ಸ್ಪೂರ್ತಿ ಸೆಲೆ: ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ

Upayuktha
0


ಹಲೋ, ಹೇಗಿದ್ದೀರಾ?

ಜೀವನದಲ್ಲಿ ಸುಖ ಮತ್ತು ದುಃಖ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ. ಸಮಸ್ಯೆ, ಅವಮಾನ, ನೋವು ಇವೆಲ್ಲವೂ ದುಃಖದಲ್ಲಿನ ಅಜೆಂಡಾ ಇದ್ದಂತೆ. ಸುಖವು ಸಾಸಿವೆ ಇದ್ದಂತೆ ಆದರೆ ದುಃಖವು ಒಂದು ಸಾಗರ ಇದ್ದಂತೆ ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಸಮಸ್ಯೆಗಳು ಯಾರಿಗೆ  ಬರುವುದಿಲ್ಲ ಹೇಳಿ? ಅದು ಒಂದು ರೀತಿಯಲ್ಲಿ ಬುದ್ದನ ಕಥೆಯಲ್ಲಿ ಬರುವ ಸಾವಿಲ್ಲದ ಮನೆಯಿಂದ ಸಾಸಿವೆ ತರುವ ಕಥೆ ಇದ್ದಂತೆ.


ಆದರೆ ಪ್ರತಿ ಸಮಸ್ಯೆಗೂ ಪರಿಹಾರ ಇದ್ದಂತೆ. ಪ್ರತಿ ಬೀಗಕ್ಕೂ ಬೀಗದ ಕೈ ಇದ್ದಂತೆ ಪ್ರತಿ ಸಮಸ್ಯೆಯೂ ತನ್ನದೇ ಆದ ಪರಿಹಾರವನ್ನು  ಹೊತ್ತು ತಂದಿರುತ್ತದೆ.


ಆದರೆ ಬಹಳಷ್ಟು ಜನ ಸಮಸ್ಯೆಗೆ ಹೆದರಿ ಮಾನಸಿಕ ಖಿನ್ನತೆಯಿಂದ ಬಳಲುತ್ತಾರೆ. ಇದು ಮಿತಿ ಮೀರಿದಾಗ ಆತ್ಮಹತ್ಯೆಯ ಕಡೆಗೂ ತಿರುಗುವುದುಂಟು.

ಇತ್ತೀಚಿಗಷ್ಟೇ ಹೆಸರಾಂತ ಲೇಖಕಿಯೊಬ್ಬರು  ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿತ್ತು. 


ಇಲ್ಲಿ ಎಲ್ಲೋ ಕೇಳಿದ ಜೋಕು ನೆನಪಾಗುತ್ತಿದೆ. ಒಮ್ಮೆ ಸತ್ತರೆ ಪುನಃ ಹುಟ್ಟಿ ಬಂದರೆ LKG ಯಿಂದ ಸ್ಕೂಲಿಗೆ ಹೋಗಬೇಕಾಗುತ್ತದೆ. ಇದು ಒಂದು ಕ್ಷಣ ನಗು ತರಿಸಿದರೂ ಒಂದು ರೀತಿಯಲ್ಲಿ ಸಮಸ್ಯೆಗೆ ಹೆದರಿ ಸಾಯುವವರಿಗೆ ಒಂದು ಪಾಠ ಆಗಬಹುದು.


ಸಮಸ್ಯೆಗಳು ಒಂದು ರೀತಿಯಲ್ಲಿ ನಾಯಿಗಳು ಇದ್ದಂತೆ. ನೀವು  ಸುಮ್ಮನಿದ್ದರೆ ಬಾಲ ಮುದುರಿಕೊಂಡು ಹೋಗುತ್ತವೆ. ಟ್ರಾಫಿಕ್ ಕಂಟ್ರೋಲ್ ಜಾಂನಲ್ಲಿ ರೋಾಡ್ ಕ್ಲಿಯರ್ ಆಗುವವರೆಗೆ ಹೇಗೆ ಕಾಯುತ್ತವೆಯೋ ಹಾಗೆ ಸುಮ್ಮನಿದ್ದರೆ ಒಮ್ಮೊಮ್ಮೆ ತಾವೇ ಪರಿಹಾರ ಆಗಿ ಬಿಡುತ್ತವೆ. ಎಷ್ಟೋ ಸಾರಿ ಸಮಸ್ಯೆಗಳು ಪ್ಲಾಸ್ಟಿಕ್ ಹಾವುಗಳಿದ್ದಂತೆ. ಸುಮ್ಮನೆ ಹೆದರಿಸುತ್ತವೆ. ಹೆದರುವವರು ಇದ್ದರೆ ಹೆದರಿಸುವವರು ಇದ್ದೇ ಇರುತ್ತಾರೆ. ಇದೊಂದು ರೀತಿಯ ಲಾಜಿಕ್ ಇದ್ದಂತೆ.


ಈಸಬೇಕು, ಇದ್ದು ಜಯಿಸಬೇಕು ಎಂಬ ದಾಸವಾಣಿ ನಮಗೆ ಜೀವನದ ಪಾಠ ಇದ್ದಂತೆ. ನಡೆಯುವಾಗ ಬಿದ್ದಾಗ ಹೇಗೆ ಎದ್ದು ಸುಧಾರಿಸಿಕೊಂಡು ನಡೆಯುತ್ತೇವೆಯೋ ಹಾಗೆ ಜೀವನದಲ್ಲಿ ಬಿದ್ದರೂ ಎದ್ದು ನಡೆಯುವುದು ಕಲಿಯಬೇಕು. ಇದನ್ನೇ Restart in life ಎನ್ನುವುದು.

ಬನ್ನಿ,  ಜೀವನವನ್ನು restart, recreate ಮಾಡಿ ಬಾಳೋಣ. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
To Top