ಗುಂಪೆ ವಲಯ ಹಳ್ಳಕೋಡ್ಲು ಘಟಕದ ಗುರುವಂದನೆ- ದೀಪಕಾಣಿಕೆ ಕಾರ್ಯಕ್ರಮ

Upayuktha
0


ಧರ್ಮತ್ತಡ್ಕ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಹಳ್ಳಕೋಡ್ಲು ಘಟಕದ ಗುರುವಂದನೆ- ದೀಪಕಾಣಿಕೆ ಕಾರ್ಯಕ್ರಮವು ಭಾನುವಾರ (ಜ.11)  ಅಪರಾಹ್ನ ಧಾರ್ಮಿಕ ಚಿಂತನೆ ಮತ್ತು ಶ್ರೀಗುರು ಪೀಠದ ಮಹತ್ವವನ್ನು ಜಾಗೃತಗೊಳಿಸುವ ಮೂಲಕ ಅತ್ಯಂತ ಭಾವಪೂರ್ಣವಾಗಿ ನೆರವೇರಿತು. 


ಘಟಕದ ಗುರಿಕ್ಕಾರರಾದ ಇ.ಎಚ್. ಗಣಪತಿ ಭಟ್ಟರ ಹಳ್ಳಕೋಡ್ಲು ನಿವಾಸದಲ್ಲಿ ಜರುಗಿದ ಕಾರ್ಯಕ್ರಮವು ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾಯಿತು. ಇ.ಎಚ್. ಗಣಪತಿ ಭಟ್ಟರು ಪ್ರಾಸ್ತಾವಿಕ ನುಡಿಗಳೊಂದಿಗೆ ದೀಪಕಾಣಿಕೆ, ಬೆಳೆಸಮರ್ಪಣೆ ಹಾಗೂ ಮಾಣಿ ಮಠದ ಕಾರ್ಯಕ್ರಮಗಳಿಗೆ ಸಲ್ಲಿಸಬೇಕಾಗಿರುವ ವಿವಿಧ ಸಮರ್ಪಣೆಗಳ ಮಾಹಿತಿಯನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರತಿಯೊಂದು ಸಮರ್ಪಣೆಯ ಧಾರ್ಮಿಕ ಮಹತ್ವ ಹಾಗೂ ಸಮಾಜಮುಖಿ ಉದ್ದೇಶಗಳನ್ನು ತಿಳಿಸಿದರು. ಸಮರ್ಪಣೆಗಳು ಕೇವಲ ಆರ್ಥಿಕ ಸಹಾಯವಲ್ಲ, ಅವು ನಂಬಿಕೆ, ನಿಷ್ಠೆ ಮತ್ತು ಗುರುಪರಂಪರೆಯ ಮೇಲಿನ ಅಪಾರ ಗೌರವದ ಪ್ರತೀಕಗಳೆಂದು ವಿವರಿಸಿದರು. 

 

ಗುಂಪೆ ವಲಯದ ಲೇಖ ವಿಭಾಗ ಪ್ರಧಾನರಾದ ಇ.ಎಚ್. ಗೋವಿಂದ ಭಟ್ ಅವರು ಸಭೆಯನ್ನು ಉದ್ದೇಶಿಸಿ ಶ್ರೀರಾಮಚಂದ್ರಾಪುರ ಮಠದ ವಿವಿಧ ಯೋಜನೆಗಳ ಸಂಪೂರ್ಣ ವಿವರಗಳನ್ನು ಪ್ರಸ್ತುತಪಡಿಸಿದರು.


ಸಭೆಯ ಅಧ್ಯಕ್ಷತೆ ವಹಿಸಿದ ಗುರಿಕ್ಕಾರರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, 'ಈ ದೀಪಕಾಣಿಕೆ ಕಾರ್ಯಕ್ರಮವು ಕೇವಲ ಒಂದು ದಿನದ ಆಚರಣೆಯಾಗಿ ಉಳಿಯದೆ, ದೈನಂದಿನ ಜೀವನದಲ್ಲಿ ಧರ್ಮಾಚರಣೆಯ ದೀಪವಾಗಿ ನಿರಂತರವಾಗಿ ಬೆಳಗಲಿ' ಎಂಬ ಆಶಯ ವ್ಯಕ್ತಪಡಿಸಿದರು.


ಹಳ್ಳಕೋಡ್ಲು ಘಟಕದ ಶಿಷ್ಯಬಂಧುಗಳು ಪಾಲ್ಗೊಂಡು ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ ಮಾಡಿದರು. ಶ್ರೀರಾಮ ತಾರಕ ಶಾಂತಿಮಂತ್ರದೊಂದಿಗೆ ಸಭೆ ಸಂಪನ್ನವಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top