ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ನಿಂದ ಶ್ರೀ ಗೋಪಾಲ ದಾಸರ ಆರಾಧನೆ

Upayuktha
0



ಬೆಂಗಳೂರು: ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ದಿನಾಂಕ  ಶನಿವಾರ (ಜ.10) ಶ್ರೀ ಗೋಪಾಲ ದಾಸರ ಆರಾಧನೆಯನ್ನು ರಾಣೆಬೆನ್ನೂರಿನಲ್ಲಿ ವಿಭಿನ್ನವಾಗಿ ಆಚರಿಸಿತು.


ಮಕ್ಕಳಲ್ಲಿ ಹರಿದಾಸ ಪರಂಪರೆಯ ಮಹತ್ವವನ್ನು ತಿಳಿಸುವುದಕ್ಕಾಗಿ, ದೇವರು ಸದಾ ನಮ್ಮೊಡನಿದ್ದಾನೆ ಎಂಬ ವಿಷಯದ ಕುರಿತಾಗಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹದಿನೈದು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


ಅದರಲ್ಲಿ ಹೆಚ್ಚಿನ ಅಂಕಗಳಿಸಿದವರಿಗೆ ಟ್ರಸ್ಟ್‌ನ ಉಪಾಧ್ಯಕ್ಷರಾದ ಡಾ. ಶಾಂತಾ ರಘೋತ್ತಮಾಚಾರ್ಯ ಇವರು ಬಹುಮಾನಗಳನ್ನು ಪ್ರಾಯೋಜಿಸಿದರು. ಭಾಗವಹಿಸಿದ ಸರ್ವರಿಗೂ ಪುಸ್ತಕ ಬಹುಮಾನ ನೀಡಲಾಯಿತು.


ಗೋಪಾಲದಾಸರ ಚರಿತ್ರೆಯ ಕುರಿತಾಗಿ, ರಾಣೆಬೆನ್ನೂರಿನಲ್ಲಿ ಮಹಿಳೆಯರಿಗೂ ಸಹ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುಮಾರು 25 ಮಹಿಳೆಯರು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


ಮಕ್ಕಳ ವಿಭಾಗದಲ್ಲಿ ಕುಮಾರಿ ಅಕ್ಷರಾ ಇವರು ಪ್ರಥಮ ಬಹುಮಾನ ಗಳಿಸಿದರು. ಭಾಗವಹಿಸಿದ ಸರ್ವರಿಗೂ ಪುಸ್ತಕ ಹಾಗೂ ಪೆನ್ನು ಬಹುಮಾನ ನೀಡಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top