ಪರ್ಕಳ: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ ವತಿಯಿಂದ ಭಾನುವಾರ (ಜ.4) ಹೋಂ ಡಾಕ್ಟರ್ ಫೌಂಡೇಶನ್ ಸ್ವರ್ಗ ಉಚಿತ ಆಶ್ರಮ ಕೊಳಲಗಿರಿ ಉಡುಪಿ ಇಲ್ಲಿಗೆ ಭೇಟಿ ನೀಡಿ ಆಶ್ರಮಕ್ಕೆ ವೇದಿಕೆ ವತಿಯಿಂದ ಬೆಳಗಿನ ಉಪಹಾರ ವ್ಯವಸ್ಥೆ ಹಾಗೂ ಆಶ್ರಮಕ್ಕೆ ಬೇಕಾಗಿರುವಂತಹ ದಿನಸಿ ಸಾಮಗ್ರಿಗಳಾದ ಅಕ್ಕಿ, ಬೇಳೆ ಕಾಳು, ಎಣ್ಣೆ, ಬೆಲ್ಲ, ಹಣ್ಣು ಹಂಪಲುಗಳು ಹಾಗೂ ದಿನಬಳಕೆಯ ವಸ್ತುಗಳಾದ ಫಿನಾಯಿಲ್, ಟೂತ್ ಪೇಸ್ಟ್, ಸಾಬೂನು ಹಾಗೂ ಆಶ್ರಮಕ್ಕೆ ಅಗತ್ಯವಿರುವ ಇಡ್ಲಿ ತಯಾರಿಸುವ ಪಾತ್ರೆಯನ್ನು ನೀಡಲಾಯಿತು.
ವಿತರಣಾ ಸಮಾರಂಭದಲ್ಲಿ ಆಶ್ರಮದ ಮುಖ್ಯಸ್ಥ ಡಾ. ಶಶಿಕಿರಣ್ ಶೆಟ್ಟಿ ಇವರು ಸ್ವಾಗತಿಸಿ ಆಶ್ರಮದ ಪರಿಚಯ ಮಾಡಿಕೊಟ್ಟರು. ವೇದಿಕೆ ಮೇಲೆ ಮಂಗಳಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ನಟರಾಜ ಪರ್ಕಳ, ಗೌರವಾಧ್ಯಕ್ಷ ಕೆ. ಪ್ರಕಾಶ್ ಶೆಣೈ, ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಉಪಸ್ಥಿತರಿದ್ದು ಸಮಯೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆ ಸದಸ್ಯರಾದ ಗಣೇಶ್ ಸಣ್ಣಕ್ಕಿಬೆಟ್ಟು ಸಂದೀಪ್ ನಾಯ್ಕ್ ಕಬ್ಯಾಡಿ, ಗಜೇಂದ್ರ ಆಚಾರ್ಯ ಬಾಳ್ಕಟ್ಟ, ಗೋಪಿ ಹಿರೇಬೆಟ್ಟು ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು ಅನಂತ್ ರಾಮ್ ನಾಯಕ್ ಸಣ್ಣಕ್ಕಿಬೆಟ್ಟು ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು ಸತೀಶ್ ಶೆಟ್ಟಿಗಾರ್ ಬಸವರಾಜ್ ನಡಿದಾರೆ ಉಪಸ್ಥಿತರಿದ್ದರು.
ಸಮಾರಂಭದ ಕೊನೆಯಲ್ಲಿ ಆಶ್ರಮದ ಮುಖ್ಯಸ್ಥ ಡಾ. ಶಶಿಕಿರಣ್ ಶೆಟ್ಟಿ ಹಾಗೂ ಆಶ್ರಮದ ಮೇಲ್ವಿಚಾರಕ ಹರೀಶ್ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


