ಮಹಿಳಾ ಶಿಕ್ಷಣ ಕ್ರಾಂತಿಯ ಸಾವಿತ್ರಿ ಬಾಯಿ ಫುಲೆ

Upayuktha
0


ಮಾಜ ಸುಧಾರಕಿ, ಮಹಿಳಾ ಶಿಕ್ಷಣದ ಪ್ರತಿಪಾದಕಿ ಸಾವಿತ್ರಿ ಬಾಯಿ ಫುಲೆ ಇವರ ಜನನ 3ನೇ ಜನವರಿ 1831ರಲ್ಲಿ ಸತಾರಾ ಜಿಲ್ಲೆಯ ನಾಯ್‌ಗಾವ್‌ನಲ್ಲಿ ಮಾಲಿ  ಸಮುದಾಯದಲ್ಲಿ ಆಯಿತು. ಇವರ ತಾಯಿ ಲಕ್ಷ್ಮಿ ತಂದೆ ಪಾಟೀಲ ಇವರ ಮನೆಯಲ್ಲಿ ಕೊನೆಯ ಮಗಳಾಗಿ ಜನಿಸಿದ ಇವರ ವಿವಾಹವು  ಅಂದಿನ ಕಾಲದಂತೆ ಸಣ್ಣ ವಯಸ್ಸಿನಲ್ಲಿಯೇ ಅಂದರೆ 9-10 ವರ್ಷ ಇರುವಾಗಲೇ ವಿವಾಹವು ಜ್ಯೋತಿರಾವ್‌ ಫುಲೆ ಇವರೊಂದಿಗೆ ಆಯಿತು. ಸಾವಿತ್ರಿ ಬಾಯಿಯವರ ಶಿಕ್ಷಣವು ಮನೆಯಲ್ಲಿ ಪತಿಯ ಆಸೆ ಆಶಯದಂತೆ ಮದುವೆಯ ಅಶಿಕ್ಷಿತರಾಗಿದ್ದ ಸಾವಿತ್ರಿ ಬಾಯಿಯವರಿಗೂ ಮತ್ತು ಅವರ ಸಹೋದರ ಸಂಬಂಧಿ ಸಗುಣಬಾಯಿ ಶೀರಸಾಗರ ಇವರಿಬ್ಬರನ್ನು ಜ್ಯೋತಿರಾವ್ ಫುಲೆಯವರು ವಿದ್ಯಾಭ್ಯಾಸ ಕೊಡಿಸಲು ಆರಂಭಿಸಿದರು. ಮೊದಲಿಗೆ ಮನೆಯಲ್ಲಿಯೇ ಕಲಿಯುತ್ತಿದ್ದ ಈ ಇಬ್ಬರೂ ಮಹಿಳೆಯರು ನಂತರದಲ್ಲಿ ಸಖರಾಮ್‌ ಯಶವಂತ ಪರಾಂಜಪೆ ಮತ್ತು ಕೇಶವ ಶಿವರಾಮ್‌ ಭಾವಲ್‌ಕರ್‌ ಇವರ ಮಾರ್ಗದರ್ಶನದಲ್ಲಿ ನಡೆಯಿತು.


ಸಾವಿತ್ರಿ ಬಾಯಿಯವರು ತಮ್ಮ ಶಿಕ್ಷಕ ತರಬೇತಿಯನ್ನು ಪುಣೆ ಮತ್ತು ಅಹಮದ್‌ನಗರದಲ್ಲಿ ಪಡೆದುಕೊಂಡು ಭಾರತದ ಮೊದಲ ಮಹಿಳಾ ಶಿಕ್ಷಕಿಯಾದರು. ಇವರ ಶಿಕ್ಷಣವು ಆಂಗ್ಲ ಭಾಷೆಯಲ್ಲಿ ಕೂಡ ನಡೆಯಿತು. 1846-47ರ ಹೊತ್ತಿಗೆ ಇವರು ತಮ್ಮ 3ನೇ ಮತ್ತು ನಾಲ್ಕನೇ ತರಬೇತಿ ಪೂರೈಸಿದ ನಂತರ ಸಗುಣಬಾಯಿ ಶೀರ ಸಾಗರ ಅವರು ನಿರ್ಮಿಸಲು ಇಚ್ಛಿಸಿದ ಹೆಣ್ಣುಮಕ್ಕಳ ಶಾಲೆಯ ಬೆನ್ನೆಲುಬಾಗಿ ನಿಂತು, ಹಿಂದುಳಿದ ವರ್ಗಗಳ ಮಹಿಳೆಯರ ಉತ್ಥಾನಕ್ಕಾಗಿ ಮಹಿಳಾ ಶಾಲೆಯನ್ನು ಆರಂಭಿಸುವ ಮಹಾನ್ ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಿ ಇವರು ಭಾರತದ ಮೊದಲ ತರಬೇತಿ ಪಡೆದ ಮಹಿಳಾ ಮುಖ್ಯೋಪಾಧ್ಯಯಿನಿಯಾದರು. ಇವರು 1848ರಲ್ಲಿ ಭಾರತ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ಪತಿ ಜ್ಯೋತಿರಾವ್‌ ಮತ್ತು ಸಗುಣಬಾಯಿ ಶೀರ ಸಾಗರ ಅವರೊಟ್ಟಿಗೆ ಪುಣೆಯ ಭೀಡೆವಾಡಾದಲ್ಲಿ ಅರಂಭ ಮಾಡಿದ ಆ ಶಾಲೆಯ ಪಠ್ಯಕ್ರಮದಲ್ಲಿ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರಗಳನ್ನು ಓದಿಸುವ ಮೂಲಕ ಕ್ರಾಂತಿಯನ್ನು ತಂದರು, ಸಮಾಜದಿಂದ ಇದ್ದ ತೀವ್ರ ವಿರೋಧದ ನಡುವೆ ಯಶಸ್ವಿಯಾಗಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನಾರಂಭಿಸಿದ ದಿಟ್ಟ ಮಹಿಳೆ ಸಾವಿತ್ರಿ ಬಾಯಿ ಫುಲೆ. ಆಧುನಿಕ ಭಾರತದ ಮಹಿಳಾ ಶಿಕ್ಷಣ ಮಾತೆಯಾಗಿ ಗುರುತಿಸಲ್ಪಟ್ಟರು.


ಪ್ರಮುಖವಾಗಿ ಸಾವಿತ್ರಿ ಬಾಯಿಯವರ ಪ್ರಯತ್ನ ಹಿಂದುಳಿದ ಮಹಿಳೆಯರ ಉತ್ಥಾನವಾಗಿದ್ದಿತು. ಸಮಾಜದಲ್ಲಿ ನಡೆಯುತ್ತಿದ್ದ ಲಿಂಗ ಮತ್ತು ಜಾತಿಯ ಅಸಮಾನತೆಯನ್ನು ವಿರೋಧಿಸಿ ಇವರ ಹೋರಾಟ ಬಹಳ ಮಹತ್ವವನ್ನು ಪಡೆಯುತ್ತದೆ. ಇವರು ಶಾಲೆಯನ್ನು ಆರಂಭಿಸಿ 2 ವರ್ಷಗಳಲ್ಲಿ ಅಂದರೆ 1851ರ ಹೊತ್ತಿಗೆ ಒಟ್ಟು 150 ಹೆಣ್ಣು ಮಕ್ಕಳಿಗೆ 18 ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ನೀಡಲು ಆರಂಭಿಸಿದ್ದರು. ಸಾವಿತ್ತಿ ಬಾಯಿಯವರ ಈ ಸಮಾಜ ಸುಧಾರಣೆ ಮತ್ತು ಶಿಕ್ಷಣದ ಪ್ರಯತ್ನಗಳಿಗೆ ಅಪಾರ ವಿರೋಧವು ಸಮಾಜದ ಎಲ್ಲ ಕಡೆಗಳಿಂದ ದೊರೆಯಿತು. ಸಮಾಜದ ಒಳಗಿಂದ ಮಾತ್ರವಲ್ಲದೇ ಜ್ಯೋತಿರಾವ್ ಅವರ ತಂದೆಯಿಂದ ದಂಪತಿಗಳನ್ನು ಪಾಪ ಮಾಡಿರುವಿರಿ ಎಂಬ ಕಾರಣ ನೀಡಿ ಮನೆಯಿಂದ ಹೊರ ಹಾಕಲಾಯಿತು.


ಇದರ ಜೊತೆಗೆ ಮಹಿಳಾ ಸೇವಾ ಮಂಡಳ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು ಈ ಸಂಸ್ಥೆಯ ಮೂಲಕ ಮಹಿಳೆಯ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ತಮ್ಮ ಅಧಿಕಾರಕ್ಕಾಗಿ ಹೋರಾಡುವಂತೆ ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿದರು. ಅಂದಿನ ಕಾಲದಲ್ಲಿ ನಡೆಯುತ್ತಿದ್ದ ಸತಿ ಪದ್ಧತಿ ಮತ್ತು ಬಾಲ ವಿಧವೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಪ್ಪಿಸಲು 1863ರಲ್ಲಿ ಜ್ಯೋತಿರಾವ ಇವರ ಸ್ನೇಹಿತ ಸದಾಶಿವ ಬಲ್ಲಾಲ್ ಗೋವಂದೇಯವರ ಜೊತೆಗೂಡಿ “ಬಾಲಹತ್ಯಾ ಪ್ರತಿಬಂಧಕ ಗೃಹ” ಎಂಬ ಹೆಸರಿನ ವಿಧವಾ ಆಶ್ರಮವನ್ನು ವಿಶೇಷವಾಗಿ ಗರ್ಭಿಣಿ ವಿಧವಾ ಸ್ತ್ರೀಯರ ರಕ್ಷಣೆಗಾಗಿ ಸ್ಥಾಪಿಸಿದ್ದರು. ವಿಧವಾ ಸ್ತ್ರೀ ಮಗುವಿನ ಜನನದ ನಂತರ ಮತ್ತೆ ಮದುವೆಯಾಗುವ ಉದ್ದೇಶ ಇದ್ದಲ್ಲಿ ಮಕ್ಕಳನ್ನು ಆಶ್ರಮದಲ್ಲಿಟ್ಟು ಕೊಂಡು ಬೆಳಸಲಾಗುತ್ತಿತ್ತು. ಈ ವಿಧವಾ ಸಂರಕ್ಷಣೆಯ ಆಶ್ರಮವನ್ನು 1880ರ ಮಧ್ಯದ ವರೆಗೂ ನಡೆಸಿದರು.


ಸಾವಿತ್ರಿಬಾಯಿ ಫುಲೆಯವರು 1854ರಲ್ಲಿ ಕಾವ್ಯ ಫುಲೆ ಮತ್ತು 1892ರಲ್ಲಿ ಬಾವನ್ ಕಾಶಿ ಸುಬೋಧ ರತ್ನಾಕರ ಎಂಬ ಗ್ರಂಥಗಳನ್ನು ಬರೆದಿದ್ದರು. ಇವರ ಪ್ರಮುಖ ಗೀತೆ ಹೋಗಿ ನಿಮ್ಮ ಶಿಕ್ಷಣ ಪಡೆಯಿರಿ ಅತೀ ಪ್ರಸಿದ್ಧವಾದ ಗೀತೆಯಾಗಿತ್ತು.


ಸಾವಿತ್ರಿ ಬಾಯಿ ಫುಲೆಯವರಿಗೆ ಸ್ವಂತ ಮಕ್ಕಳು ಇದ್ದಿಲ್ಲ ಮಗ ಯಶವಂತನನ್ನು ಇವರು ದತ್ತು ತೆಗೆದುಕೊಂಡಿದ್ದರು. 1897ರಲ್ಲಿ ಪ್ರಾಣಾಂತಿಕವಾದ ಪ್ಲೇಗ್ ಕಾಯಿಲೆಯು ಹರಡಿದಾಗ ಸಾವಿತ್ರಿ ಬಾಯಿ ಮತ್ತು ಅವರ ಮಗ ಯಶವಂತ ರೋಗಿಗಳನ್ನು ಉಳಿಸಲು ಚಿಕಿತ್ಸಾಲಯವನ್ನು ಆರಂಭಿಸಿದ್ದರು. ಪುಣೆಯ ಹೊರ ಭಾಗದಲ್ಲಿ ಈ ಚಿಕಿತ್ಸಾಲಯವನ್ನು ಸ್ಥಾಪಿಸಲಾಗಿತ್ತು. ಪಾಂಡುರಂಗ ಬಾಬಾಜಿ ಗಾಯಕವಾಡರ ಮಗನ ಶುಶ್ರೂಷೆಯನ್ನು ಉಳಿಸಲು ಅವನ ಶುಶ್ರೂಷೆಯನ್ನು ಮಾಡುತ್ತಾ ಸಾವಿತ್ರಿ ಬಾಯಿ ಬುಬಾನಿಕ್ ಪ್ಲೇಗ್ ರೋಗಕ್ಕೆ ಬಲಿಯಾಗಿ ಮರಣವನ್ನು ಹೊಂದಿದರು.


- ಮಾಧುರಿ ದೇಶಪಾಂಡೆ, ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top