ಯುಪಿಐ ಆಧರಿತ ಡಿಜಿಟಲ್ ಪಾವತಿಗೆ ಎನ್‍ಪಿಸಿಐ- ಕೆನರಾ ಬ್ಯಾಂಕ್‌ ಸಹಯೋಗ

Upayuktha
0


ಮಂಗಳೂರು: ಎನ್‍ಪಿಸಿಐ ಭೀಮ್ ಸೇವೆಸ್ ಲಿಮಿಟೆಡ್ (ಎನ್‍ಬಿಎಸ್‍ಎಲ್) ಕೆನರಾ ಬ್ಯಾಂಕ್ ಜೊತೆ ಕೈಜೋಡಿಕೊಂಡು ಬ್ಯಾಂಕ್‍ನ ಪಾವತಿ ಅಪ್ಲಿಕೇಶನ್, ಕೆನರಾ ಎಐ1ಪೇನಲ್ಲಿ ಯುಪಿಐ ಆಧರಿತ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸಿದೆ.


ಇದರಿಂದ ಕೆನರಾ ಬ್ಯಾಂಕ್ ಗ್ರಾಹಕರ ಮತ್ತು ಗ್ರಾಹಕೇತರರಿಗೆ ಸುರಕ್ಷಿತ ಮತ್ತು ವಿಸ್ತೃತ ಪಾವತಿ ಲಭ್ಯತೆ ಮತ್ತಷ್ಟು ಬಲಗೊಳ್ಳಲಿದೆ. ಈ ಸಹಭಾಗಿತ್ವವು ಭೀಮ್ ಬ್ಯಾಂಕ್ ಪ್ಲಗಿನ್ ಸಾಮರ್ಥ್ಯಗಳನ್ನು ಬಳಸಿ ಕೆನರಾ ಬ್ಯಾಂಕ್ ಅಪ್ಲಿಕೇಶನ್‍ನಲ್ಲಿ ಯುಪಿಐ ಸೇವೆಗಳನ್ನು ಬೆಂಬಲಿಸುತ್ತದೆ. ಅನುಸರಣೆ, ವಿಶ್ವಾಸಾರ್ಹತೆ ಮತ್ತು ವ್ಯವಸ್ಥೆಯ ವಿಸ್ತಾರವನ್ನು ಖಚಿತಪಡಿಸಿಕೊಳ್ಳುತ್ತಾ ಹೊಸ ಯಪಿಐ ವೈಶಿಷ್ಟ್ಯಗಳನ್ನು ವೇಗವಾಗಿ ಅಳವಡಿಸಲು ಸಹಾಯ ಮಾಡುತ್ತದೆ ಎಂದು ಎನ್‍ಪಿಸಿಐ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕಿ ಲಲಿತಾ ನಾಟರಾಜ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಈ ಸಹಕಾರದ ಮೂಲಕ, ಕೆನರಾ ಬ್ಯಾಂಕ್ ಭೀಮ್ ಪೇಮೆಂಟ್ಸ್ ಅಪ್ಲಿಕೇಶನ್‍ನಲ್ಲಿ ಪ್ರಾರಂಭವಾಗು ತ್ತಿರುವ ನವೀನ ಯುಪಿಐ ಬಿಡುಗಡೆಗಳ ಭಾಗವಾಗಿ ಅಳವಡಿಸಲಾಗುತ್ತಿರುವ ಹೊಸ ಯುಪಿಐ ಕಾರ್ಯಕ್ಷಮತೆಗಳು ಮತ್ತು ವೈಶಿಷ್ಟ್ಯ ಅಪ್‍ಗ್ರೇಡ್‍ಗಳಿಗೆ ಪ್ರವೇಶ ಪಡೆಯಲಿದೆ. ಈ ಏಕೀಕರಣವು ಉತ್ತಮ ಸುರಕ್ಷತೆ, ಕಾರ್ಯಾಚರಣೆ ಸ್ಥೈರ್ಯ ಮತ್ತು ವಿಸ್ತಾರವನ್ನು ಬೆಂಬಲಿಸುವ ಜತೆಗೆ ಸ್ವತಂತ್ರ ಯುಪಿಐ ಇಂಟರ್ಫೇಸ್ ಅಭಿವೃದ್ಧಿಪಡಿಸಲು, ನಿರ್ವಹಿಸಲು ಮತ್ತು ನಿಯಮಿತವಾಗಿ ಅಪ್‍ಗ್ರೇಡ್ ಮಾಡಲು ಸಂಬಂಧಿಸಿದ ವೆಚ್ಚ ಮತ್ತು ಸಂಪನ್ಮೂಲಗಳನ್ನು ಕಡಿಮೆ ಮಾಡಲು ಬ್ಯಾಂಕಿಗೆ ಸಹಾಯ ಮಾಡುತ್ತದೆ. ಜೊತೆಗೆ, ನಿಯಂತ್ರಣ ಮತ್ತು ಎಕೋಸಿಸ್ಟಮ್ ಅಗತ್ಯಗಳಿಗೆ ನಿರಂತರ ಅನುಸರಣೆಯನ್ನು ಖಚಿತಪಡಿಸುತ್ತದೆ ಎಂದು ವಿವರಿಸಿದ್ದಾರೆ.


ಕೆನರಾ ಬ್ಯಾಂಕ್ ಈ ದೃಷ್ಠಿಕೋನವನ್ನು ಅಳವಡಿಸಿರುವ ಮೊದಲ ಬ್ಯಾಂಕ್ ಆಗಿದೆ. ಎನ್‍ಬಿಎಸ್‍ಎಲ್ ಇನ್ನಷ್ಟು ಬ್ಯಾಂಕ್‍ಗಳೊಂದಿಗೆ ಅವರ ಯುಪಿಐ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ಚರ್ಚೆ ನಡೆಸುತ್ತಿದೆ ಎಂದು ಹೇಳಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top