ಪುತ್ತೂರು: ಶಾಸನ ತಜ್ಞರೂ, ಹಿರಿಯ ಸಾಹಿತಿಗಳೂ ಆಗಿರುವ ಡಾ. ಉಮಾನಾಥ್ ಶೆಣೈ ಅವರು “ಪುತ್ತೂರಿನ ಪುಣ್ಯವಂತರು” ಎಂಬ ಮಹತ್ವದ ಕೃತಿಯ ರಚನೆಗೆ ಮುಂದಾಗಿದ್ದಾರೆ. ಸುಮಾರು ಕ್ರಿ.ಶ. 1900 ರಿಂದ 2000ರವರೆಗೆ ಪುತ್ತೂರು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಯುವಜನತೆಗೆ ಪರಿಚಯಿಸುವುದು ಈ ಕೃತಿಯ ಪ್ರಮುಖ ಉದ್ದೇಶವಾಗಿದೆ.
ಈ ಸಂಬಂಧ ವಿಚಾರ–ವಿಮರ್ಶೆ ಹಾಗೂ ಸಮಾಲೋಚನೆಗಾಗಿ ಡಾ. ಉಮಾನಾಥ್ ಶೆಣೈ ಅವರು ಇಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು
ಡಾ. ಶೆಣೈ ಅವರು ಈವರೆಗೆ ಸುಮಾರು 110 ಪ್ರಾಚೀನ ಶಾಸನಗಳನ್ನು ಅಧ್ಯಯನ ಮಾಡಿದ್ದು, 250ಕ್ಕೂ ಅಧಿಕ ಸಂಶೋಧನಾತ್ಮಕ ಲೇಖನಗಳನ್ನು ರಚಿಸಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಇತಿಹಾಸ, ಬಂಗರ ಇತಿಹಾಸ, ಕಾರ್ಕಳ ಗೊಮ್ಮಟೇಶ್ವರ ಚರಿತ್ರೆ, ತೀರ್ಥಂಕರ ಪುರಾಣ, ಸಾವಿರ ಕಂಬದ ಬಸದಿ, ಹೊಯ್ಸಳ ರಾಜವಂಶದ ಉಗಮಸ್ಥಾನ ಸೇರಿದಂತೆ 25 ಅಮೂಲ್ಯ ಚಾರಿತ್ರಿಕ ಕೃತಿಗಳನ್ನು ಅವರು ರಚಿಸಿದ್ದಾರೆ.
ಮೈಸೂರು ಅರಮನೆ, ಕೊಡಗಿನ ಅರಮನೆ, ಮೂಡಬಿದ್ರೆ ಜೈನ ಮಠದಲ್ಲಿರುವ ಪ್ರಾಚೀನ ತಾಡಪತ್ರಗಳು, ತಮಿಳುನಾಡು ರಾಜ್ಯ ಪತ್ರಾಗಾರದಲ್ಲಿರುವ ದಾಖಲೆಗಳು ಸೇರಿದಂತೆ ಅನೇಕ ಶಾಸನಗಳು, ಗ್ರಂಥಗಳು ಹಾಗೂ ತಾಡಪತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ, ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಹೊಸ ವಿಚಾರಗಳನ್ನು ಬೆಳಕಿಗೆ ತಂದಿರುವ ಗೌರವ ಡಾ. ಉಮಾನಾಥ್ ಶೆಣೈ ಅವರಿಗೆ ಸಲ್ಲುತ್ತದೆ.
ಈ ಕೃತಿಯ ಸಂಗ್ರಹ ಕಾರ್ಯಕ್ಕಾಗಿ, ಪುತ್ತೂರು ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರ ಕುರಿತು ನಿಮಗೆ ಮಾಹಿತಿ ಇದ್ದಲ್ಲಿ ಅಥವಾ ನಿಮ್ಮ ಮನೆಯ ಹಿರಿಯರಿಗೆ ತಿಳಿದಿದ್ದಲ್ಲಿ, ದಯವಿಟ್ಟು ಅವರ ಹೆಸರು, ಸೇವಾ ವಿವರ ಹಾಗೂ ಕುಟುಂಬಸ್ಥರ ಸಂಪರ್ಕ ಸಂಖ್ಯೆಯನ್ನು ಕಳುಹಿಸಿ ಸಹಕರಿಸುವಂತೆ ವಿನಂತಿಸಲಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


