ಡಾ ಸುರೇಶ ನೆಗಳಗುಳಿ ಇವರಿಗೆ ರಾಷ್ಟ್ರಕವಿಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ

Upayuktha
0


ಕಾಸರಗೋಡು: ಜನಪ್ರಿಯ ವೈದ್ಯ, ಗಝಲ್ ಕವಿ ಶ್ರೇಷ್ಠ, ಸಾಹಿತಿ, ಸಂಘಟಕ, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಡಾ ಸುರೇಶ್ ನೆಗಳಗುಳಿ ಇವರೀಗೆ ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ಜ.18ರಂದು ಕನ್ನಡ ಭವನ ಸಂಕೀರ್ಣದ "ಶ್ರೀ ಕೃಷ್ಣ ದೇವರಾಯ "ವೇದಿಕೆಯಲ್ಲಿ “ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026 ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇವರು 45 ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದು ಈ ಅವಧಿಯಲ್ಲಿ 120 ಕ್ಕೂ ಹೆಚ್ಚು ಚಿತ್ರಕವನ ವಿಜೇತರಾಗಿದ್ದು ತುಷಾರ ಬಿಂದು ಎಂಬ ಸಂಕಲನ ಲೋಕಾರ್ಪಣೆ ಮಾಡಿದ್ದಾರೆ. ಜಯಕಿರಣ ಪತ್ರಿಕೆಯಲ್ಲಿ 100 ಮಿಕ್ಕಿ ಕವನ ಪ್ರಕಟವಾಗಿದ್ದು ಕಾವ್ಯ ಕಿರಣ ಎಂಬ ಸಂಕಲನವನ್ನೂ ಲೋಕಾರ್ಪಣೆ ಮಾಡಿದ್ದಾರೆ.


5 ಗಜಲ್ ಸಂಕಲನ 3 ಮುಕ್ತಕ ಸಂಕಲನ ಸಹ ಹೊರತಂದಿದ್ದಾರೆ. ಬದಲಾಗದವರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಕಸಾಪ ಬಂಟ್ವಾಳ ಸಮ್ಮೇಳನಾಧ್ಯಕ್ಷತೆ ವಹಿಸಿದ ಭಾಗ್ಯ ಇವರದು. ಹಲವು ವೈದ್ಯಕೀಯ ಪ್ರಶಸ್ತಿ ಸಹ ಇವರಿಗೆ ದೊರಕಿದೆ. ಅವುಗಳಲ್ಲಿ ಆಯುರ್ವೇದ ವಿಶ್ವ ರತ್ನ ಹಾಗೂ ಕೊರೋನ ವಾರಿಯರ್ ಪ್ರಮುಖವಾದುದು. ಇವರು ಪ್ರಕೃತ ಮಂಗಳ ಹಾಗೂ ಕಣಚೂರು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top