕ್ಕಳು ಮಾತ್ರ ಇದ್ದುದರಿಂದ, “ನನಗೂ ಒಬ್ಬ ಅಣ್ಣನಿರಬೇಕಿತ್ತು” ಎಂಬ ಕೊರಗು ಅವಳ ಮನಸ್ಸಿನಲ್ಲಿ ಸದಾ ಕಾಡುತ್ತಿತ್ತು.



ಕರುಣ್ಯ ಕಾಲೇಜಿಗೆ ಹೋಗುವ ಹುಡುಗಿ. ಕಾಲೇಜಿನಲ್ಲಿ ಅವಳು ನೋಡಿದ ಎಲ್ಲ ಹುಡುಗರನ್ನೂ ಅಣ್ಣ ಎಂಬ ಭಾವನೆಯಿಂದಲೇ ನೋಡುತ್ತಿದ್ದಳು. ಅಂತಹ ದಿನಗಳಲ್ಲಿ ಕಾಲೇಜಿನಲ್ಲಿ ಶಮಂತ್ ಎಂಬ ಯುವಕನ ಪರಿಚಯವಾಗುತ್ತದೆ. ಅವನಲ್ಲಿ ಅವಳಿಗೆ ಅಣ್ಣನ ಭಾವನೆ ಸ್ಪಷ್ಟವಾಗಿ ಕಂಡುಬರುತ್ತದೆ. ಹೀಗೆ ಅವರಿಬ್ಬರ ನಡುವೆ ಅಣ್ಣ–ತಂಗಿಯ ಸಂಬಂಧ ಬೆಳೆಯುತ್ತದೆ. ಶಮಂತ್ ತನ್ನ ತಂಗಿಯಾದ ಕರುಣ್ಯಗೆ ಬೇಕಾದ ರಕ್ಷಣೆ, ಬೆಂಬಲ ಹಾಗೂ ಧೈರ್ಯವನ್ನು ನೀಡುತ್ತಾನೆ.



ಒಂದು ದಿನ ಕರುಣ್ಯ ಹೊರಗಡೆ ಹೋಗಿ ಬಸ್‌ನಲ್ಲಿ ಮರಳುತ್ತಿದ್ದಾಗ, ಅದೇ ಬಸ್‌ನಲ್ಲಿ ಶಮಂತ್ ಅಣ್ಣ ಕೂಡ ಇದ್ದರು. ಸೀಟ್ ಇಲ್ಲದ ಕಾರಣ ಅವಳು ಅವರ ಪಕ್ಕದಲ್ಲಿ ಕುಳಿತುಕೊಂಡಳು. ಪ್ರಯಾಣದ ವೇಳೆ ಅವಳ ಊರಿನ ಕೆಲವರು ಅವಳನ್ನು ನೋಡಿ, “ನಿಮ್ಮ ಮಗಳು ಒಬ್ಬ ಹುಡುಗನ ಜೊತೆಗೆ ಕುಳಿತಿದ್ದಳು” ಎಂದು ಅವಳ ತಾಯಿಗೆ ಹೇಳುತ್ತಾರೆ. ಇದರಿಂದ ತಾಯಿ ಕೋಪಗೊಂಡು, “ಯಾರ ಜೊತೆ ಹೋಗಿದ್ದೆ? ಯಾರು ಅವನು? ಅವನ ಪಕ್ಕದಲ್ಲಿ ಯಾಕೆ ಕುಳಿತಿದ್ದೆ?” ಎಂದು ಪ್ರಶ್ನಿಸುತ್ತಾಳೆ.


ಅದಕ್ಕೆ ಕರುಣ್ಯ ಶಾಂತವಾಗಿ ಉತ್ತರಿಸುತ್ತಾಳೆ – “ಅವರು ನನಗೆ ಅಣ್ಣನ ಸಮಾನರಾದವರು ಅಮ್ಮ. ನನಗೆ ಅಣ್ಣ ಇಲ್ಲ ಎಂಬ ಕೊರಗನ್ನು ದೂರ ಮಾಡಿದ ವ್ಯಕ್ತಿ ಅವರು” ಎಂದು.



ಇಂದಿಗೂ ಸಹ ಹೆಣ್ಣು ಮಕ್ಕಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಮಾಜ ಒಂದು ಹೆಣ್ಣನ್ನು ಯಾವ ದೃಷ್ಟಿಯಿಂದ ನೋಡುತ್ತದೆ ಎಂಬುದಕ್ಕೆ ಈ ಕಥೆ ಸ್ಪಷ್ಟ ಉದಾಹರಣೆಯಾಗಿದೆ



-ರಮ್ಯಾ ನಾಯಕ್


Post a Comment

0 Comments
Post a Comment (0)
To Top