ಸುಧಾ ಗುರುರಾವ್‌ ದೇಶಪಾಂಡೆ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ

Upayuktha
0


ಬೆಂಗಳೂರು: ರಾಣೆಬೆನ್ನೂರಿನ ಉತ್ತರಾದಿ ಮಠದಲ್ಲಿ, ಶನಿವಾರ (ಜ.10) ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನಿಂದ ಶ್ರೀಮತಿ ಸುಧಾ ಗುರುರಾವ್‌ ದೇಶಪಾಂಡೆ, ರಾಣೆಬೆನ್ನೂರು ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈತ್ರೇಯಿ ಮಹಿಳಾ ಹರಿದಾಸ ಟ್ರಸ್ಟ್‌ ನ ಉಪಾಧ್ಯಕ್ಷರಾದ ಡಾ. ಶಾಂತಾ ರಘೋತ್ತಮಾಚಾರ್ಯ ಇವರು ಪ್ರಶಸ್ತಿ ಪ್ರದಾನ ಮಾಡಿದರು.


ಇದೇ ಸಮಾರಂಭದಲ್ಲಿ, ವಿಜಯದಾಸರ ಕುರಿತಾಗಿ ನಡೆಸಿದ ರಸಪ್ರಶ್ನೆಯ ಬಹುಮಾನಿತರಾದ ಶ್ರೀಮತಿ ಮಧುಮತಿ ಗಲಗಲಿ ಇವರಿಗೆ ಬಹುಮಾನ ವಿತರಣೆ ಮಾಡಲಾಯಿತು.


ರಾಣೆಬೆನ್ನೂರಿನ ಉತ್ತರಾದಿ ಮಠದಲ್ಲಿ, ಶ್ರೀ ಶ್ರೀ ಸತ್ಯಾತ್ಮತೀರ್ಥರು, ಭಾನುವಾರ (ಜ.11) ರಂದು ಮೈತ್ರೇಯಿ ಪ್ರಕಾಶನದಡಿ ಪ್ರಕಟಗೊಂಡ, ಶ್ರೀಮತಿ ಸುಧಾ ಗುರುರಾವ್‌ ದೇಶಪಾಂಡೆ, ರಾಣೆಬೆನ್ನೂರು ಇವರ “ಭಕ್ತಿ ಕುಸುಮಾಂಜಲಿ– 02” ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top