2025ರಲ್ಲಿ ನನಸಾಗದೆ ಉಳಿದ ಕನಸುಗಳು ಎಷ್ಟು?

Upayuktha
0



ನಾವೆಲ್ಲ 2025 ನ್ನು ಅಂತೂ ಪೂರೈಸಿದ್ದೇವೆ. ನಿಮಗೆ ನೆನಪಿರಬಹುದು, ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡು 2025ಕ್ಕೆ ಕಾಲಿಟ್ಟಿದ್ವಿ. ಅವುಗಳಲ್ಲಿ ಅದೆಷ್ಟು ನಿರೀಕ್ಷೆಗಳು, ಕನಸುಗಳು ಈ ವರ್ಷದಲ್ಲಿ ನನಸಾಗಿವೆ ಎಂದು ವರ್ಷದ ಕೊನೆಯಲ್ಲಿ ಯೋಚಿಸಿದರೆ, ಅಂದುಕೊಂಡ ಅದೆಷ್ಟೋ ವಿಷಯಗಳು ಇನ್ನೂ ಕೈಗೂಡದೆ ಇರುವುದು ತಿಳಿಯುತ್ತದೆ. ಯಾಕೆ ಹೀಗಾಯಿತು ಎಂಬ ಜಿಜ್ಞಾಸೆಯೂ ನಮ್ಮನ್ನು ಕಾಡುತ್ತದೆ. 


2024ರ ಕೊನೆಯ ದಿನಗಳಲ್ಲಿ ʼಹೊಸ ವರ್ಷʼಕ್ಕೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುತ್ತೇವೆ. ಇದಕ್ಕೆ ನಾನೂ ಹೊರತಾಗಿಲ್ಲ. ಹಲವಾರು ಯೋಜನೆಗಳನ್ನು ಹಾಕಿಕೊಂಡೇ  2025 ಕ್ಕೆ ಕಾಲಿಟ್ಟೆ. ಆದರೆ ವರ್ಷದ ಕೊನೆ ಕೊನೆಯಲ್ಲಿ ಯಾವೆಲ್ಲ ನಡೆದ ದಾರಿಯನ್ನೊಮ್ಮೆ ನೋಡಿದರೆ ನನಸಾದ ಕನಸುಗಳಿಗಿಂತ ನನಸಾಗದೆ ಉಳಿದ ಕನಸುಗಳ ಹೆಚ್ಚಾಗಿ ಕಾಣತೊಡಗಿವೆ. ಮನಸ್ಸಿಗೆ ಕಿರಿಕಿರಿಯೆನಿಸುವ ನಿರಾಸೆಯ ಭಾವನೆಯೂ ಹಾದುಹೋಗುತ್ತದೆ. 


ಏಕೆ ನಿಜವಾಗಲಿಲ್ಲ?

ಕನಸು ಏಕೆ ನನಸಾಗಲಿಲ್ಲ ಇಂದು ಕೂತು ಯೋಚಿಸಿದಾಗ, ಅದಕ್ಕೆ ಬೇರೆ ಯಾರನ್ನೂ ದೂರಿ ಪ್ರಯೋಜನವಿಲ್ಲ, ತಪ್ಪು ನನ್ನಲ್ಲೇ ಇದೆ ಎಂದೆನಿಸಿತು. ಹೊಸ ವರ್ಷದ ಹುಮ್ಮನಸ್ಸಿನಲ್ಲಿ ಯೋಜನೆಗಳನ್ನು ಹಾಕುವಾಗ ಇದ್ದ ಉತ್ಸಾಹ, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ಇರುವುದಿಲ್ಲ. ಇಂದೇ ಮಾಡಬೇಕಾದ ಕಾರ್ಯವನ್ನು ನಾಳೆ ಮಾಡುತ್ತೇನೆ, ಎಂದು ಮುಂದೂಡುತ್ತಲೇ ಬಂದೆ. ಮಾಡಲಾಗದ ಇರುವ ಕೆಲಸಕ್ಕೆ ನೆಪಗಳನ್ನು ಹುಡುಕಲು ಶುರು ಮಾಡಿದೆ. ಕಾಲ ಯಾರಿಗೂ ಕಾಯುವುದಿಲ್ಲ ಎಂಬುದನ್ನೂ ಮರೆತೇ ಬಿಟ್ಟೆ!


ಗಮನದ ನಿರ್ಗಮನ!

ಇಚ್ಛಾಶಕ್ತಿ ಇದ್ದಾಗಲೇ ಕೆಲಸ ಮಾಡಿ ಮುಗಿಸಬೇಕಿತ್ತು ಅನಿಸುತ್ತದೆ. ಕಾಲ ಕಳೆದಂತೆ ಮಾಡಬೇಕಿದ್ದ ಆಸಕ್ತಿಯೂ ಕಡಿಮೆಯಾಯಿತು. ಈ ಎಲ್ಲ ಕಾರಣಗಳಿಂದ ಹಾಕಿಕೊಂಡ ಯೋಜನೆಗಳು ಸಫಲತೆ ಕಾಣಲೇ ಇಲ್ಲ. ನಾವೆಲ್ಲರೂ ಹಾಗೇ ಮಾಡುತ್ತೇವೆ ಅಲ್ಲವೇ? ಗುರಿ ಇಟ್ಟುಕೊಳ್ಳುತ್ತೇವೆಯೇ ಹೊರತು ಅದಕ್ಕೆ ಬೇಕಾದ ಪ್ರಯತ್ನಪಡುವುದಿಲ್ಲ. ಅನೇಕ  ಯೋಜನೆಗಳನ್ನು ಹಾಕಿಕೊಂಡು ಹೊಸ ವರ್ಷವನ್ನು ಶುರು ಮಾಡುವುದೇನೂ ತಪ್ಪಲ್ಲ. ಆದರೆ ಹಾಕಿಕೊಂಡ ಯೋಜನೆಗಳನ್ನು ಸಂಪೂರ್ಣಗೊಳಿಸಲು ಇಷ್ಟಪಟ್ಟು ಗುರಿಯ ಕಡೆಗೆ ಸಾಗಬೇಕು. ಅನೇಕ ಬಾರಿ ಗುರಿಯ ಕಡೆಗಿನ ಗಮನ ಕಡಿಮೆಯಾಗುತ್ತದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಂಪೂರ್ಣ ಗುರಿಯ ಕಡೆ ಗಮನ ಕೊಡಬೇಕು.


ಕಳೆದ ವರ್ಷ ಹಾಕಿಕೊಂಡು ಯೋಚನೆಗಳು ಸಂಪೂರ್ಣವಾಗಿಲ್ಲ ಎಂದು ಈ ವರ್ಷಕ್ಕೆ ಯೋಜನೆ ಹಾಕದೆ ಬಿಡಲಾರೆ. ಮತ್ತೆ 2026ಕ್ಕೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಕಳೆದ ವರ್ಷ ಮಾಡಿದ ತಪ್ಪನ್ನು ಎಂದು ಮರುಕಳಿಸುವುದಿಲ್ಲ. ಮಾಡಿದ ತಪ್ಪುಗಳಿಂದ ಪಾಠ ಕಲಿತು ಈ ವರ್ಷ ಸಂಪೂರ್ಣವಾಗಿ ಗುರಿ ಕಡೆ ಗಮನ ಕೊಡುತ್ತೇನೆ. 


ನನ್ನಂತೆ 2026 ಕ್ಕೆ ಹೊಸ ಯೋಜನೆಗಳನ್ನು ಹಾಕಿಕೊಂಡ ಎಲ್ಲರಿಗೂ ಸಫಲತೆ ಕಾಣಲಿ ಎಂದು ಶುಭ ಹಾರೈಸುತ್ತಾ, ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ವರ್ಷ ನಿಮ್ಮದಾಗಲಿ.




- ಅನಿತಾ ಹೂಗಾರ್‌,

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top