ಕಾಸರಗೋಡು: ಇಲ್ಲಿನ ಡಾ. ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ(ರಿ) ಕಾಸರಗೋಡು ಸಂಸ್ಥೆಯು ಬೆಂಗಳೂರಿನಲ್ಲಿ ವಿನೂತನ ಕಾರ್ಯಕ್ರಮವನ್ನು ನಡೆಸುವ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆಗೈದಿದೆ.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಶೈಲಿಯ ಲಂಬಾಣಿ ನೃತ್ಯ, ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕಲೆ ಯಕ್ಷಗಾನ, ಫೈರ್ ಡ್ಯಾನ್ಸ್, ರಿಂಗ್ ಡಾನ್ಸ್, ಮಡಕೆ ನೃತ್ಯ ಸಮೂಹ ನೃತ್ಯಗಳಿಗೆ ಹೆಜ್ಜೆ ಹಾಕಿದ ಕಲಾವಿದರು ಜನಮನ್ನಣೆಗೆ ಪಾತ್ರರಾದರು. ಕಚುಸಾಪ ಕಾಸರಗೋಡು ಘಟಕದ ಅಧ್ಯಕ್ಷರು ಡಾ.ವಾಣಿಶ್ರೀ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡಗೀತೆ ಹಾಡಿದರು.
ಚುಟುಕು ಸಾಹಿತ್ಯಕ್ಕೆ ನೃತ್ಯ ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸದೊಂದು ಸಾಧನೆ ಗೈದಂತಾಗಿದೆ. ದಿನದಿಂದ ದಿನಕ್ಕೆ ತನ್ನ ಕಾರ್ಯಸಾಧನೆಯ ಮೂಲಕ ಕನ್ನಡದ ನಂ 1 ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಸ್ಥೆಗೆ ಸರಿಸಾಟಿಯೇ ಯಾರಿಲ್ಲ ಎಂಬಂತಾಗಿದೆ.ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಜಯಪುರ ವಿಭಾಗದ ಕಲಾವಿದರು ಹಾಗೂ ಅಂತರಾಷ್ಟ್ರೀಯ ನೃತ್ಯ ಕಲಾವಿದರಾದ ನಾಟ್ಯ ವಿದುಷಿ ಲಕ್ಷೀ ಇವರ ಶಿಷ್ಯೆಯರ ಯಕ್ಷ ನೃತ್ಯ ದಾಖಲೆ, ಸಾಧಕರಾದ ನಿತಾಯ್ ಕೃಷ್ಣ, ದೀಪ್ತಿ, ಭವಿಷ್ಯ, ನಿಶ್ಚಿತ ಸೇರಿದಂತೆ ಹಲವು ಕಲಾವಿದರು ತಾಯಿ ಭುವನೇಶ್ವರಿಗೆ ಕಲಾಸೇವೆ ನೀಡಿ ಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.
ಈ ಸಂದರ್ಭದಲ್ಲಿ ಡಾ. ವಾಣಿಶ್ರೀ ಅವರನ್ನು ಶಾಲು ಪ್ರಶಸ್ತಿ ಪತ್ರ ಗೌರವ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.ಎಲ್ಲಾ ಕಲಾವಿದರಿಗೆ ಪ್ರಶಸ್ತಿ ಪತ್ರ ಸ್ಮರಣಿಕೆಯನ್ನು ನೀಡಿ ಪ್ರಶಂಸಿಸಲಾಯಿತು. ವಿದುಷಿ ಲಕ್ಷ್ಮೀ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಅಭಿರುಚಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ವಿಶೇಷ ದಾಖಲೆ ಸಾಧಕಿ ಕು. ರಕ್ಷಾ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಚುಸಾಪ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಶ್ರೀಕಾಂತ್ ಬೆಂಗಳೂರು, ಮುನಿರಂಗಸ್ವಾಮಿ, ಅಂಜನ್, ಗಂಗಯ್ಯ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


