ಹಿರಿಯಡ್ಕ: ಬೆಳ್ಳರ್ಪಾಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಶ್ರೀಮನ್ಮಹಾರಥೋತ್ಸವದ ಅಂಗವಾಗಿ ಜ.13ರಂದು ಧ್ವಜಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಾರ್ಷಿಕ ರಥೋತ್ಸವದ ಅಂಗವಾಗಿ ಉತ್ಸವಗಳು ಜ.19ರವರೆಗೆ ನಡೆಯಲಿವೆ.
ಜ. 12ರಂದು ಗಣಪತಿ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಭೇರಿತಾಡನ, ಮೃತ್ತಿಕಾ ಸಂಗ್ರಹ ಹಾಗೂ ಅಂಕುರಾರೋಪಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು. ಜ. 13ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿತು. ಬಳಿಕ ತಾರ್ಕ್ಷ್ಯ ಹೋಮ, ಅಗ್ನಿಜನನ, ಪ್ರಧಾನ ಹೋಮ, ಕಲಶಾಭಿಷೇಕ, ನ್ಯಾಸಪೂಜೆ ಹಾಗೂ ಮಹಾಪೂಜೆ ನೆರವೇರಲಿದೆ. ಇದೇ ದಿನ ಉತ್ಸವ ಬಲಿ, ಸವಾರಿ ಬಲಿ ಹಾಗೂ ಆರಾಧನಾ ಬಲಿಗಳು ನಡೆದವು.
ಇಂದು (ಜ. 14) ಮಕರ ಸಂಕ್ರಾಂತಿಯ ಪ್ರಯುಕ್ತ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ನಾಗದೇವರಿಗೆ ನವಕ ಕಲಶಾಭಿಷೇಕ ನಡೆದವು. ಸಂಜೆ ದೀಪಾರಾಧನಾ ರಂಗಪೂಜೆ ಹಾಗೂ ಶ್ರೀಭೂತಬಲಿ ನೆರವೇರಲಿದೆ.
ಜ. 15ರಂದು ದುರ್ಗಾಹೋಮ ನಡೆಯಲಿದ್ದು, ಬೆಳಿಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ ಮತ್ತು ಮಹಾಪೂಜೆ, ರಾತ್ರಿ ಭುಜಂಗ ಬಲಿ ಸಹಿತ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಜ. 16ರಂದು ಶ್ರೀಮನ್ಮಹಾರಥೋತ್ಸವದ ಪ್ರಮುಖ ದಿನವಾಗಿದ್ದು, ರಥಾಧಿವಾಸ, ರಥ ಸಂಪ್ರೋಕ್ಷಣೆ, ವಸಂತಪೂಜೆ, ಅಷ್ಟಾಂಗುಲ, ರಥಧ್ಯಾನ ಹಾಗೂ ಉತ್ಸವ ಬಲಿಗಳು ನಡೆಯಲಿವೆ. ಸಂಜೆ 7 ಗಂಟೆಗೆ ರಥೋತ್ಸವ ಪ್ರಾರ್ಥನೆ ಬಳಿಕ ಶ್ರೀಮನ್ಮಹಾರಥೋತ್ಸವ ನಡೆಯಲಿದ್ದು, ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ತಟಾಕೋತ್ಸವ, ವಾಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ, ಶ್ರೀಭೂತಬಲಿ ಹಾಗೂ ಶಯನೋಲಗ ನಡೆಯಲಿದೆ.
ಜ. 17ರಂದು ಬೆಳಿಗ್ಗೆ ಕವಾಟೋದ್ಘಾಟನೆ, ದಶವಿಧ ಸ್ನಾನ, ತುಲಾಭಾರಾದಿ ಸೇವೆ, ಬೊಬ್ಬರ್ಯ ಪೂಜೆ, ಅವಭೃತ ಸ್ನಾನ ಹಾಗೂ ಪೂರ್ಣಾಹುತಿ, ರಾತ್ರಿ ಧ್ವಜಾವರೋಹಣ ನಡೆಯಲಿದೆ.
ಜ. 18ರಂದು ಸೇವಾರೂಪದ ರಂಗಪೂಜೆ ಪ್ರಯುಕ್ತ ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಉತ್ಸವ ಬಲಿಗಳು ಹಾಗೂ ರಂಗಪೂಜೆ ನಡೆಯಲಿವೆ.
ಜ. 19ರಂದು ಸಂಪ್ರೋಕ್ಷಣೆ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಹಾಸಂಪ್ರೋಕ್ಷಣೆ, ನ್ಯಾಸಪೂಜೆ, ಮಹಾಪೂಜೆ, ದುರ್ಗಾ ಕಲಶ ಹಾಗೂ ಮಹಾಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ಪೂಜೆ, ಬೊಬ್ಬರ್ಯ ಪೂಜೆ ಹಾಗೂ ಮಾರಿ ಕಾರ್ಯಕ್ರಮದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಉತ್ಸವದ ಎಲ್ಲಾ ದಿನಗಳಲ್ಲಿ ಸಂಜೆ ವೇಳೆ ಬೆಳ್ಳರ್ಪಾಡಿ ಶ್ರೀ ಮಹಾವಿಷ್ಣುಮೂರ್ತಿ ಯುವಕ ಭಜನಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿ ಪ್ರಕಟಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

