ಹುನಗುಂದ: ವಿ.ಎಂ.ವಿ.ವಿ. ಸಂಘದ ಆಡಳಿತದಲ್ಲಿರುವ ಪಟ್ಟಣದ ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಡಾ. ಶಿವಾನಂದ ಆರ್. ನಾಗಣ್ಣವರ ಅವರ ಐದು ಸಂಶೋಧನಾ ಗ್ರಂಥಗಳ ಲೋಕಾರ್ಪಣೆ ಹಾಗೂ “ಇತಿಹಾಸ ಮತ್ತು ಕನ್ನಡ ಸಾಹಿತ್ಯ: ಒಂದು ಸಾಂಸ್ಕೃತಿಕ ದೃಷ್ಟಿಕೋನ” ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವು ಜನವರಿ 7ರಂದು, ಬುಧವಾರ, ಬೆಳಿಗ್ಗೆ 10.30ಕ್ಕೆ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ತರಗಿ ಸಂಸ್ಥಾನ ಮಠ, ಇಳಕಲ್ಲ–ಹುನಗುಂದದ ಮ.ನಿ.ಪ್ರ. ಗುರು ಮಹಾಂತಸ್ವಾಮಿಗಳು ವಹಿಸಲಿದ್ದು, ಬಾಗಲಕೋಟ ತಾಲೂಕಿನ ಶಿರೂರ ಗ್ರಾಮದ ವಿಜಯಮಹಾಂತೇಶ್ವರ ಮಠದ ನಿಸರ್ಗ ಚಿಕಿತ್ಸಾ ಕೇಂದ್ರದ ಮ.ನಿ.ಪ್ರ. ಡಾ. ಬಸವಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಗಲಕೋಟೆಯ ಮಾಜಿ ಶಾಸಕ ಹಾಗೂ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ. ಚರಂತಿಮಠ ವಹಿಸಲಿದ್ದು, ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಎಸ್. ಕಡಪಟ್ಟಿ ಉಪಸ್ಥಿತರಿರುತ್ತಾರೆ.
ಜಮಖಂಡಿಯ ಬಾಗಲಕೋಟೆ ವಿದ್ಯಾಲಯದ ಕುಲಪತಿ ಡಾ. ಆನಂದ ಶರದ್ ದೇಶಪಾಂಡೆ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಡಾ. ನಾಗಣ್ಣವರ ಅವರ ಐದು ಸಂಶೋಧನಾ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ವಿಶೇಷ ಅತಿಥಿಗಳಾಗಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮೀನಾ ಆರ್. ಚಂದಾವರಕರ, ಧಾರವಾಡದ ಕೆ.ವಿ.ವಿ. ಸಂಸ್ಥೆಯ ಕನ್ನಡ ಸಂಶೋಧನಾ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ. ರು.ಮ. ಷಡಕ್ಷರಯ್ಯ, ಬಾಗಲಕೋಟೆ ಜಿಲ್ಲಾ ಲೋಕಾಯುಕ್ತ ಎ.ವೈ.ಎಸ್.ಪಿ. ಸುರೇಶ್ ರೆಡ್ಡಿ, ಬಾಗಲಕೋಟೆ ಸೈಬರ್ ಪೊಲೀಸ್ ಡಿವೈಎಸ್ಪಿ ಡಾ. ಗಿರೀಶ ಭೋಜನವರ ಹಾಗೂ ಬೆಂಗಳೂರು ಕದಂಬ ಪ್ರಕಾಶನದ ಸಂಸ್ಥಾಪಕ ನಾಗೇಶ್ ಡಿ.ಸಿ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುಸ್ತಕಾವಲೋಕನವನ್ನು ಧಾರವಾಡ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಈರಣ್ಣ ಕೆ. ಪತ್ತಾರ ಅವರು ನೆರವೇರಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಅಮರೇಶ ಏತಗಲ್, ಹುನುಗುಂದ ವಸ್ತ್ರದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಮಹೇಶ್ ತಿಪ್ಪಶೆಟ್ಟಿ, ಬನಹಟ್ಟಿ ಎಸ್.ಟಿ.ಸಿ. ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಬೆನ್ನೂರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರನ್ನು ಐಕ್ಯೂಎಸಿ ಘಟಕದ ಕಾರ್ಯಾಧ್ಯಕ್ಷರಾದ ಡಾ. ಶಿವಾನಂದ ಆರ್. ನಾಗಣ್ಣವರ, ಇತಿಹಾಸ ವಿಭಾಗದ ಮುಖ್ಯಸ್ಥರು, ಕಾಲೇಜು ಒಕ್ಕೂಟದ ಉಪನ್ಯಾಸಕರು ಹಾಗೂ ಪ್ರಕಟಣಾ ಸಮಿತಿಯ ಸದಸ್ಯರು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

