ಕಲಾಕುಂಚ ಕಾಸರಗೋಡು ಶಾಖೆಯ ವಾರ್ಷಿಕೋತ್ಸವ

Upayuktha
0


ದಾವಣಗೆರೆ: ಕಲಾಕುಂಚ ಕಾಸರಗೋಡು ಶಾಖೆಯ ವಾರ್ಷಿಕೋತ್ಸವವು ಕುಂಜತ್ತೂರಿನ ಶ್ರೀ ಮಾತಾ ಕಲಾಲಯದಲ್ಲಿ  ಶ್ರೀ  ಲಕ್ಷ್ಮಿ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದೊಂದಿಗೆ ದಿನಾಂಕ 4.1.2026 ರಂದು ಜರಗಿತು. ಈ ಕಾರ್ಯಕ್ರಮವನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ  ಶಿವಶಂಕರ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಆಧುನಿಕ ಮಾಧ್ಯಮಗಳು ನೀಡುವ ಮನರಂಜನೆಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ಥಿತಿಯಲ್ಲಿ ಕಲಾ ಕುಂಚ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳಿಂದ ಯುವ ಪೀಳಿಗೆ ಮೌಲ್ಯಯುತ ಬದುಕನ್ನು ಹಾಗೂ ಸಾಹಿತ್ಯ ಆಸಕ್ತಿಯನ್ನು ಮೂಡಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ್ಪರು ಕಲಾಕುಂಚದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಅಕಾಡೆಮಿಯ ಯಥಾಸಾಧ್ಯ ಸಹಕಾರ ನೀಡುವುದಾಗಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತರು ವಹಿಸಿದ್ದು ಕಲಾ ಕುಂಚ ದ ಗೌರವಾಧ್ಯಕ್ಷರಾದ ವಿ ಬಿ ಕುಳಮರ್ವ ರವರು ಉಪಸ್ಥಿತರಿದ್ದರು. ಕಾರ್ತಿಕ್ ಪಡ್ರೆ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ  ನಿವೃತ ಮುಖ್ಯೋಪಾಧ್ಯಾಯರಾದ ರಾಜಾರಾಮರಾವ್ ಮೀಯ ಪದವು ಇವರು ಪಾರ್ತಿ ಸುಬ್ಬನ ಕೃತಿಯ ಹೊಳಹುಗಳು ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.  


ಪ್ರಸಂಗ ಸಾಹಿತ್ಯದ ಸರಳ ಹಾಗೂ ಸಂಕೀರ್ಣತೆ, ಬಹು ಭಾಷಾ ಬಳಕೆ,  ಯುಕ್ತನಾಣ್ಣುಡಿ, ಅರ್ಥಗಾರಿಕೆಯ ಸಾಧ್ಯತೆ ಗಳು ಮುಂತಾದ ವಿಚಾರಗಳಿಗೆ ಬೆಳಕು ಚೆಲ್ಲಿದರು. ಬಳಿಕ  ಪಾರ್ತಿಸುಬ್ಬನ ಕೃತಿಗಳಿಂದ  ಆಯ್ದ ಕೆಲವು ಹಾಡುಗಳನ್ನು ರಾಜಾರಾಮಹೊಳ್ಳ ಕೈರಂಗಳ ಇವರು ಭಾಗವತಿಗೆ ಮೂಲಕ ಪ್ರಸ್ತುತ ಪಡಿಸಿ ಅದರ ಔಚಿತ್ಯವನ್ನು ತಿಳಿಸಿದರು. ನಿರಂತರ ಕಲೆ,ಸಾಹಿತ್ಯ ಹಾಗೂ ಯೋಗಾಭ್ಯಾಸ ಮುಂತಾದ ಚಟುವಟಿಕೆಗಳನ್ನು ನಡಸುತ್ತಿರುವ ಲಕ್ಷ್ಮಿ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಜಯಶೀಲರವರು ಸ್ವಾಗತಿಸಿ ರಾಧಾಮಣಿ ರಾವ್  ಇವರು ವಂದಿಸಿದರು. ಜಯಲಕ್ಷ್ಮಿ ಹೊಳ್ಳ ನಿರೂಪಿಸಿದರು. ಸಂಗೀತ ಶಿಕ್ಷಕಿ ರಾಜೇಶ್ವರಿ  ಪ್ರಾರ್ಥನೆ ಹಾಡಿದರು.


ಇದೇ ಸಂದರ್ಭದಲ್ಲಿ ಕಲಾ ಕುಂಚ ಕೇರಳ ಶಾಖೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ರಾಧಾಮಣಿ ರಾವ್ ಮೀಯಪದವು ಇವರನ್ನು ಅಧ್ಯಕ್ಷರಾಗಿಯೂ ಜಯಲಕ್ಷ್ಮಿ ಹೊಳ್ಳ ಉಪ್ಪಳ ಇವರನ್ನು ಕಾರ್ಯದರ್ಶಿಯಾಗಿಯೂ ಆರಿಸಿ ಅಧಿಕಾರ ಹಸ್ತಾಂತರಿಸಲಾಯಿತು. ಶ್ರೀ ಲಕ್ಷ್ಮಿ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್‍ನ ಕಲಾಲಯದ ವಿದ್ಯಾರ್ಥಿಗಳು ಹಾಗೂ ಹಾಗೂ ಕಲಾಕುಂಚದ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಜರಗಿದವು. ಶ್ರೀಮತಿ ದಿವ್ಯಾ ಕಾರಂತ್ ಈ ಕಾರ್ಯಕ್ರಮ ವನ್ನು ನಿರೂಪಿಸಿದರು.


ಕಾಸರಗೋಡಿನ ಪ್ರಖ್ಯಾತ ಕವಿವರ್ಯ ರಾಧಾಕೃಷ್ಣ ಉಳಿಯತ್ತಡ್ಕ ಇವರು ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು. ನಿವೃತ್ತ ಪ್ರಾಂಶುಪಾಲರಾದ ಪಿ. ಎನ್ ಮೂಡಿತ್ತಾಯರು ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top