ಸುರತ್ಕಲ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಸುರತ್ಕಲ್ ಅಂಗನವಾಡಿ ಕೇಂದ್ರದ ವರ್ಣ ಚಿತ್ತಾರದಿಂದ ಕೂಡಿದ ನವೀಕೃತ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು.
ಸುರತ್ಕಲ್ ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡಿರುವ ಅಂಗನವಾಡಿಯನ್ನು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೊ. ಮೇಜರ್ ಡೋನರ್ ರಾಮಕೃಷ್ಣ ಪಿ.ಕೆ. ಉದ್ಘಾಟನೆ ನಡೆಸಿ ಶಿಕ್ಷಣವು ಮಕ್ಕಳ ಹಕ್ಕು ಆಗಿದ್ದು ಮಕ್ಕಳು ಉತ್ತಮ ಕಲಿಕಾ ವಾತಾವರಣದಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಬಾಲ್ಯದಲ್ಲಿ ಮಕ್ಕಳು ನೋಡಿ ಕಲಿಯುವ ಕಾರಣ ಅಂಗನವಾಡಿಯ ಕೊಠಡಿಯು ಆಕರ್ಷಣೆಯಿಂದ ಕೂಡಿ ಚಿತ್ರಗಳಿಂದ ಕೂಡಿರಬೇಕು. ಸುರತ್ಕಲ್ ರೋಟರಿ ಆಕರ್ಷಕವಾಗಿ ಅಂಗನವಾಡಿಯನ್ನು ರೂಪಿಸಿರುವುದು ಶ್ಲಾಘನೀಯವೆಂದರು.
ರೋಟರಿ ವಲಯ 2 ಝೋನಲ್ ಲೆಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ ಶುಭ ಹಾರೈಸಿದರು. ಸುರತ್ಕಲ್ ರೋಟರಿಯ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಭವ್ಯ ಅವರು ಕೃತಜ್ಞತೆ ಸಲ್ಲಿಸಿದರು.
ಮಹಾ ನಗರ ಪಾಲಿಕೆ ಯ ಮಾಜಿ ಸದಸ್ಯೆ ಶೋಭಾ ರಾಜೇಶ್, ಸುರತ್ಕಲ್ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ, ಅರೋಗ್ಯ ಸಹಾಯಕಿ ಶರ್ಮಿಳಾ, ಅಂಗನವಾಡಿ ಕೇಂದ್ರದ ರಮಣಿ, ಸುರತ್ಕಲ್ ರೋಟರಿ ಕ್ಲಬ್ ನ ಕಾರ್ಯದರ್ಶಿ ರಾಮ ಮೋಹನ್ ವೈ, ಕೋಶಾಧಿಕಾರಿ ಮೋಹನ್ ರಾವ್, ಸಮುದಾಯ ಸೇವಾ ನಿರ್ದೇಶಕ ಚಂದ್ರಕಾಂತ್ ಮರಾಠೆ, ಸುರತ್ಕಲ್ ರೋಟರಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಪಿ. ಪುರುಷೋತ್ತಮ ರಾವ್ ರೋಟರಿ ಸದಸ್ಯರು, ಪೋಷಕರು, ಉಪಸ್ಥಿತರಿದ್ದರು. ರೋಟರಿ ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ ಕಾರ್ಯಕ್ರಮ ಸಂಯೋಜಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

