‘ಹನಿಯಾಗಲೇ ಚಿಪ್ಪೊಳಗೆ’ ಕವನ ಸಂಕಲನ ಬಿಡುಗಡೆ

Upayuktha
0

ಕಾವ್ಯ ಖಡ್ಗಕ್ಕಿಂತಲೂ ಹರಿತವಾದದು: ಡಾ. ಜ್ಯೋತಿ ಚೇಳ್ಯಾರು





ಪಣಂಬೂರು: ನಂದನೇಶ್ವರ ದೇವಸ್ಥಾನದ ರಜತಾಂಗಣದಲ್ಲಿರುವ ನಟರಾಜ ರಂಗಸಂಗಮದಲ್ಲಿ ಬಹು ಓದು ಬಳಗ ಮಂಗಳೂರು ಹಾಗೂ ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು ಇವರ ಆಶ್ರಯದಲ್ಲಿ ಎನ್.ಎಂ.ಪಿ.ಟಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎನ್. ಅವರ ಕವನ ಸಂಕಲನ ‘ಹನಿಯಾಗಲೇ ಚಿಪ್ಪೊಳಗೆ’ ಅನ್ನು ಬಿಡುಗಡೆಗೊಳಿಸಲಾಯಿತು.


ಸಮಾರಂಭದಲ್ಲಿ ಮಾತನಾಡಿದ ಲೇಖಕಿ ಡಾ. ಜ್ಯೋತಿ ಚೇಳ್ಯಾರು ಅವರು, “ಕಾವ್ಯ ಖಡ್ಗಕ್ಕಿಂತಲೂ ಹರಿತವಾದದು. ಪ್ರೇಮಸಮಾನವಾದ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಹೇಳಿದರು.


ಪುಸ್ತಕ ವಿಮರ್ಶೆಯನ್ನು ಡಾ. ಆಶಾಲತಾ ಚೇವಾರ್, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಕಾಲೇಜು ಕಾಸರಗೋಡು ಅವರು ನಡೆಸಿ, ಕೃತಿಯಲ್ಲಿನ ಭಾಷಾ ಸೌಂದರ್ಯ, ಭಾವನಾತ್ಮಕ ತೀವ್ರತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ವಿಶ್ಲೇಷಿಸಿದರು.


ಕಾರ್ಯಕ್ರಮದಲ್ಲಿ ಸಾಹಿತಿಗಳು ಹಾಗೂ ಉಪನ್ಯಾಸಕರಾದ ರಘು ಇಡ್ಕಿದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಧರ್ ಎಸ್.ಪಿ., ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನ್ಯಾಯವಾದಿ ಪಿ. ಸಂತೋಷ್ ಐತಾಳ್ (ಕುಳಾಯಿ), ಪ್ರಕಾಶಕರಾದ ಕಲ್ಲೂರು ನಾಗೇಶ್ (ಆಕೃತಿ ಆಶಯ ಪಬ್ಲಿಕೇಷನ್ಸ್, ಮಂಗಳೂರು), ಓಬನಾಥ ಕೆ. ಸಾಲೆತ್ತೂರು (ಸಂಚಾಲಕರು, ಬಹು ಓದು ಬಳಗ ಮಂಗಳೂರು) ಹಾಗೂ ಕೃತಿಕಾರರಾದ  ಸುಬ್ರಹ್ಮಣ್ಯ ಎನ್. ಉಪಸ್ಥಿತರಿದ್ದರು.


ಯಕ್ಷಗಾನ ಕಲಾಮಂಡಳಿ ನವಮಂಗಳೂರು ಇದರ ಅಧ್ಯಕ್ಷ ಸಿ.ಕೆ. ಸದಾಶಿವ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಂಕರನಾರಾಯಣ ಮೈರ್ಪಾಡಿ ಅವರು ನಿರೂಪಿಸಿದರು. ಸವಿತಾ ನಾಯಕ್ ಸ್ವಾಗತಿಸಿದರು. ಓಬನಾಥ ಕೆ. ಸಾಲೆತ್ತೂರು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top