“ಲೇ ಏನೇ ಬಂದ್ಯಾss....." 3-4 ಬಾರಿ ಕೂಗಿದರೂ ನನ್ನವಳು ಬರ್ಲೇ ಇಲ್ಲ ಬಿಸಿ ಕಾಫಿ ಜೊತೆಗೆ ಅಂತ, ನವೀನ ಜೋರಾಗಿ ಕೂಗಿದ. “ಏನೂss....” ಎನ್ನುತ್ತ ಓಡಿ ಬಂದ ನವೀನನ ಹೆಂಡ್ತಿ ನೂತನ ಅಂದಳು, “ಅಲ್ರೀ ಎಷ್ಟೋ ವರ್ಷ ಆಯ್ತು ಮದುವೆಯಾಗಿ. ಇನ್ನೂ ಅದೇ ರೀತಿ ಕೂಗ್ತಿದ್ದಿರಾss......”.
“ಮತ್ತಿನ್ನೇನು ಮಾಡ್ಲೇ?". 30 ವರ್ಷದ ಹಿಂದೆ, ಆ ವರ್ಷದ ಕೊನೇಲಿ ಮದುವೆ ಆದೇ. ಆ ಹಳೆಯ ವರ್ಷ ಮಾತ್ರ ಬೆಳಗಿನ ಕಾಫಿ-ತಿಂಡಿ, ಮಧ್ಯಾಹ್ನದ ಅಡುಗೆ ಮಾಡಿ, ರಾತ್ರಿಗೂ ಇಟ್ಟೆ. ಪಾಪ ಹೊಸದಾಗಿ ಮದ್ವೆಯಾಗಿ ಬಂದವಳೂಂತ. ಮದ್ವೆ ಆದ ಹೊಸ ವರ್ಷದಿಂದ, ನೀನೇ ಎಲ್ಲಾ ಚಾರ್ಜ್ ತಗೋತೀನಿ ಅಂದವ್ಳು, ಇನ್ನೂ ತಗೊಂಡೇ ಇಲ್ಲ. ಪ್ರತೀವರ್ಷ ಹೊಸದಾಗಿ ಬರ್ತಿರೋವಾಗ, ಆ ವರ್ಷವಾದರೂ ನೀನೇ ಕಾಫಿ ಕೊಡ್ತಿಯೇನೋ ಅಂತ ಅಪಾರ ಆಸೆ ನಿರೀಕ್ಷೆ ಕುತೂಹಲದ ಕನಸು ಕಂಡ್ರೆ......ಅದಾಗ್ಲೇ ಇಲ್ಲಾ!. ಕೊನೆಗೆ ನಿನ್ನ ಹೆಸರು ಕರೆಯದಲ್ಲಾದ್ರೂ, ನಾ ಜೋರಾಗಿ ಇಲ್ದೇ ಇದ್ರೇ, ಅಕ್ಕಪಕ್ಕದವರು ಕೇಳ್ಲೀ ಅಂತ ನಾ ಕೂಗ್ದೇ ಇದ್ರೆ, ನನ್ನ ಅವರೆಲ್ಲಾ ಹೆನ್‍ಪೆಕ್ಡ್ ಹಸ್ಬೆಂಡ್ ಅನ್ನೋಲ್ವೇನೇ...?. ಇದು ಒಂದು ಮನೆ ಕಥೆ.
ಇನ್ನೊಂದು ಮನೇಲಿ ಇಣುಕಿದ್ರೆ, ನನ್ನ ಗೆಳೆಯ ಮನಸ್ ಹೇಳ್ತಿದ್ದ. “ಛೇ ಕಳೆದ ವಷರ್À ಇಡೀ ಡೈರಿ (ದಿನಚರಿ) ಬರಿಯೋಣ ಅನ್ಕೊಂಡೆ. ಅದಾಗಲೇ ಇಲ್ಲಾ. ಪ್ರತೀದಿನ ಬೆಳಗಿನ ಜಾವ ಎದ್ದುಕೂಡ್ಲೇ, ಒಂದು ಪುಟದಲ್ಲಿ ಅಂದು ಮಾಡಿ ಮುಗಿಸಬೇಕಾದ ಕೆಲಸಗಳ ಪಟ್ಟಿ ಮಾಡ್ತೀನಿ; ಅಂದಂದೇ ಒಂದೊಂದೇ ಕೆಲಸ ಆದಕೊಡ್ಲೆ, ಪಟ್ಟೀಲಿ ಅದನ್ನು ಕಾಟು ಹಾಕ್ತೀನಿ; ಹಾಗೇ ರಾತ್ರೀ ಮಲಗೋಕೆ ಮೊದ್ಲು, ಅಂದಂದು ಆ ಪಟ್ಟೀಲಿ ಮಾಡದೇ ಉಳಿದ ಕೆಲಸಗಳ ಪಟ್ಟಿ ಮಾಡ್ತಿನಿ; ಅದ್ಯಾಕೆ ಅವತ್ತೇ ಆಗಲ್ಲಿಲ್ಲ ಅಂತ ಯೋಚಿಸ್ತೀನಿ; ಅಂದಂದಿನ ಜಮಾ-ಖರ್ಚು ಬರೆದು, ನನ್ನ ಸಂಬಳದಲ್ಲಿ ಏನಾದರೂ ಉಳೀತಿದೆಯಾ?. ಸರಾಸರಿ ಖರ್ಚಿಗಿಂತ ಹೆಚ್ಚು ಖರ್ಚಾಗ್ತಿದೆಯಾ, ಪರಿಶೀಲಿಸ್ತೀನಿ ಅಂದ್ಕೊಂಡೆ ಮಾರಾಯ. ಆದ್ರೆ ಆಫೀಸ್ ಕೆಲಸ, ಮನೆ ಜವಾಬ್ದಾರಿ, ಹೆಂಡ್ತಿ-ಮಕ್ಕಳ ಕೆಲಸದಲ್ಲಿ, ಪಟ್ಟಿ ಬರೆಯೋಕೂ ಅಗ್ಲಿಲ್ಲ. ಉಳಿಕೆ ಕೆಲಸದಲಿಸ್ಟೂ ಆಗ್ಲಿಲ್ಲ. ಏನಾದ್ರೂ ಆಗ್ಲಿ, 2025ನೇ ವರ್ಷದ ಡಿಸೆಂಬರ್-31 ಬಂದು ಹೋಯಿತು. ಈ ವರ್ಷ 2025 ಮುಗಿದಿದೆ. 2026ರ ಜನವರಿ-1ರಿಂದ ಈ ಕೆಲಸ ಖಂಡಿತ ಮಾಡೇ ಮಾಡ್ತೀನಿ”.
ಇನ್ನೊಬ್ಬ ಗೆಳೆಯ ಆರೋಗ್ಯರಾಜ್ ಯೋಚನಾಲಹರಿ ಹೀಗಿತ್ತು. “ದಿನಾ 2 ಪ್ಯಾಕ್ ಸಿಗರೇಟ್ ಸೇದಿ ಸೇದಿ ಹೊಗೆ ಎಳೆದಿದೀನಿ. ಎಲ್ಲಾ ಬೈತೀದಾರೆ. ತಾತ-ಅಜ್ಜಿ, ಅಪ್ಪ-ಅಮ್ಮ ಯಾರ ಮಾತೂ ಕೇಳ್ಲಿಲ್ಲ. ಹೆಂಡ್ತಿ ಅಂತೂ ಸಿಗರೇಟು ಸೇದಿ ಅದರ ವಾಸನೆ ಇದ್ರೆ, ನನ್ನ ಹತ್ರ ಬರ್ಬೇಡಿ ಅಂತ ಪ್ರತಿ ರಾತ್ರಿ ಜಗಳಾಡಿ ಅತ್ತು ಮಲಗ್ತಾಳೆ. ನನ್ನ ಪುಟ್ಟ ಬೇಬಿ ಸಹ ಹೇಳುತ್ತೆ. ಅಪ್ಪ ಟಿ.ವೀ.ಲಿ, ರೇಡಿಯೋಲಿ ಪದೇ ಪದೇ ಹೇಳ್ತಾರೆ 'ಧೂಮಪಾನ ಆರೋಗ್ಯಕ್ಕೆ ಹಾನಿಕಾರ' ಅಂತ. ಬಿಟ್ಟು ಬಿಡಪಾ ನನ್ನ ಪ್ರೀತಿ ಲವ್ಲಿ ಅಪ್ಪಾ ಅಂತ”. ಹೆಂಡ್ತಿ-ಮಗಳ ಮಾತು ಕೇಳಿದಾಗ ಹಾಳಾದ್ದು ಬಿಟ್ಟು ಬಿಡೋಣ ಅಂತ ಮಾಡಿದ ಪ್ರಮಾಣ, ಕೆಲಸದ ಒತ್ತಡ, ಆಯಾಸ ಹಣದ ಮುಗ್ಗಟ್ಟು, ನಿದ್ರೆ ಬರದಿದ್ದಾಗ, ಒಬ್ಬನೇ ಮನೆ ಹೊರಗಿದ್ದಾಗ, ಫ್ರೆಂಡ್ಸ್ ಜೋತೆ ಇದ್ದಾಗ, ಪದೇ ಪದೇ ಉಲ್ಲಂಘನೆ ಆಗುತ್ತೆ. ನಾನೂ 10 ವರ್ಷದಿಂದ ಪ್ರತೀ ಡಿಸೆಂಬರ್-31ರ ರಾತ್ರಿ ನಿರ್ಧಾರ ಮಾಡಿ ಬಿಡ್ತಿದೀನಿ. ನಾಳೆ ಜನವರಿ-1ರಿಂದ ಖಂಡಿತ ಬಿಟ್ಟೆ ಅಂತ. ಜನವರಿ-1 ಬರ್ತಿದ್ದ ಹಾಗೇ, ಆ ಸಿಗರೇಟು ಸುಂದರಿ ನನ್ನ ಹತ್ರ ಬಾ ನನ್ನ ಎತ್ಕೋ ಅಂತ, ಮನೆ ಮೂಲೇಲಿರೋ ಪುಟ್ಟ ಅಂಗಡಿ ಗಾಜಿನ ಡಬ್ಬಿಯೊಳಗಿಂದ ಕರೀತಾಳೆ. ಹೂಂ......ಪಾನ್ ಅಂಗಡಿ ಬಾಬು ಅಂಗಡಿ ಮುಂದೆ ಹೋದಾಗಲೆಲ್ಲ ಅಲ್ಲಿರೋ ಸಿಗರೇಟ್ ಪ್ಯಾಕ್, ಅದೂ ನನ್ನ ಬ್ರ್ಯಾಂಡ್ ಕಂಡಾಗ ಕಣ್ಣರಳುತ್ತೆ; ಮನ ಬಯಸುತ್ತೆ. ಏನಾದರೂ ಆಗ್ಲಿ 2021, ಜನವರಿ-1ರಿಂದ ಈ ಚಟದಿಂದ ನಾ ಹೊರಬರ್ಲೇ ಬೇಕು ಅಂತ ಪ್ರತೀವರ್ಷ ಹೊಸ ಪ್ರಮಾಣ ಮಾಡ್ತಿದ್ದೆ. ಆದರೆ 2021, ಜನವರಿ ಹೋಗಿ, 2026 ಜನವರಿ-1 ಬಂದ್ರೂ ಈ ಸಂಕಲ್ಪ ನೆರವೇರಲಿಲ್ಲ!”.
ಪ್ರಿಯಾ ಅಂದ್ಕೋತಿದ್ಲು. “ನಾನ್ಯಾಕೆ ಹೀಗೆ? ನನ್ನ ಗಂಡ ಎಷ್ಟೋ ಪ್ರೀತಿಯಿಂದ ಕೇಳಿಕೊಂಡ್ರೂ ನನಗೆ ವಾರಕ್ಕೆ 2 ಸಿನಿಮಾ ನೋಡೋ ರೂಢಿ ಬಿಡೋಕಾಗ್ತಿಲ್ಲ. ಗೆಳತಿಯರ ಜೊತೆ ಹೋಗಿ ಸಿನಿಮಾ ನೋಡಿ ಬರದಿದ್ರೆ ಆಗೋದಿಲ್ಲ. 2026ರ ಜನವರಿಯಿಂದಾದ್ರೂ ಚಟ ಬಿಡ್ರಿ ಹೆಚ್ಚು ದುಂದು ಖರ್ಚು ಮಾಡ್ತಿ ಅನ್ನೋ ಗಂಡ ಸುರೇಶನ ಮಾತು ನಡೆಯುತ್ತೇನೋ ನೋಡೋಣ”.
ಈ ಮನೆ ಲಕ್ಷ್ಮೀಪತಿದು. ಅವನ ಹೆಂಡ್ತಿ ಹೆಸರು ಧನಲಕ್ಷ್ಮಿ. ಹೆಸರಲ್ಲಿ ಮಾತ್ರ ಲಕ್ಷ್ಮಿ. ಜೀವನದಲ್ಲಿ ಸರಸ್ವತಿ. ಕೃಪೆ ಅಪಾರ. ಮನೇಲಿರೋ ಕಲ್ಪನಾ ಸುಹಾಸರಿಗೆ ಮಾಲ್-ಮಾರ್ಕೆಟ್ ಸುತ್ತಿ ಏನೇನೋ ಕೊಂಡುಕೋಳ್ಳೋಕೆ ಬಲು ಖುಷಿ. ಆದರೆ ಅವರ ಅಪ್ಪಾ ಕೈ ತುಂಬಾ ದುಡ್ಡು ಕೊಡ್ತಿಲ್ಲ. ಪ್ರತೀದಿನ ತಂದೆ-ಮಗಳಿಗೆ ಇದೇ ಮನಸ್ತಾಪ. ಮಕ್ಕಳಿಗೆ ದಿನಾ ದುಡ್ಡು ಬೇಕು; ಅಪ್ಪಾ ಕೊಡೊಲ್ಲ ಅಂದ್ರೆ, ಅವನ ಹತ್ತಿರ ಇವರಿಗೆ ಕೊಡೋಕೆ ದುಡ್ಡಿಲ್ಲ. 2026 ಹೊಸ ವರ್ಷದಿಂದ ಈ ಜಂಜಾಟ ಬೇಡ, ನಿಲ್ಲಿಸೋಣ ಅಂತ ಅಪ್ಪ-ಮಗಳು ಯೋಚಿಸ್ತಿದ್ರು. ಪ್ರತೀದಿನ ಆಗ್ತಿದ್ದ ಈ ಮನಸ್ತಾಪ, ಕರೋನಾ ಬಂದಾಗಿಂದ ದಿಢೀರ್ ನಿಂತು ಹೋಯ್ತು. ಅವರೆ ಬದಲಾದ್ರು ಅನ್ನೋ ಕಾರಣಕ್ಕಲ್ಲ!. 'ಕರೋನಾ; ಬಂದು ಮಾಲ್-ಮಾರ್ಕೆಟ್ ತನ್ನಿಂದ ತಾನೇ ಮುಚ್ಚಿ ಹೋಯ್ತು ಅನ್ನೋ ಕಾರಣಕ್ಕೆ.
“ರೀ......100 ರೂಪಾಯಿ ಸಾಲ ಕೊಡ್ರಿ. ಮುಂದಿನ ವಾರ, ತಪ್ಪಿದ್ರೆ ಮುಂದಿನ ತಿಂಗಳು ವಾಪಸ್ ಕೊಡ್ತೀನಿ. ಖಂಡಿತ ಅಂತ ಸಾಲ ಕೇಳ್ತಿದ್ದ ಸಾಮಂತ. ಇವನ ಕಾಟ ತಪ್ಪಿಸಿಕೊಳ್ಲೋದು ಹೇಗೆ ಅಂತ ಅವನ್ನ ಬಲ್ಲವರು ಯೋಚಿಸ್ತಿದ್ರು. ಕೊಟ್ಟವರು ವಾಪಸ್ ಆಗದ ಸಾಲದಿಂದ ಬಳಲಿ ಬೆಂಡಾಗಿ, ಈ ವರ್ಷ 2026, ಜನವರಿ-1ರಿಂದ ಯಾರಿಗೂ ಸಾಲ ಕೊಡಲ್ಲ ಅಂತ ಕಠಿಣ ನಿರ್ಧಾರ ಮಾಡಿದ್ರು. ಸಾಲ ಕೇಳಿ ಕೇಳಿ ಸುಸ್ತಾಗಿ ಸಾಮಂತ 2026, ಜನವರಿ-1ರಿಂದ ಸಾಲ ಕೇಳೋದನ್ನೇ ಬಿಟ್ಟುಬಿಡ್ತೀನಿ ಅಂತ ಸಂಕಲ್ಪ ಮಾಡಿದ.
“ನೀ ಹೀಗೆ ಮಾಡ್ತಿ, ನಾ ಹಾಗೆ ಮಾಡ್ತೀನಿ” ಅಂತ ಪ್ರತೀದಿನ ಕಿತ್ತಾಡ್ತಿದ್ದರು ಹೊಸದಾಗಿ ಮದುವೆಯಾದ ಅರುಣ-ರಾಣಿ. ಜಗಳಾಡಬಾರದು ಅಂದ್ಕೊಂಡು ಮನಸ್ಸೊಳಗೇ ಅಂದ್ಕೊಡಿದ್ದರು ಇಬ್ಬರೂ. ನೋಡಿದ ಸಿನಿಮಾಗಳಲ್ಲಿಯ ನಾಯಕ-ನಾಯಕಿ, ಓದಿದ ಕಾದಂಬರಿಗಳ ನಾಯಕ-ನಾಯಕಿ, ಕಂಡ ರಂಗನಾಟಕಗಳು, ಕೇಳಿದ ರೇಡಿಯೋ ನಾಟಕಗಳ ಹೀರೋ-ಹೀರೋಯಿನ್ನರ ಶೃಂಗಾರದ ಲವ್ ಸ್ಟೋರಿ ಕೇಳಿ, ತಾವೂ ಹಾಗೇ ಸಾಯುವ ತನಕ ಅಮರ ಪ್ರೇಮಿಗಳಾಗಿ ಇರಬೇಕು, ಅಂದ್ಕೋಡಿದ್ದರು. ಮದುವೆಗೆ ಮೊದಲು ಹೇಳಿದ್ದನ್ನೆಲ್ಲಾ ಎದುರು ವಾದಿಸದೇ ಕೇಳಿ ಪಾಲಿಸ್ತಿದ್ದ ಲವರ್ಸ್, ಗಂಡ-ಹೆಂಡ್ತಿ ಆದ ಕೂಡ್ಲೇ, ಅಹಂನಿಂದ, ಅಜ್ಞಾನದಿಂದ, ಮೇಲರಿಮೆ ಯಿಂದ “ನಾನ್ಯಾಕೆ ಅವನ / ಅವಳ ಮಾತು ಕೇಳ್ಲಿ! ಅವನೇ / ಅವಳೇ ನನ್ನ ಮಾತು ಕೇಳ್ಲಿ” ಅಂತ ಲೆಕ್ಕಾ ಹಾಕೋದಾ!. ತಗ್ಗಿ ಬಗ್ಗಿ ಹೊಂದಾಣಿಕೆ ಮಾಡಿಕೊಳ್ಳದೇ, ಸಣ್ಣ ಸಣ್ಣ ದಿನನಿತ್ಯದ ವಿಷಯಗಳಿಗೂ ರೇಗಾಟ-ಕೂಗಾಟ-ಚೀರಾಟ!, ಬೈಯೋದು-ಹೊಡೆಯೋದು, ಸಾಮಾನುಗಳನ್ನು ಎಸೆಯೋದು, ಒಡೆಯೋದು ಮಾಡ್ತಾನೇ ಇದ್ರು. ಮಾಡೋದು ಮಾಡಿ, ಆಮೇಲೆ ತನ್ನ ಯೋಚನೆ ಚಿಂತನೆಗಳಲ್ಲಿ ತನ್ನದೇ ತಪ್ಪು ಅಂತ ತಿಳಿದಾಗ, ಇನ್ನು ಈ ತಪ್ಪು ಮಾಡೊಲ್ಲ ಅಂದ್ಕೋಳ್ಳೋವರು. ಆದ್ರೆ ಇಬ್ಬರೂ ಮಾತಾಡಿದಾಗ, ಮಾತು ನಿಲ್ಲಿಸಿ, ಮಾತಾಡದೆ 2-3 ದಿನದ ಮೇಲೆ ಮಾತಾಡಿದಾಗಲೂ, ತಪ್ಪುಗಳನ್ನೇ ಹುಡುಕೋ ಮನೋಭಾವದಲ್ಲಿ, ಮತ್ತೆ ಜಗಳ, ಮಾತು ಬೀಡೋದು, ಕದನ ವಿರಾಮ-ಸಂದಾನ ಮತ್ತೆ ಜಗಳ, ಪದೇ ಪದೇ ಆಯ್ತು. ಒಬ್ಬರ ಮುಖ ಇನ್ನೊಬ್ಬರು ನೋಡದ ಹಾಗಾಗಿತ್ತು.
ಹೊಂದಿಕೊಂಡು ಅತ್ಯಂತ ಪ್ರೀತಿಯಿಂದ, ಜಗಳಾಡದೇ ಇರಬೇಕೆಂಬ ಜನವರಿ ಒಂದರ ಇವರ ಸಂಕಲ್ಪ ನೆರವೇರಲೇ ಇಲ್ಲ. ಎಷ್ಟು ದಿನ ತವರು ಮನೆಯವ್ರು, ಸ್ನೇಹಿತರು ಆಗ್ತಾರೆ?. ಅಂತಿಮವಾಗಿ “ನನಗೆ ನೀನೇ, ನಿನಗೆ ನಾನೇ” ಅನ್ನೋ ಸೂತ್ರ ಅರಿವಾಗೋಕೆ ಒಂದು ಸಂದರ್ಭ ಬೇಕಿತ್ತು. ಈ 'ಕರೋನಾ' ಟೈಂನಲ್ಲಿ ಬಂದು ಮನೇಗೇ ಇವರು ಸೀಮಿತರಾದಾಗ, ಕೈಲಿ ದುಡ್ಡು ಓಡಾಡದೇ ಇದ್ದಾಗ, ಗಂಡನಿಗೆ-ಹೆಂಡತಿ, ಹೆಂಡತಿಗೆ-ಗಂಡ ಮೊದಲಿನ ಹಾಗೆ ಕೋತಿ-ನಾಯಿ ತರಹ ಕಾಣದೇ, ಸುಂದರವಾಗಿ ಕಂಡ್ರು. 'ಕರೋನಾ' ಭೀತಿ, ಹೊರಗೆ ದೇಶದಲ್ಲಿದ್ದ ಅನಿವಾರ್ಯ ಪರಿಸ್ಥಿತಿ ಒಂದೇ ಮನೆಯಲ್ಲಿ ಹೆಚ್ಚು ಹೊತ್ತು ಕಳೆಯಬೇಕಾದ ಇವರಿಬ್ಬರಲ್ಲೂ ಹೊಂದಾಣಿಕೆ ತಂದು, ಆತ್ಮೀಯತೆಯ ಮಾರ್ಗ ತೆರೀತಾ ಇದೆ.
ಡಾಂ ಡೂಂ ಖರ್ಚು ಮಾಡ್ತಿದ್ದ ಸಾಫ್ಟ್‍ವೇರ್ ಗಂಡ ಮತ್ತು ಸಾಫ್ಟ್‍ವೇರ್ ಹೆಂಡತಿ ಫ್ಲಾಟ್, ಕಾರ್. ಫ್ರಿಜ್, ಬಹಳ ಬೆಲೆ ಬಾಳೋ ಟಿ.ವಿ. ಎಲ್ಲಾ ಒಟ್ಟಿಗೆ ಕಂತಿನಲ್ಲಿ ಕೊಂಡರು. ತಿಂಗಳ ಇ.ಎಮ್.ಐ ಕಟ್ಟಲು ಸಂಬಳದ ಬಹುಭಾಗ ಹೋಗ್ತಿತ್ತು. 2026ರ ಜನವರಿ-1ರಿಂದ ಹೊಸ ಸಾಲ ಬೇಡ, ಇರೋ ಸಾಲ ತೀರಿಸಿದ್ರೆ ಸಾಕು ಅಂತ ಸಂಕಲ್ಪ ಮಾಡಿದ್ರು. ಅದು ಆಗಲೇ ಇಲ್ಲ. ಕಂಡದ್ದೆಲ್ಲಾ ಬೇಕು. ಟಿ.ವಿ. ಜಾಹೀರಾತು ನೋಡಿ ನೋಡಿ ಎಲ್ಲಾ ಕೊಳ್ಳಬೇಕು ಸಂಸ್ಕøತಿ ಮುಂದುವರಿಯಿತು. 'ಕರೋನಾ' ಬಂತು ನೋಡಿ! ಕರೋನಾ ಬಂದ ಸಮಯದಲ್ಲಿ ಇ.ಎಮ್.ಐ ಕಟ್ಟೋಕೆ ಸಂಬಳಾನೇ ಇರಲಿಲ್ಲ. ಎಷ್ಟೋ ಜನರ ಕೆಲಸ ಹೋಯ್ತು. 300 ಜನ ಸಾಕು ಅಂತ. ಎಷ್ಟೋ ಜನರ ಸಂಬಳ ಳಿ, ¼ ಭಾಗ ಆಯ್ತು. ಕೆಲಸ ಹೋದವು. ಫ್ಲಾಟ್, ಕಾರ್‍ಗಳಿಗೆ ಇ.ಎಮ್.ಐ. ಕಟ್ಟಲಾಗದೇ ಮಾರಿಬಿಡೋಣ ಅದ್ಕೊಂಡ್ರು. ಈಗ ಇವನ್ನ ಕೊಳ್ಳೋಕೆ ಯಾರ ಕೈಲಿ ದುಡ್ಡಿದೆ?, ಇವರು ಕಂತು ಕಟ್ಟಬೇಕಾದ ಅಂಗಡಿ-ಏಜೆನ್ಸಿಗಳ ಫೋನ್ ವಸೂಲಾತಿ ಜನರಿಂದ ತಪ್ಪಿಸಿಕೊಂಡು ಓಡಾಡ್ತಿದಾರೆ!.
ಪ್ರವಾಸಿ ಸಂಸ್ಥೆ ಇಟ್ಟ ರಮಾ-ಉಮೇಶ್ ಕೋಟ್ಯಾವಧಿ ರೂ.ಗಳಷ್ಷು ಸ್ಪದೇಶಿ-ವಿದೇಶಿ ವಿಮಾನಯಾನದ ಟಿಕೇಟುಗಳನ್ನು ಕೊಟ್ಟಿದ್ರು. 'ಕರೋನಾ'ದಿಂದ ವಿದೇಶದಿಂದ ಬರೋ, ಭಾರತದಿಂದ ವಿದೇಶಗಳಿಗೆ ಹೋಗೋ, ದೇಶದಲ್ಲೇ ಓಡಾಡೋ ವಿಮಾನಯಾನ ನಿಂತು ಹೋಗಿ, ಕರೋನಾದಿಂದ ಪ್ರವಾಸಿ ಸಂಸ್ಥೆಗಳು ಮುಳುಗಿ ಹೋದವು. ಇವರ ಸಂಸ್ಥೆಯವರಿಗೆ ದಿನಾ ಕ್ಯಾಶ್ ಲಕ್ಷ ಲಕ್ಷ ಬರ್ತಿತ್ತು. 'ಕರೋನಾ' ಆಘಾತದಿಂದ ಪೂರ್ತಿ ಇವರು ಮುಳುಗಿದ್ರು. ಇಲ್ಲಿಂದ ವಿದೇಶಕ್ಕೆ ಹೋಗಿ, 3-6 ತಿಂಗಳ ನಂತರದ ರಿಟರ್ನ್ ಟಿಕೇಟ್ ಹೊಂದಿದವರು ಅಲ್ಲೇ ನಿಲ್ಲಬೇಕಾಯ್ತು. ಅಲ್ಲಿಂದ ಭಾರತಕ್ಕೆ ಬಂದು ವಿದೇಶಗಳಿಗೆ ವಾಪಸ್ ಹೋಗಬೇಕಾದವ್ರು ಇಲ್ಲೇ ನಿಂತರು. ಆಗ ಪ್ರವಾಸಿ ಸಂಸ್ಥೆಗಳ ಪ್ರಯಾಣಿಕರ ಕೋಟ್ಯಾವಧಿ ಹಣ ವಿಮಾನಯಾನ ಸಂಸ್ಥೆಗಳಲ್ಲಿ ಉಳಿಯಿತು. ಹೆಚ್ಚು ರಾಷ್ಟ್ರೀಯ-ಅಂತರ್‍ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಬೆಂಗಳೂರು, ಚೆನ್ನೈ, ಮುಂಬೈ ಕಛೇರಿಗಳು ಬಾಗಿಲು ಹಾಕಿ, ಸಿಬ್ಬಂದಿಯನ್ನು ಮನೆಗೆ ಕಳುಹಿಸಿದ್ದರಿಂದ ಅವರ ಸಂಪರ್ಕ ಸಿಗದಾಯಿತು. ಮಧ್ಯದಲ್ಲಿ ಟಿಕೇಟ್ ಕೊಟ್ಟ ಪ್ರವಾಸಿ ಸಂಸ್ಥೆಗೇ ವಿಮಾನಯಾನ ಕಛೇರಿ, ಪ್ಯಾಕೇಜ್ ಸಂಸ್ಥೆಗಳು ಸಂಪರ್ಕಕ್ಕೇ ಸಿಗಲಿಲ್ಲ. ಪ್ರಯಾಣಿಕರು ಮಾತ್ರ ಇವರಿಗೆ ಫೋನ್ ಮೇಲೆ ಫೋನ್ ಮಾಡಿ, “6 ತಿಂಗಳ ನಂತರ, ಮುಂದಿನ ವರ್ಷದ ಈ ದಿನ ಆ ದಿನ ಟಿಕೆಟ್ ಗ್ಯಾರಂಟಿ ಕೊಡ್ತೀರಾ?” ಅಂತ ಕೇಳೋದು ತಪ್ಪಲಿಲ್ಲ. “ಹೋಗಿ ಬರೋ ಜೋಡಿ ಟಿಕೆಟ್ಟಲ್ಲಿ ಹೋಗಿದೀವಿ. ಬರೋಕೆ ಆಗ್ತಿಲ್ಲ. ರೀಫಂಡ್ ಕೊಡ್ತೀರಾ?”. “ನಮಗೆ ರೀಫಂಡ್ ಅಥವಾ ವಾಪಸ್ ಪ್ರಯಾಣದ ಖಾತ್ರಿ ಬಗ್ಗೆ ಪತ್ರ-ಟಿಕೆಟ್ ಕೊಡ್ತೀರಾ” ಅಂತೆಲ್ಲಾ ಪೀಡಿಸ್ತಿದಾರೆ. ಈಗಾಗಲೇ ಅಪಾರ ಹಣ ಕಳೆದುಕೊಂಡ ಈ ದಂಪತಿಗಳು ಸುಸ್ತಾಗಿದ್ದಾರೆ. 15 ಲಕ್ಷದಷ್ಟು ಪ್ರಯಾಣ ಕ್ಯಾನ್ನಲ್ ಆದವರ ರೀಫಂಡ್ ಬರದೇ, ಸಂಪರ್ಕಕ್ಕೆ ಸಿಕ್ಕದ ವಿಮಾನಯಾನ ಸಂಸ್ಥೆ, ಪ್ಯಾಕೇಜ್ ಸಂಸ್ಥೆ, ಈ ಕಾರಣದಿಂದ ಸಾಲದ ಮೇಲೆ ಟಿಕೆಟ್ ಕೊಟ್ಟ ತಪ್ಪಿಗೆ, ಮತ್ತಷ್ಟು ಹಣ ಕಳೆದುಕೊಂಡು, 'ಕರೋನಾ' ಅವಧೀಲಿ ಇನ್ನಷ್ಟು ಸುಸ್ತಾಗಿದ್ದಾರೆ. ಅವರ 2026ರ ನೂತನ ವರ್ಷದ ಸಂಕಲ್ಪ, ಇನ್ನು ಯಾರಿಗೂ ಅಡಿeಜiಣ ಮೇಲೆ ಟಿಕೇಟು ಕೊಡಬಾರದು. ಬಾಯಿ ಮುಚ್ಚಿಕೊಂಡು 30 ವರ್ಷಗಳಿಂದ ನಡೆಸ್ತಿದ್ದ ಪ್ರವಾಸ ಸಂಸ್ಥೆ ಬಾಗಿಲು ಹಾಕಿ, “ಮುಂದಿನ ಮಹಾ ಐoss ದಿಂದ ತಪ್ಪಿಸಿಕೊಳ್ಳೋಣ” ಅಂತ, ದಿಢೀರಾಗಿ ಪ್ರವಾಸಿ ಸಂಸ್ಥೆ ಬಾಗಿಲು ಹಾಕಿದರು. ಇನ್ನು ಜನ್ಮಜನ್ಮಕ್ಕೂ ಯಾರಿಗೂ ಸಾಲ ಕೊಡಬಾರದು ಅಂತ ಸಂಕಲ್ಪ ಮಾಡಿದ್ದಾರೆ. ಸಾಲ ಕೊಟ್ಟವರ ಕಿರಿಕಿರಿ ನೆನೆದು ಸಾಕಪ್ಪಾ ಜೀವನ ಅನಿಸಿಬಿಟ್ಟಿದೆ. ಆದ್ದರಿಂದ ಬಹಳಷ್ಟು ಪ್ರವಾಸಿ ಸಂಸ್ಥೆಗಳ 2026ನೇ ವರ್ಷದ ಸಂಕಲ್ಪ ಏನೆಂದರೆ ಯಾರಿಗೂ ಟಿಕೇಟ್‍ನ್ನು Creditನಲ್ಲಿ ಕೊಡಬಾರದು.
ಈ ಸಂದರ್ಭದಲ್ಲಿ ವಿವಿಧ ಜನರ ಅನಿವಾರ್ಯ ಸಂಕಲ್ಪಗಳು ಈ ಕೆಳಗಿನಂತೆ ಆಗಲೇಬೇಕಾಗಿವೆ.
1. ಮನೆ ಹೊರಗೆ ಪಿರಿಪಿರಿ ಸುತ್ತೋಲ್ಲ.
2. ಮಕ್ಕಳು, 60 ವರ್ಷದ ಮೇಲ್ಪಟ್ಟವರು ಆರೋಗ್ಯ ವಿಚಾರದಲ್ಲಿ ಜಾಗರೂತೆಯಿಂದ ಇರ್ತೀವಿ.
3. ಜನಸಂದಣಿ ಇರುವ ಪ್ರದೇಶ, ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭಗಳಲ್ಲಿ ಮಾಸ್ಕ್ ಹಾಕ್ಕೊಂಡೇ ಹೋಗ್ತೀವಿ.
4 ಅಂಗಡಿ, ಕಛೇರಿ, ಬೇರೇವ್ರ ಮನೆಗೆ ಹೋದ್ರೆ, ಅಲ್ಲಿ ಹೋದಾಗ, ವಾಪಸ್ ಬರುವಾಗ, 'ಸ್ಯಾನಿಟೈಸರ್' ಬಳಸಿ ಕೈ ಚೆನ್ನಾಗಿ ತೊಳಕೋತೀವಿ.
5. ಮನೆಗೆ ಬಂದ ಮೇಲೆ ಕೈ-ಕಾಲು ತೊಳ್ಕೋತೀವಿ.
6. ಅನಾವಶ್ಯಕ ಬೈಕ್-ಕಾರಿನಲ್ಲಿ ಹೊರಗೆ ಸುತ್ತಾಡೋಲ್ಲ, ಆದಷ್ಟು ವಾಕಿಂಗ್‍ನ್ನೇ ಅಳವಡಿಸಿಕೊಳ್ತೀವಿ.
7. ಕುಟುಂಬದ ಸದಸ್ಯರೊಂದಿಗೆ ಹರಟ್ತಾ, ಒಟ್ಟಿಗೆ ತಿಂಡಿ-ಊಟ ಮಾಡ್ತಾ, ಟಿ.ವಿ ನೋಡ್ತಾ, ರೇಡಿಯೋ ಕೇಳ್ತಾ, ಪುಸ್ತಕ ಓದ್ತಾ, ಖುಷಿಯಾಗಿ ಕಾಲ ಕಳೀತೀವಿ.
8. ಏನೇ ಬಂದ್ರೂ ಧೈರ್ಯವಾಗಿ ಎಲ್ಲಾ ಎದುರಿಸ್ತೀವಿ.
9, ಹಣದ ಮುಗ್ಗಟ್ಟು, ಆರ್ಥಿಕ ಸ್ಥಿತಿಗೆ ಕುಗ್ಗಿ ಆತ್ಮಹತ್ಯೆ ಮಾಡಿಕೊಳ್ಳೊಲ್ಲ.
10. ಏನೇ ಬಂದ್ರೂ ಸಕಾಲಕ್ಕೆ ಯೋಗ್ಯ ಚಿಕಿತ್ಸೆ ತಗೋತೀವಿ.
11. ವೈದ್ಯರಿಗೂ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಗೌರವ, ಬೆಂಬಲ ಕೊಡ್ತೀವಿ.
12. ಸಮಾಜದಲ್ಲಿ ಶಾಂತಿ ಕದಡುವ ಉದ್ರೇಕಕಾರಿ ಸುಳ್ಳು-ಪೊಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದಿಲ್ಲ.
13. ಸುಮ್ಮಸುಮ್ಮನೆ ಹಾಗ್ಮಾಡ್ತೀವಿ, ಹೀಗ್ಮಾಡ್ತೀವಿ, ಇದನ್ನ ಬಿಡ್ತೀವಿ, ಇದನ್ನ ಅಳವಡಿಸಿಕೊಳ್ತೀವಿ ಅಂತ ಬೊಕಳೆ ಬಿಡುವುದಿಲ್ಲವೆಂಬ ಪ್ರಮಾಣ ಮಾಡಿ.
13. ಸುಮ್ಮಸುಮ್ಮನೆ ಹಾಗ್ಮಾಡ್ತೀವಿ, ಹೀಗ್ಮಾಡ್ತೀವಿ, ಇದನ್ನ ಬಿಡ್ತೀವಿ, ಇದನ್ನ ಅಳವಡಿಸಿಕೊಳ್ತೀವಿ ಅಂತ ಬೊಕಳೆ ಬಿಡುವುದಿಲ್ಲವೆಂಬ ಪ್ರಮಾಣ ಮಾಡಿ.
14. ಅತ್ತಿತ್ತ ಮನಸ್ಸನ್ನು ಮನಸ್ಸನ್ನು ಚಂಚಲಗೊಳಿಸದೇ, ದೃಢಚಿತ್ತದಿಂದ ತಮ್ಮ ನಿರ್ದಿಷ್ಟ ಗುರಿಯನ್ನು ಸಾಧಿಸಿಕೊಳ್ಳುವೆಡೆಗೆ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸುತ್ತೇವೆ ಎಂಬುದು ಯುವಜನರ ಈ ನೂತನ ವರ್ಷ ಸಂಕಲ್ಪವಾಗಿರಲಿ.
- ಎನ್.ವಿ. ರಮೇಶ್, ಮೈಸೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


