ಹೊಸದಿಲ್ಲಿ: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆ ವಿಭಾಗವು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ನವದೆಹಲಿ ವಿಶ್ವ ಪುಸ್ತಕ ಮೇಳ–2026ರಲ್ಲಿ ಭಾಗವಹಿಸಲಿದೆ. ನಾಳೆಯಿಂದ ಆರಂಭವಾಗುವ ಒಂಬತ್ತು ದಿನಗಳ ಈ ಬೃಹತ್ ಪುಸ್ತಕ ಮೇಳವನ್ನು ರಾಷ್ಟ್ರೀಯ ಪುಸ್ತಕ ಟ್ರಸ್ಟ್, ಭಾರತ ವ್ಯಾಪಾರ ಪ್ರಚಾರ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸುತ್ತಿದೆ.
ಮೇಳದಲ್ಲಿ ಕಲೆ, ಸಂಸ್ಕೃತಿ, ಇತಿಹಾಸ, ಚಲನಚಿತ್ರ, ಜೀವನಚರಿತ್ರೆ, ಗಾಂಧಿ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಇಂಗ್ಲಿಷ್, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿನ ವೈವಿಧ್ಯಮಯ ಪುಸ್ತಕಗಳನ್ನು ಪ್ರದರ್ಶಿಸಲಾಗುತ್ತದೆ.
ಪ್ರಕಟಣೆ ವಿಭಾಗದ ಸ್ಟಾಲ್‌ನಲ್ಲಿ ರಾಷ್ಟ್ರಪತಿ ಭವನ ಸರಣಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಆಯ್ದ ಭಾಷಣಗಳು, ಮಹಾತ್ಮ ಗಾಂಧಿಯವರ ಸಂಗ್ರಹಿತ ಕೃತಿಗಳು ಸೇರಿದಂತೆ ಮಹತ್ವದ ಪ್ರಕಟಣೆಗಳು ಲಭ್ಯವಿರುತ್ತವೆ. ಜೊತೆಗೆ ಯೋಜನಾ, ಕುರುಕ್ಷೇತ್ರ, ಆಜ್ಕಲ್ ಮತ್ತು ಬಾಲ ಭಾರತಿ ಮುಂತಾದ ಜನಪ್ರಿಯ ನಿಯತಕಾಲಿಕೆಗಳನ್ನೂ ಪ್ರದರ್ಶಿಸಿ ಮಾರಾಟ ಮಾಡಲಾಗುತ್ತದೆ.
1941ರಲ್ಲಿ ಸ್ಥಾಪಿತವಾದ ಪ್ರಕಟಣೆ ವಿಭಾಗವು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳು ಹಾಗೂ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ಪ್ರಮುಖ ಭಂಡಾರವಾಗಿದ್ದು, ಇದು ಸರ್ಕಾರದ ಪ್ರಮುಖ ಪ್ರಕಾಶನ ಸಂಸ್ಥೆಯಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


