ವಿಶ್ವ ಗೀತಾ ಪರ್ಯಾಯ: 1750 ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇತಿಹಾಸ ನಿರ್ಮಿಸಿದ ಪುತ್ತಿಗೆ ಪರ್ಯಾಯ

Upayuktha
0

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಎರಡು ವರ್ಷಗಳ ಕಾಲ ನಡೆದ ಅಪೂರ್ವ ಸಾಂಸ್ಕೃತಿಕ–ಬೌದ್ಧಿಕ ಮಹೋತ್ಸವ






ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯದ ಅವಧಿಯಲ್ಲಿ ಆಯೋಜಿಸಲಾದ “ವಿಶ್ವ ಗೀತಾ ಪರ್ಯಾಯ” ಕಾರ್ಯಕ್ರಮವು ಉಡುಪಿ ಪರ್ಯಾಯ ಇತಿಹಾಸದಲ್ಲೇ ಅಪರೂಪದ ದಾಖಲೆಯನ್ನು ನಿರ್ಮಿಸಿದೆ. 2024 ಜನವರಿ 18ರಿಂದ 2026 ಜನವರಿ 13ರವರೆಗೆ ನಿರಂತರವಾಗಿ ನಡೆದ ಈ ಮಹೋತ್ಸವದಲ್ಲಿ ಒಟ್ಟು 1750 ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ.


ಪರ್ಯಾಯ ಅವಧಿಯಲ್ಲಿ ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಹರಿಕಥೆ, ತಾಳಮದ್ದಳೆ, ಭಜನೆ, ವಾದ್ಯ ವೈವಿಧ್ಯ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದಿದ್ದು, ರಾಜ್ಯ, ದೇಶ ಮತ್ತು ವಿದೇಶಗಳಿಂದ ಖ್ಯಾತ ಹಾಗೂ ಹವ್ಯಾಸಿ ಕಲಾವಿದರು ಭಾಗವಹಿಸಿದ್ದರು.


ಕಾರ್ಯಕ್ರಮಗಳ ವಿವರ


ಸಂಗೀತ – 511,

ಭರತನಾಟ್ಯ (ವೈಯಕ್ತಿಕ ಹಾಗೂ ಗುಂಪು) – 535,

ನಾಟಕ – 10,

ಯಕ್ಷಗಾನ – 133,

ತಾಳಮದ್ದಳೆ – 31,

ಹರಿಕಥೆ – 78,

ಗೊಂಬೆಯಾಟ – 2,

ವಾದ್ಯ ವೈವಿಧ್ಯ – 165,

ವಿವಿಧ ಮನೋರಂಜನಾ ಕಾರ್ಯಕ್ರಮಗಳು – 55,

ಭಜನಾ ಸಂಗೀತ – 230.


ಸಮ್ಮೇಳನಗಳು ಮತ್ತು ವಿಚಾರಗೋಷ್ಠಿಗಳು:


ವಿಶ್ವ ಗೀತಾ ಪರ್ಯಾಯದ ಅಂಗವಾಗಿ ಅಖಿಲ ಭಾರತೀಯ ಜ್ಞಾನ ಪರಂಪರಾ ಸಮ್ಮೇಳನ, ವಿಶ್ವ ಗೀತಾ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ, ಜಿಲ್ಲಾ ಗಮಕ, ಚುಟುಕು ಸಾಹಿತ್ಯ, ನೇಕಾರರ, ಜೋಗಿ ಸಮಾಜ, ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್, ವಿಶ್ವ ಗೀತಾ ಅಂತರಾಷ್ಟ್ರೀಯ ಸಮ್ಮೇಳನ ಸೇರಿದಂತೆ ಅನೇಕ ಸಮ್ಮೇಳನಗಳು ನಡೆದವು.

ಇದಲ್ಲದೆ ಅಷ್ಟಾವಧಾನ, ವಿದ್ವತ್ ಗೋಷ್ಠಿ, ಕವಿ ಸಮ್ಮೇಳನ, ಹಾಸ್ಯ ಗೋಷ್ಠಿ, ಪ್ರಾಚೀನ ದೇವಾಲಯಗಳ ವಾಸ್ತು ವಿಮರ್ಶೆ, ಮಧ್ವ ಸಿದ್ಧಾಂತದ ಪ್ರಸ್ತುತತೆ ಕುರಿತ ವಿಚಾರಗೋಷ್ಠಿಗಳು ಕಾರ್ಯಕ್ರಮದ ಬೌದ್ಧಿಕ ಆಯಾಮವನ್ನು ವಿಸ್ತರಿಸಿವೆ.


ಯಕ್ಷಗಾನ, ಸಂಗೀತ ಮತ್ತು ನೃತ್ಯೋತ್ಸವ:

ರಾಮಚಂದ್ರಾಪುರ ಮಠ, ಹಟ್ಟಿಯಂಗಡಿ, ಹನುಮಗಿರಿ, ಪಾವಂಜೆ, ಕಲಾರಂಗ ಸೇರಿದಂತೆ ಅನೇಕ ಪ್ರಸಿದ್ಧ ಯಕ್ಷಗಾನ ಮೇಳಗಳು ಭಾಗವಹಿಸಿದ್ದವು.

ಕರ್ನಾಟಕಿ ಹಾಗೂ ಹಿಂದೂಸ್ಥಾನೀ ಸಂಗೀತದಲ್ಲಿ ದೇಶ–ವಿದೇಶಗಳ ಖ್ಯಾತ ಕಲಾವಿದರು ಭಾಗವಹಿಸಿದ್ದು, ವಾದ್ಯ ವೈವಿಧ್ಯ ಕಾರ್ಯಕ್ರಮಗಳು ಜನರಂಜನೆಯಾಗಿ ಮೂಡಿಬಂದವು.


ಭರತನಾಟ್ಯದಲ್ಲಿ ಒಡಿಶಾ, ಬಿಹಾರ, ಗುಜರಾತ್, ರಾಜಸ್ಥಾನ, ತಮಿಳುನಾಡು, ಕೇರಳ, ಆಂಧ್ರ, ಕರ್ನಾಟಕ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳ ಕಲಾವಿದರು ಹಾಗೂ ನೃತ್ಯ ಶಾಲೆಗಳು ಪಾಲ್ಗೊಂಡಿದ್ದರು. ಕಥಕ್, ಕೂಚುಪುಡಿ ನೃತ್ಯೋತ್ಸವಗಳು ಸಹ ವಿಶಿಷ್ಟ ಗಮನ ಸೆಳೆದವು.


ಭಗವಂತನಿಗೆ ಅರ್ಪಿತ ಕಲಾ ಸೇವೆ:

ಯಾವುದೇ ಫಲಾಪೇಕ್ಷೆ ಇಲ್ಲದೆ, ಸ್ವಂತ ಖರ್ಚಿನಲ್ಲಿ ಹಾಗೂ ಪ್ರಾಯೋಜಕತ್ವದ ಮೂಲಕ ಅನೇಕ ಕಲಾವಿದರು ತಮ್ಮ ಕಲೆಯನ್ನು ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಿದುದು ಈ ಪರ್ಯಾಯದ ವಿಶೇಷತೆಯಾಗಿದೆ. ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಕಲ್ಪನೆಯಂತೆ, ವಿಶ್ವಾದ್ಯಂತದ ಕಲಾವಿದರಿಗೆ ಮುಕ್ತ ಅವಕಾಶ ಕಲ್ಪಿಸುವ ಮೂಲಕ “ಕಲೆ ಭಗವಂತನಿಗೆ ಅರ್ಪಣೆ” ಎಂಬ ಸಂದೇಶವನ್ನು ವಿಶ್ವ ಗೀತಾ ಪರ್ಯಾಯ ಗಟ್ಟಿಯಾಗಿ ಸಾರಿದೆ.


ಒಟ್ಟಿನಲ್ಲಿ, ವಿಶ್ವ ಗೀತಾ ಪರ್ಯಾಯವು ಸಾಂಸ್ಕೃತಿಕ ವೈವಿಧ್ಯ, ಜ್ಞಾನ ಪರಂಪರೆ ಹಾಗೂ ಭಕ್ತಿ ಸಂಯೋಜನೆಯ ಮೂಲಕ ಉಡುಪಿ ಪರ್ಯಾಯ ಇತಿಹಾಸದಲ್ಲಿ ಅಪೂರ್ವ ಹಾಗೂ ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ ಎಂದು ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಕೆ ತಿಳಿಸಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top