ಧರ್ಮ ಒಂದೇ, ಅದುವೆ ವಿಶ್ವ ಮಾನವ ಧರ್ಮ: ಡಾ ಸುರೇಶ ನೆಗಳಗುಳಿ

Upayuktha
0


ಪಡುಬಿದ್ರಿ: ಕುವೆಂಪು ಜನ್ಮದಿನದ ನೆನಪಿನಲ್ಲಿ ಓ ನನ್ನ ಚೇತನಾ ವಿಚಾರಗೋಷ್ಠಿ, ಕವಿಗೋಷ್ಠಿಯು ಭಾನುವಾರ (ಜ.4) ಪಡುಬಿದ್ರಿಯ ಸುಜ್ಲಾನ್ ಕಾಲೋನಿಯ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.


ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ KSSRAP ಯ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ನಡೆದ ಈ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.


ಅವರು ಕುವೆಂಪು ಅವರ ಬಗ್ಗೆ ಮಾತನಾಡಿ, ವಿಶ್ವ ಮಾನವಧರ್ಮಕ್ಕೆ ಮಿಗಿಲಾದ ಧರ್ಮ ಬೇರೆ ಇಲ್ಲ ಎನ್ನುತ್ತಾ ಸ್ವರಚಿತ ಕವನಗಳನ್ನು ವಾಚಿಸಿದರು. ರಾಣಿ ಪುಷ್ಪಲತಾ ದೇವಿಯವರು ಅಧ್ಯಕ್ಷತೆ ವಹಿಸಿದ್ದು ಕುವೆಂಪು ಅವರ ಬಗೆಗೆ ಸವಿವಾರವಾಗಿ ಮಾತನಾಡಿದರು.


ಸಮಾಜ ಚಿಂತಕ ರಂಜನ್ ಕುಮಾರ್ ಸುಜ್ಲನ್ ನ ನಿರ್ವಸತಿ ಸಂಘ ಅಧ್ಯಕ್ಷ ಜಮಾಲ್, ಶಿಕ್ಷಕಿ ಕವಯಿತ್ರಿ ಶರಣ್ಯ ಬೆಳುವಾಯಿ, nscdf ಅಧ್ಯಕ್ಷ ಗಂಗಾಧರ ಗಾಂಧಿ ಮುಖ್ಯ ಅತಿಥಿಗಳಾಗಿದ್ದರು.


ನಂತರ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಕವಯಿತ್ರಿ ಜ್ಯೋತಿ ಮಹದೇವ್  ವಹಿಸಿದ್ದರು. ಅವರು ಕುವೆಂಪು ಹಾಗೂ ಕಾವ್ಯಗಳ ಕುರಿತು ಮಾತನಾಡಿದರು. ಇದಲ್ಲದೆ ರಾಣಿ ಪುಷ್ಪಲತಾ ದೇವಿಯವರು ನೆಗಳಗುಳಿ ಹಾಗೂ ಜ್ಯೋತಿ ಮಹದೇವ್ ರನ್ನು ಶಾಲು ಹಾರ ಪೇಟ ನೆನಪಿನ ಕಾಣಿಕೆ ಸಹಿತವಾಗಿ ಗೌರವಿಸಿದರು.


ಕವಿಗಳಾದ ಅಶ್ವಿನಿ ಕೊಂಜಾಡಿ, ನಿರೀಕ್ಷಿತ ಮಂಗಳೂರು, ವಾಣಿಶ್ರೀ ಅಶೋಕ್ ಐತಾಳ್, ಕೆ ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ, ಆಂಟೋನಿ ಲೂಯಿಸ್ ಮಣಿಪಾಲ, ಮಾರುತಿ ಕೆ.ಪಿ., ಮಾಲತಿ ರಮೇಶ್ ಕೆಮ್ಮಣ್ಣು, ಅವನೀಶ್ ಐತಾಳ್, ಪಿ. ಆಯಿಷಾ ಪೆರ್ನೆ, ವಿನೋದಾ ಪ್ರಕಾಶ್ ಪಡುಬಿದ್ರಿ, ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ, ಸುಲೋಚನ ನವೀನ್, ತನೀರಾ, ಆತೂರ್ ಸುಮಯ್ಯಾ, ಎಂ ಪಾಟೀಲ್ ದೇರಳಕಟ್ಟೆ, ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ, ಪೂರ್ಣಿಮಾ ಅನಿಲ್‌ ಮಣಿಪಾಲ, ಸ್ಮಿತಾ ಅಶೋಕ್ ಪರ್ಕಳ, ಮಂಡ್ಯ ಅನಾರ್ಕಲಿ ಸಲೀಂ  ಮಂಗಳೂರು, ಗಂಗಾಧರ ಗಾಂಧಿ ಮತ್ತಿತರರು ಕಾವ್ಯವಾಚನ ಮಾಡಿದರು. ರಶ್ಮಿ ಸನಿಲ್ ನಿರೂಪಣೆ ಮಾಡಿದರು. 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top