ಹಲೋ, ಹೇಗಿದ್ದೀರಾ?
ಬದುಕು ಒಂದು ಅನುಭವಗಳ ಸಂತೆ. ನಾವು ಅಂದುಕೊಂಡಷ್ಟು ಬದುಕು ಕೆಟ್ಟದ್ದಾಗಿಲ್ಲ ಮತ್ತು ಅದು ಅಂದು ಕಂಡಷ್ಟು ಸುಲಭವೂ ಆಗಿಲ್ಲ. ಬದುಕಿನಲ್ಲಿ ನಾವು ಎಷ್ಟು ಹೊಂದಿಕೊಳ್ಳುವ ಸ್ವಭಾವವನ್ನು ರೂಢಿಸಿ ಕೊಳ್ಳುತ್ತೇವೆಯೋ ಅಷ್ಟು ಜೀವನದಲ್ಲಿ ನೆಲೆಯೂರುತ್ತೇವೆ.
ಹಾಸ್ಟೆಲ್‌ನಲ್ಲಿ ಹೊಂದಿಕೊಳ್ಳಲಾಗದೆ ಕಾಲೇಜು ಬಿಟ್ಟು ಮನೆಗೆ ಬರುವ ಮಗ, ಗಂಡನ ಜೊತೆ ಜಗಳವಾಡಿ ತವರು ಮನೆಗೆ ಬರುವ ಮಗಳು, ಆಫೀಸಿನಲ್ಲಿ ಹೊಂದಿಕೊಳ್ಳದೇ ರಾಜೀನಾಮೆ ಇತ್ತು ಮನೆಗೆ ಬರುವ ವ್ಯಕ್ತಿ ಇವರೆಲ್ಲರೂ ಜೀವನದಲ್ಲಿ ಸೋತು ನಿಲ್ಲುವವರೆ.
ಬದುಕಿನಲ್ಲಿ ನಾವು ಬೇರೆ ಬೇರೆ ಕಡೆ ಬೇರೆ ಬೇರೆ ಪರಿಸರದಲ್ಲಿ ಹೊಂದಿಕೊಂಡು ಬದುಕಬೇಕಾಗುತ್ತದೆ. ಹೇಗೆ ಪ್ರಾಣಿಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಬದುಕುತ್ತವೆ, ಆದರೆ ಮನುಷ್ಯ ಮಾತ್ರ ಕಂಪ್ಲೇಂಟ್ ಬಾಕ್ಸ್ ಆಗಿ ಎಲ್ಲದರ ಮೇಲೆ ತನ್ನ ನಾಲಿಗೆಯನ್ನು ಹರಿ ಬಿಡುತ್ತಾನೆ.
ಬದುಕಿನಲ್ಲಿ ಕೇವಲ ಪರಿಸರಕ್ಕೆ ಮಾತ್ರ ಹೊಂದಿಕೊಳ್ಳುವುದು ಮಾತ್ರವಲ್ಲ, ಜನರ ಜೊತೆಗೆ, ಅವರ ವರ್ತನೆಗೆ ತಕ್ಕಂತೆ ಹೊಂದಿಕೊಳ್ಳಬೇಕಾಗುತ್ತದೆ.
- ಗಾಯತ್ರಿ ಸುಂಕದ ಬದಾಮಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


