"ಕಬಡ್ಡಿ" ಎಂಬ ಕ್ರೀಡೆ ನಮ್ಮ ಕರ್ನಾಟಕದ ಹೆಮ್ಮೆಯ ಆಟ. ಕಬಡ್ಡಿಯ ಎಂದರೆ ಎಲ್ಲರಲ್ಲೂ ಒಂದು ಆಸಕ್ತಿ ಒಂದು ಉತ್ಸಾಹ. ಆ ಆಟದಲ್ಲಿ ಎಷ್ಟು ಸಹ ನೋವು ಬೀಳುಗಳು ಇದ್ದರೂ ಆ ಆಟವನ್ನು ಯಾರು ಇಲ್ಲಿಯವರಿಗೆ ಹಿಂದೆ ದೂಡಲಿಲ್ಲ. ಕಬಡ್ಡಿ ಎಂದರೆ ಅದು ಒಂದು ಆಟ ಮಾತ್ರವಲ್ಲ ಅದು ಒಂದು ಧೈರ್ಯ ಒಂದು ಶಕ್ತಿ, ತಾಳ್ಮೆ, ಹಾಗೂ ಚಾತುರ್ಯದ ಪ್ರತೀಕವಾಗಿದೆ. ಕಬಡ್ಡಿ ಎಂದರೆ ಯುವಕರಿಗೆ ಅಚ್ಚುಮೆಚ್ಚಿನ ಆಟ ಎಂದರೆ ತಪ್ಪಾಗಲಾರದು. ಯಾವುದನ್ನು ಬಿಟ್ಟುಕೊಡಲು ತಯಾರಿದ್ದರು ಆದರೆ ಕಬಡಿಯ ಹಿರಿಮೆಯನ್ನು ಬಿಟ್ಟುಕೊಡಲು ಅವರು ಸಾಧ್ಯವೇ ಇರುವುದಿಲ್ಲ. ಮೈದಾನ ಹಾಗೂ ಹೊಲಗದ್ದೆಗಳಲ್ಲಿ ಕಬಡ್ಡಿ ಆಡುವುದು ಯುವಕರ ಒಂದು ಉತ್ಸಾಹದ ಒಂದು ಆಟ.
ಹಬ್ಬಗಳ ಸಂಭ್ರಮದಲ್ಲಿ ಆಗಿರಬಹುದು ಅಥವಾ ಶಾಲೆ ಕಾಲೇಜುಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಕಬಡ್ಡಿ ಎನ್ನುವ ಆಟ ಪ್ರಮುಖ ಹಾಗೂ ಮೊದಲ ಸ್ಥಾನವನ್ನು ಆಕರ್ಷಣೆ ಪಡೆದಿದೆ. ಕಬಡ್ಡಿ ಆಟವನ್ನು ನೋಡಲು ಎಷ್ಟು ಜನ ಬರುತ್ತಾರೆಂದರೆ ಆ ಜನರು ಸುತ್ತ ಸೇರುವುದೆ ಆಟದ ಉತ್ಸಾಹವನ್ನು ಇನ್ನೂ ಹೆಚ್ಚು ಮಾಡುತ್ತದೆ, ಆಗ ಕಬಡ್ಡಿ ಆಟಗಾರರಿಗೆ ಇನ್ನೂ ಧೈರ್ಯ ಹೆಚ್ಚಾಗ ತೊಡಗುತ್ತದೆ. ಅವರು “ಕಬಡ್ಡಿ, ಕಬಡ್ಡಿ “ಎಂದು ಪಿಸು ಧ್ವನಿಯಲ್ಲಿ ಆಟ ಆಡುವಾಗ ಆಟಗಾರರಿಗೆ ಮನೋಬಲವನ್ನಷ್ಟೇ ಹೆಚ್ಚಿಸುವುದಲ್ಲದೆ ಪ್ರೇಕ್ಷಕರ ಕಣ್ಣಿಗೂ ಹೃದಯಕ್ಕೂ ಅದು ಸ್ಪೂರ್ತಿಯನ್ನು ನೀಡುತ್ತದೆ.
ಕಬಡ್ಡಿ ಕೇವಲ ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಇದರಲ್ಲಿ ಹೆಣ್ಣು ಮಕ್ಕಳು ಸಹ ಪಾತ್ರವಹಿಸಿದ್ದಾರೆ. ಕಬಡ್ಡಿಯ ಹೆಣ್ಣು ಹುಲಿಯಾದ ಮಮತಾ ಪೂಜಾರಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಈಕೆ ಭಾರತೀಯ ವೃತ್ತಿಪರ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ. ಹೆಣ್ಣು ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಎಂದು ಮಮತಾ ಪೂಜಾರಿ ಅವರು ತಮ್ಮ ಕಬಡ್ಡಿಯ ಆಟದ ಮೂಲಕ ಅವರ ಹಿರಿಮೆಗರಿಮೆಯನ್ನು ತೋರಿದ್ದಾರೆ.
ಹಳ್ಳಿಗಳಲ್ಲಿ ರಜೆ ಸಿಕ್ಕರೆ ಆದಿತ್ಯವಾರ ಬಂದರೆ ಹುಡುಗರು ಚಿಕ್ಕ ಮೈದಾನವಾದರೂ ಕಬಡ್ಡಿ ಆಟವನ್ನು ಅತ್ಯಂತ ರೋಮಾಂಚನಕಾರವಾಗಿ ಕಬಡ್ಡಿಯನ್ನು ಆಡುತ್ತಾರೆ. ಅದೆಷ್ಟೇ ಗಾಯ,ನೋವು ಆಗಲಿ ಕಬಡ್ಡಿ ಅನ್ನೋದು ಯುವಕರು ಪಾಲಿಗೆ ಒಂದು ಅದೃಷ್ಟ ಇದ್ದಂತೆ. ಅವರು ಕಬಡ್ಡಿಯನ್ನು ಎಷ್ಟು ಮನಸಲ್ಲಿ ಹಚ್ಚಿಕೊಂಡು ಇರುತ್ತಾರೆ ಎಂದರೆ, ಅದು ಒಂದು ಜೀವನದ ಭಾಗವಾಗಿರುತ್ತದೆ, ಕೆಲವರಿಗೆ ಕಬ್ಬಡಿ ಎಂದರೆ ಪಂಚಪ್ರಾಣ ಎಂದು ಹೇಳಿದರೆ ತಪ್ಪಾಗಲಾರದು. ಇಂದಿನ ದಿನಗಳಲ್ಲಿ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿ ಬೆಳೆದು ಕರ್ನಾಟಕದ ಕೀರ್ತಿಯನ್ನು ಹಿರಿಮೆಯನ್ನು ವಿಶ್ವದ ಎಲ್ಲೆಡೆ ಹರಡುತ್ತಿದೆ. ಕಬಡ್ಡಿಯಂದರೆ ಅದು ಕೇವಲ ಒಂದು ಜೀವನದ ಶಕ್ತಿಯಲ್ಲ, ಒಂದು ಒಗ್ಗಟ್ಟಿನ ಪ್ರತೀಕ ಎಂದು ಹೇಳಿದರೆ ತಪ್ಪಾಗಲಾರದು.
-ಅಂಜಲಿ ಮುಂಡಾಜೆ
ಎಸ್ ಡಿ ಎಂ ಕಾಲೇಜು ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


.jpg)
