ಪ್ರೇಕ್ಷಕರನ್ನು ಮುದಗೊಳಿಸಿದ ಮಕ್ಕಳ ನೃತ್ಯ ಪ್ರದರ್ಶನ

Upayuktha
0


ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆಯ  ಗುರುಗಳಾದ  ಕಲಾಯೋಗಿ ಕೆ.ಪಿ.ಸತೀಶ  ಬಾಬು ಹಾಗು  ವಾಣಿ ಸತೀಶ ಬಾಬು ಆಯೋಜಿಸಿದ್ದ ನಾಟ್ಯೇಶ್ವರ ನೃತ್ಯ ಶಾಲೆಯ 18ನೇ ವಾರ್ಷಿಕೋತ್ಸವ  ಕಾರ್ಯಕ್ರಮವು ಮಲ್ಲೇಶ್ವರದ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ  ಯಶಸ್ವಿಯಾಗಿ ನಡೆಯಿತು. ಇದರಲ್ಲಿ ಗುರುಗಳಾದ ಕಲಾಯೋಗಿ ಕೆ. ಪಿ. ಸತೀಶ್ ಬಾಬು ಅವರೊಟ್ಟಿಗೆ ನೃತ್ಯ ಶಾಲೆಯ ಕಿರಿಯ ಹಾಗೂ ಹಿರಿಯ ಶಿಷ್ಯ ವೃಂದ ಹಾಗೂ ಆಹ್ವಾನಿತ ನೃತ್ಯ ಶಾಲೆಗಳಾದ ವಿದುಷಿ  ಸಂದ್ಯಾ ಸಿ.ಆರ್. ಮಂದಿರ ನೃತ್ಯ ಶಾಲೆ ಮತ್ತು ಕುಮಾರ್ ರವರ ಸೂರ್ಯೋದಯ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಅಮೋಘವಾದ ವೈವಿಧ್ಯಮಯ ನೃತ್ಯ ಪ್ರಸ್ತುತಿಯಾಯಿತು.  


ಕಾರ್ಯಕ್ರಮಕ್ಕೆ ಅತಿಥಿಗಳಾದ ರಾಘವೇಂದ್ರ ಶೆಟ್ಟಿ, (ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು), ಆರ್. ರಾಜಕುಮಾರ್ (ಕಲಾಂಜಲಿ ನಾಟ್ಯ ಶಾಲೆ ಹಾಗೂ ಜಿ.ಜೆ. ಆರ್.ವಿ.ಕೆ ಶಾಲೆಯ ನೃತ್ಯ  ಗುರುಗಳು) ಇವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಮೂಡಿಬಂತು. ನಾಟ್ಯ ಶಾಸ್ತ್ರದಲ್ಲಿರುವ ಶಾಸ್ತ್ರೀಯ, ಸಮಕಾಲೀನ, ಜಾನಪದ ಹೀಗೆ ಕಿರಿಯ ಹಾಗೂ ಹಿರಿಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ನೃತ್ಯ ಬಂಧಗಳಿಗೆ  ಯಾವುದೇ ಚ್ಯುತಿ ಬಾರದಂತೆ ಕೃತಿಗಳ ಆಯ್ಕೆ, ನಮ್ಮ ದೇಶದ ಶ್ರೇಷ್ಠ ದಾಸರು, ಕವಿಗಳು ರಚಿಸಿರುವ ಅದ್ಬುತ ಸಾಹಿತ್ಯಕ್ಕೆ ಮಕ್ಕಳು ನೃತ್ಯ  ಪ್ರದರ್ಶನ ನೀಡಿದ್ದು ಕಲಾರಸಿಕರ ಚಪ್ಪಾಳೆ, ಆಶೀರ್ವಾದ, ಪ್ರಶಂಸೆಗೆ ಪಾತ್ರರಾದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top