ಧರ್ಮಯುಕ್ತ ಪೀಳಿಗೆಯನ್ನು ಬೆಳೆಸುವ ಪ್ರಯತ್ನ ಸಮಾಜದಲ್ಲಿ ನಡೆಯಬೇಕು: ರಾಘವೇಶ್ವರ ಶ್ರೀಗಳು

Upayuktha
0



ಪುತ್ತೂರು: ಧರ್ಮಯುಕ್ತವಾದ ಪೀಳಿಗೆಯನ್ನು ಬೆಳೆಸುವ ಪ್ರಯತ್ನ ಸಮಾಜದಲ್ಲಿ ನಡೆಯಬೇಕು. ಮಠ ಸಮಾಜದ ಶಕ್ತಿ ಕೇಂದ್ರವಾಗಿ ಬೆಳೆದು ಬಂದಿದೆ. ಕುಟುಂಬ ಎಂಬುದು ಸಮುಷ್ಠಿಯಿಂದ ಐಕ್ಯಮತ್ಯೆಯಿಂದ ಇರಬೇಕು. ಕುಟುಂಬಕ್ಕೆ ಒಂದೇ ಮನಸ್ಸು ಇದ್ದಾಗ, ಶ್ರೇಯಸ್ಸಾಗುತ್ತದೆ. ಕುಟುಂಬ ಸಾಗುವ ದಾರಿ ತಪ್ಪಾಗಿರದೆ, ಐಕ್ಯಕ್ಕಾಗಿ ಸ್ವಾರ್ಥವನ್ನು ಬಲಿಕೊಡಬೇಕು ಎಂದು ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.


ಪುತ್ತೂರಿನ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನವೀಕೃತ ಶ್ರೀ ರಾಘವೇಶ್ವರ ಭಾರತೀ ಗುರುಕುಲ ಕಟ್ಟಡ ಲೋಕಾರ್ಪಣೆಗೊಳಿಸಿ, ಕುಟುಂಬ ಮಂಗಲ ಕಾರ್ಯಕ್ರಮದ ಸಂದರ್ಭದಲ್ಲಿ  ಆಶೀರ್ವಚನ ನೀಡಿದರು.


ಕುಟುಂಬ ತುಂಡಾಗಿ ಮನಸ್ಸು ಒಡೆದು ಹೋಗುತ್ತಿರುವುದು ದುರಂತವಾಗಿದೆ. ಗಾಯತ್ರಿ ಅನುಗ್ರಹದಿಂದ ಸರಿಯಾದ ನಿರ್ಣಯವನ್ನು ತೆಗೆಕೊಳ್ಳುವ ಪ್ರೇರಣೆ ಲಭಿಸುತ್ತಿದೆ. ಕುಟುಂಬ ಸಮೃದ್ಧವಾಗಿರುವ ಜತೆಗೆ ಶ್ರೇಯಸ್ಸಿನಿಂದ ಬೆಳೆಯಬೇಕು. ಗೋಮಯದ ಗಂಧಕ್ಕೆ ನಾಡಿಗಳು ತೆರೆದುಕೊಳ್ಳುತ್ತದೆ. ಮಕ್ಕಳನ್ನು ಸಂಪತ್ತಾಗಿ ಭಾವಿಸಬೇಕಾಗಿದ್ದು, ಮಕ್ಕಳನ್ನು ಬೆಳೆಸುವುದರಲ್ಲಿ ಕ್ಲೇಷಗಳಿದ್ದರೂ, ಅದು ಸುಖವೆಂದು ಭಾವಿಸಬೇಕು. ಆಚರಣೆಗಳನ್ನು ಪಾಲಿಸುವ ಕಾರ್ಯವಾಗಬೇಕು. ಕುಟುಂಬ ಕ್ಷಯಿಸದೆ, ಬೆಳೆಯಬೇಕು ಎಂದು ತಿಳಿಸಿದರು.


45 ದಂಪತಿಗಳು ಕುಟುಂಬ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಮಕೃಷ್ಣ ಭಟ್ ಕೂಟೇಲು ಪ್ರಸ್ತಾವನೆಗೈದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top