ಜಿಕೆ ಫೌಂಡೇಶನ್ ಬಳ್ಳಾರಿ ಆಶ್ರಯದಲ್ಲಿ ಕ.ಕ.ವಿಭಾಗ ಮಟ್ಟದ ಪುರುಷರ, ಮಹಿಳೆಯರ ದೇಹದಾರ್ಡ್ಯ ಸ್ಪರ್ಧೆ, ಪವರ್ ಲಿಫ್ಟಿಂಗ್ ಸ್ಪರ್ಧೆ

Upayuktha
0

ಕ.ಕ.ಭಾಗದ ಯುವಕರಿಗೆ ಪ್ರೋತ್ಸಾಹ - ನಾರಾ ಭರತ್ ರೆಡ್ಡಿ



ಬಳ್ಳಾರಿ: ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ, ಭಾಗವಹಿಸುವುದು ಮುಖ್ಯ, ಸ್ಪರ್ಧಾಳುಗಳು   ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಕ.ಕ.ಭಾಗದ ಯುವಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು ಜಿಕೆ ಫೌಂಡೇಶನ್  ವಿಜಯ್ ಅವರಿಗೆ ಅತ್ಯಂತ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.


ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಕೆ ಫೌಂಡೇಶನ್, ಬಳ್ಳಾರಿ ಫಿಟ್ನೆಸ್ ಅಸೋಸಿಯೇಶನ್ ಆಶ್ರಯದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕ.ಕ.ವಿಭಾಗ ಮಟ್ಟದ ಪುರುಷರ, ಮಹಿಳೆಯರ ದೇಹದಾರ್ಡ್ಯ ಸ್ಪರ್ಧೆ, ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.


ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್, ಫುಟ್ಬಾಲ್ ಸೇರಿ ನಾನಾ ಕ್ರೀಡೆಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ, ಜಿ.ಕೆ.ಫೌಂಡೇಶನ್ ಅಧ್ಯಕ್ಷ ವಿಜಯ್ ಜಿ.ಕೆ.ಅವರು ಯುವಕರನ್ನು ಪ್ರೋತ್ಸಾಹಿಸಲು ಕ.ಕ. ವಿಭಾಗ ಮಟ್ಟದ ದೇಹದಾಡ್ಯ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ಮೂಡಿಸಿದೆ. ಜಿ.ಕೆ.ಸ್ವಾಮಿ (ವಿಜಯ್) ಅವರು ಸಿಂಗಪುರ ನಲ್ಲಿ ಕೆಲಸ ಮಾಡಿ, ನಾನು ಹುಟ್ಟಿದ ನಾಡಿಗೆ ಏನಾದ್ರೂ ಮಾಡ್ಬೇಕು ಎನ್ನುವ ಹಂಬಲಲ್ಲಿದ್ದಾರೆ, ಅವರ ಕಾಳಜಿಗೆ ನನ್ನ ಸಂಪೂರ್ಣ ಸಹಕಾರ, ಬೆಂಬಲ ಇರಲಿದೆ. ಇಂದಿನ ಯುವಕರೇ ದೇಶದ ಮುಂದಿನ ಸ್ಫೂರ್ತಿ, ಜಿ.ಕೆ.ಸ್ವಾಮಿ ಅವರು ಯುವಕರಾಗಿದ್ದು, ಹೈ.ಕ.ಭಾಗದ ಯುವಕರಿಗೆ ಪ್ರಾಧಾನ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ಮುಂದೆ ಬಂದಿದ್ದಾರೆ. ಜಿಕೆ ಫೌಂಡೇಶನ್ ವತಿಯಿಂದ ಜಿಕೆ ಸ್ವಾಮಿ ಅವರು, ಬಡವರು, ಮಹಿಳೆಯರು, ವೃದ್ಧರ ಸೇವೆ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿ ಮಾದರಿಯಾಗಿದ್ದಾರೆ. ಅವರೊಂದಿಗೆ ನಾನಿರುವೆ ಎಂದರು.


ಜಿ.ಕೆ.ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ.ಕೆ.ಸ್ವಾಮಿ ಅವರು ಮಾತನಾಡಿ, ಯುವಕರಿಗೆ ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸಬೇಕು ಎನ್ನುವ ಉದ್ದೇಶ ನನ್ನದು, ನಮ್ಮ ಫೌಂಡೇಶನ್ ಆಶ್ರಯದಲ್ಲಿ ಇಲ್ಲಿವರೆಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೆತ್ರದಲ್ಲಿ ಸಾಕಷ್ಟು ಸೇವೆ ಮಾಡಿಕೊಂಡು ಬರುತ್ತಿದ್ದು, ಕ.ಕ.ವಿಭಾಗ ಮಟ್ಟದ  ದೇಹದಾಡ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ಬರುವ ದಿನಗಳಲ್ಲಿ ರಾಜ್ಯಮಟ್ಟದ ಸ್ಫರ್ಧೆ ಆಯೋಜಿಸುವ ಕನಸಿದೆ. ಎಲ್ಲರ ಸಹಕಾರ ಅತ್ಯಗತ್ಯ ಎಂದರು. 



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top