ಸುರತ್ಕಲ್: ಹಿರಿಯ ನಾಗರಿಕರ ಅರೋಗ್ಯಮತ್ತು ಆರೈಕೆ ಕುರಿತು ಕಿರಿಯರಿಗೆ ಹೆಚ್ಚಿನ ಅರಿವಿನ ಅಗತ್ಯವಿದೆ. ವಯೋ ಸಹಜವಾಗಿ ಬರುವ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಮರೆವಿನ ಕಾಯಿಲೆಗಳನ್ನು ಹಿರಿಯರನ್ನು ಪೀಡಿಸಿದಾಗ ತಾಳ್ಮೆಯಿಂದ ಆರೈಕೆ ಮಾಡಬೇಕಾಗುತ್ತದೆ. ವೃದ್ಧಾಪ್ಯದಲ್ಲಿ ವಿವಿಧ ಕಾಯಿಲೆಯಿಂದ ಪೀಡಿತರಾಗುವವರೆಗೆ ಏಕ ಕೇಂದ್ರದಲ್ಲಿ ಚಿಕಿತ್ಸಾ ಸೌಲಭ್ಯಗಳು ದೊರಕಬೇಕಾಗಿದೆ ಎಂದು ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜೀರಿಯಾಟ್ರಿಕ್ ವಿಭಾಗದ ಮುಖ್ಯಸ್ಥೆ ಡಾ. ಪ್ರಭಾ ಅಧಿಕಾರಿ ನುಡಿದರು.
ಅವರು ರೋಟರಿ ಸುರತ್ಕಲ್, ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್, ಇನ್ನರ್ ವೀಲ್ ಕ್ಲಬ್, ಸುರತ್ಕಲ್ ಮತ್ತು ನಾಗರಿಕ ಸಲಹಾ ಸಮಿತಿ ಸುರತ್ಕಲ್ ಸಹಯೋಗದಲ್ಲಿ ಆಯೋಜಿಸಿದ್ದ 'ವೃದ್ಧಾಪ್ಯ ಜಾಗ್ರತೆ ಮತ್ತು ಆರೈಕೆ' ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಹಿರಿಯರಿಗೆ ಏಕಾಂಗಿತನ ಕಾಡದಂತೆ ನೋಡಿಕೊಳ್ಳಬೇಕು. ಹಿರಿಯ ನಾಗರಿಕರ ಗುಂಪುಗಳನ್ನು ರಚಿಸಿ ಕೊಳ್ಳುವುದರೊಂದಿಗೆ ವಿವಿಧ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕು. ನಿಯಮಿತ ಆಹಾರ, ನಿಯಮಿತ ಕಾಲ್ನಡಿಗೆ, ವ್ಯಾಯಮಗಳು ಅರೋಗ್ಯವಂತರನ್ನಾಗಿಸಲು ಸಹಕಾರಿಯಾಗಿದೆ ಎಂದರು.ವಾತ್ಸಲ್ಯ ದ
ವಾತಾವರಣ, ಸಹಾನುಭೂತಿ ಮತ್ತು ಸಂತಸದ ಮಾತುಗಳು ಹಿರಿಯರನ್ನು ಕ್ರಿಯಾಶೀಲರನ್ನಾಗಿಸಲು ಪೂರಕವಾಗಿದೆ ಎಂದರು.
ಅಧ್ಯಕ್ಷತೆಯನ್ನು ಸುರತ್ಕಲ್ ರೋಟರಿಯ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ವಹಿಸಿದ್ದರು. ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಸ್ವಾಗತಿಸಿದರು. ಸುರತ್ಕಲ್ ರೋಟರಿಯ ಕಾರ್ಯದರ್ಶಿ ರಾಮಮೋಹನ್. ವೈ. ವಂದಿಸಿದರು.
ರೋಟರಿ ಕ್ಲಬ್ ಮಂಗಳೂರು ಕೋಸ್ಟಲ್ ನ ಅಧ್ಯಕ್ಷ ಸುಬೋಧ್ ಕುಮಾರ್ ದಾಸ್, ಕಾರ್ಯದರ್ಶಿ ಕಿರಣ್ ಪ್ರಸಾದ್ ರೈ, ಸುರತ್ಕಲ್ ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿ ಡಾ. ರೇಷ್ಮಾ ರಾವ್, ನಾಗರಿಕ ಸಲಹಾ ಸಮಿತಿಯ ಕಾರ್ಯದರ್ಶಿ ಸತೀಶ್ ಸದಾನಂದ್. ಸುರತ್ಕಲ್ ರೋಟರಿ ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ, ಸಾಮಾಜಿಕ ಸೇವಾ ನಿರ್ದೇಶಕ ಚಂದ್ರಕಾಂತ್ ಮರಾಠೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ ಪ್ರಭಾ ಅಧಿಕಾರಿಯವರನ್ನು ಅನುಪಮ ವೈದ್ಯಕೀಯ ಸೇವೆಗಾಗಿ ಸಂಮಾನಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

