ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಶ್ರೀಕೃಷ್ಣ ಲೀಲೆ - ಕಂಸ ವಧೆ’ ಇಂಗ್ಲಿಷ್ ತಾಳಮದ್ದಳೆ

Upayuktha
0


ಉಜಿರೆ: ಉಜಿರೆ ಶ್ರೀ ಧ. ಮಂ. ಕಾಲೇಜಿನಲ್ಲಿ ಕಲಾಕೇಂದ್ರದ ಯಕ್ಷಗಾನ ವಿದ್ಯಾರ್ಥಿಗಳಿಂದ ‘ಶ್ರೀಕೃಷ್ಣ ಲೀಲೆ - ಕಂಸ ವಧೆ’ ಇಂಗ್ಲಿಷ್ ತಾಳಮದ್ದಳೆ ಪ್ರಸ್ತುತಿ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಡಿ.31ರಂದು ನಡೆಯಿತು.


ಭಾಗವತಿಕೆಯಲ್ಲಿ ದ್ವಿತೀಯ ಪದವಿ ವಿದ್ಯಾರ್ಥಿನಿ ಸಿಂಚನ ಮೂಡುಕೋಡಿ, ಚೆಂಡೆಯಲ್ಲಿ ಸಂಸ್ಕೃತ ವಿಭಾಗದ ಉಪನ್ಯಾಸಕ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಧನ್ವ ಪಾಲ್ಪಡೆದರು.


ತೃತೀಯ ಪದವಿ ವಿದ್ಯಾರ್ಥಿಗಳಾದ ಮೌಲ್ಯ ಎಸ್. ಜೈನ್ (ಶ್ರೀಕೃಷ್ಣ), ಅಂಕಿತ (ಬಲರಾಮ), ದ್ವಿತೀಯ ಪದವಿ ವಿದ್ಯಾರ್ಥಿಗಳಾದ ಮನಸ್ವಿ (ಪೂತನಿ), ನಿರಂಜನ್ (ಶಕಟ), ಪ್ರಥಮ ಪದವಿ ವಿದ್ಯಾರ್ಥಿಗಳಾದ ಅನನ್ಯ ಶೆಟ್ಟಿ (ಮಾಯಾ ಪೂತನಿ), ತೇಜಸ್ (ವಿಜಯ), ವರುಣ್ (ಕಂಸ) ಅರ್ಥಧಾರಿಗಳಾಗಿದ್ದರು.


ಕಲಾಕೇಂದ್ರದ ಯಕ್ಷಗಾನ ಗುರು ಅರುಣ್ ಕುಮಾರ್ ಧರ್ಮಸ್ಥಳ ತಾಳಮದ್ದಳೆ ನಿರ್ದೇಶಿಸಿದ್ದರು.


ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ., ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ದಿವಾಕರ ಪಟವರ್ಧನ್, ಆಂಗ್ಲ ಭಾಷೆ ವಿಭಾಗ ಮುಖ್ಯಸ್ಥ ಗಜಾನನ ಆರ್. ಭಟ್, ಸಾಂಸ್ಕೃತಿಕ ಸಮಿತಿ ಸಂಯೋಜಕ ಡಾ. ನಾಗಣ್ಣ ಡಿ.ಎ., ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ರತ್ನಾವತಿ, ಉಪನ್ಯಾಸಕರಾದ ಸಚಿನ್ ಹೆಬ್ಬಾರ್, ಡಾ. ಲಕ್ಷ್ಮೀನಾರಾಯಣ ಕೆ.ಎಸ್., ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್., ಇಂಗ್ಲಿಷ್ ಉಪನ್ಯಾಸಕರಾದ ಸೂರ್ಯನಾರಾಯಣ, ದೀಪಕ್ ಶರ್ಮ, ಭಾಗ್ಯಶ್ರೀ ಹಾಗೂ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಿಂಚನ ಸ್ವಾಗತಿಸಿದರು. ಸಿಂಚನ, ಸಾಕ್ಷ, ಶ್ವೇತಾ, ಯಶ್ಮಿತಾ ಪ್ರಾರ್ಥಿಸಿದರು. ಪವಿತ್ರ ಜೈನ್ ನಿರೂಪಿಸಿ, ಅಮೋಘ ಶಂಕರ್ ವಂದಿಸಿದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top