ಕವನ: ಶಿವನ ಧ್ಯಾನ

Upayuktha
0



ನಿನ್ನ ಜಟೆಯಲಿ ಹರಿವ ಗಂಗೆಯ ತಂಪು,

ಹಣೆಬರಹವ ತಿದ್ದುವ ಆ ಬೆಳಗಿನ ಕೆಂಪು ll ೦೧ ll 


ನಂಜುಂಡ ನೀನು ಜಗವ ಕಾಯುವ ದೇವ,

ನಿನ್ನ ಪಾದದಲಿ ಸಿಗಲಿ ನಮಗೆ ಹೊಸ ಜೀವ ll ೦೨ ll 


ಕೈಲಿ ಹಿಡಿದ ತ್ರಿಶೂಲವು ಅಧರ್ಮವ ಅಳಿಸಲಿ,

ಕೊರಳ ಹಾವಿನಂತೆ ಮದ-ಮತ್ಸರಗಳು ಅಡಗಲಿ ll ೦೩ ll 


ನೆಮ್ಮದಿಯ ಹುಡುಕುತ್ತಾ ಬಂದಿರುವೆ ನಿನ್ನ ಬಳಿ,

ಮನದ ಕತ್ತಲ ಸರಿಸಿ ಭಕ್ತಿಯ ಜ್ಯೋತಿಯನು ಬೆಳಗಿ ll ೦೪ ll


ಶಂಖದ ನಾದದಿ ತುಂಬಿರಲಿ ಮೌನದ ಮಾತು,

ನಿನ್ನ ಧ್ಯಾನವೊಂದೇ ಸಾಕು ಕಷ್ಟಗಳ ಮರೆತು ll ೦೫ ll 


ಲಯಕಾರಕ ನೀನು, ನವ ಸೃಷ್ಟಿಯ ಮೂಲ,

ಕರುಣಿಸು ಮಹದೇವ, ಮುನ್ನಡೆಸುವೆ ನೀ ಕಾಲ ll ೦೬ ll


- ಶರಣೆ: ಕುಮಾರಿ ರೂಪಾ ಬಿ. ನಾಟೀಕಾರ

ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top