'ರಾಗ ಧನ ಪಲ್ಲವಿ' ಪ್ರಶಸ್ತಿಗೆ ಗಾಯಕಿ ಪ್ರಜ್ಞಾ ಅಡಿಗ ಆಯ್ಕೆ

Upayuktha
0


ಉಡುಪಿ: ರಾಗಧನ ಪಲ್ಲವಿ ಪ್ರಶಸ್ತಿಗೆ ಉಡುಪಿಯ ಪ್ರಜ್ಞಾ ಅಡಿಗ ಆಯ್ಕೆ ಉಡುಪಿಯ ರಾಗಧನ ಸಂಸ್ಥೆಯ ವತಿಯಿಂದ ನೀಡಲಾಗುವ, ಪ್ರಸಿದ್ಧ ಸಂಶೋಧಕಿ ಡಾ. ಸುಶೀಲಾ ಉಪಾಧ್ಯಾಯ ಅವರ ಸ್ಮರಣಾರ್ಥ, ಡಾ.ಯು.ಪಿ. ಉಪಾಧ್ಯಾಯರು ಸೂಚಿಸಿರುವ ರಾಗ ಧನ ಪಲ್ಲವಿ ಪ್ರಶಸ್ತಿಗೆ, ಈ ಬಾರಿ ಉಡುಪಿಯ ಪ್ರತಿಭಾವಂತ ಗಾಯಕಿ ಪ್ರಜ್ಞಾ ಅಡಿಗ ಆಯ್ಕೆಯಾಗಿರುವರು.


ಫೆಬ್ರವರಿ 7ರಂದು ಶನಿವಾರ ಸಂಜೆ 5:30ಕ್ಕೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 38ನೆಯ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯನ್ನು ಡಾ.ಗಣಪತಿ ಜೋಯಿಸ ಅವರು ಪ್ರದಾನ ಮಾಡಲಿರುವರು. ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀಕಿರಣ್ ಹೆಬ್ಬಾರ್ ಸಭೆಯ ಅಧ್ಯಕ್ಷತೆ ವಹಿಸಲಿರುವರು. ನಂತರ ಪ್ರಜ್ಞಾ ಅಡಿಗ ಅವರ ರಾಗಂ.. ತಾನಂ.. ಪಲ್ಲವಿ.. ಗಾಯನ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top