ಡಾ. ಸುರೇಶ ನೆಗಳಗುಳಿ ಅವರಿಗೆ ಕದ್ರಿಹಿಲ್ಸ್ ಲಯನ್ಸ್ ಕ್ಲಬ್‌ನಿಂದ ಸಾಧಕ ಸನ್ಮಾನ

Upayuktha
0


ಮಂಗಳೂರು: ಕದ್ರಿಹಿಲ್ಸ್ ಮಂಗಳೂರು ಲಯನ್ಸ್ ಕ್ಲಬ್ ವತಿಯಿಂದ ನಗರದ ಖ್ಯಾತ ವೈದ್ಯರು ಹಾಗೂ ಸಾಹಿತಿ ಡಾ. ಸುರೇಶ ನೆಗಳಗುಳಿ ಅವರಿಗೆ ಜನವರಿ 20ರಂದು ಸಾಧಕ ಸನ್ಮಾನ ನೀಡಲಾಯಿತು. ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹಾಗೂ ಅವರ ಧರ್ಮಪತ್ನಿ ಡಾ. ಸುರೇಶ ನೆಗಳಗುಳಿ ಅವರಿಗೆ ಹಾರ, ಹಣ್ಣು ಮತ್ತು ಶಾಲು ಅರ್ಪಿಸಿ ಗೌರವಿಸಿದರು.


ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕಾತ್ಲಡ್ಕ ಸಂಜೀವ ಗೌಡ, ಲ. ಮಾಲಾ ಕಿಶೋರ್, ಲ. ಸ್ಮಿತಾ ಮಹೇಶ್, ಲ. ವಿದ್ಯಾ ಕಾಮತ್, ಲ. ಪ್ರಶಾಂತ್ ಪೈ, ಲ. ಪೂಜಾ ಪೈ, ಲ. ಪ್ರವೀಣ ಶೆಟ್ಟಿ, ಲ. ಎನ್.ಟಿ. ರಾಜ, ಲ. ಕೇಶವ ಭಟ್, ಲ. ಜ್ಯೋತಿ ಭಟ್, ಲ. ಗೋವಿಂದ ಶರ್ಮ, ಲ. ಗೀತಾ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಜಿತ್ ಕುಮಾರ್ ಪರಿಚಯ ವಾಚನ ಮಾಡಿದರು. ಆಕಾಶವಾಣಿ ಉದ್ಘೋಷಕಿ ಮಂಜುಳಾ ಪ್ರವೀಣ ಉಪಸ್ಥಿತರಿದ್ದರು.


ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ನೆಗಳಗುಳಿ ಮೂಲದವರಾದ ಡಾ. ಸುರೇಶ ನೆಗಳಗುಳಿ ಅವರು ತಿಮ್ಮಣ್ಣ ಭಟ್–ಸಾವಿತ್ರಿ ದಂಪತಿಗಳ ಪುತ್ರರು. ಡಾ. ಸಾವಿತ್ರಿಯವರ ಪತಿ ಹಾಗೂ ಸುಹಾಸ–ಶುಭಾ ದಂಪತಿಗಳ ತಂದೆಯಾಗಿದ್ದಾರೆ. ಮಿಶ್ರ ಪದ್ಧತಿ ಶಸ್ತ್ರ ಚಿಕಿತ್ಸಕ, ಮೂಲವ್ಯಾಧಿ, ಚರ್ಮರೋಗ ಮತ್ತು ಮೂತ್ರಕಲ್ಲುಗಳ ಕ್ಷಾರ ಚಿಕಿತ್ಸಾ ತಜ್ಞರಾಗಿರುವ ಅವರು ಪ್ರಾಧ್ಯಾಪಕ ಹಾಗೂ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಕೃತ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಸ್ಪತ್ರೆಯಲ್ಲಿ ಮುಖ್ಯ ಸಲಹಾ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಬಜಾಲ್ ಪಕ್ಕಲಡ್ಕದ ‘ಸುಹಾಸ’ ನಿವಾಸದಲ್ಲಿ ವಾಸವಾಗಿದ್ದಾರೆ.


ಮೂವತ್ತು ವರ್ಷಗಳಿಗೂ ಅಧಿಕ ಸೇವಾವಧಿಯಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲ, ಡೀನ್, ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್, ಬೋರ್ಡ್ ಹಾಗೂ ಫ್ಯಾಕಲ್ಟಿ ಸದಸ್ಯರಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.


ಸಾಹಿತ್ಯ ಕ್ಷೇತ್ರದಲ್ಲಿ ಹನ್ನೆರಡುಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿರುವ ಅವರು ‘ತುಷಾರ ಬಿಂದು’ ಬಹುಮಾನಿತ ಚಿತ್ರಕವನ ಸಂಕಲನ, ಆರು ಭಾಷೆಗಳ ಎರಡು ಗಜಲ್ ಸಂಕಲನಗಳು (‘ಪಡುಗಡಲ ತೆರೆಮಿಂಚು’, ‘ನೆಗಳಗುಳಿ ಗಜಲ್ಸ್’), ‘ಗೋ ಗೀತ’ (ಗೋವಿನ ಚುಟುಕು), ‘ಕಾವ್ಯ ಭೋಜನ’ (ಬಹುಮಾನಿತ ಚುಟುಕುಗಳು), ಕಗ್ಗ ಮಾದರಿಯ ‘ಧೀರತಮ್ಮನ ಕಬ್ಬ’ದ ಮೂರು ಸಂಪುಟಗಳು ಸೇರಿದಂತೆ ಅನೇಕ ಕೃತಿಗಳ ಕರ್ತೃರಾಗಿದ್ದಾರೆ. ‘ಕಡಲ ಹೂವು’ ಗಜಲ್ ಸಂಕಲನ, ‘ಬದುಕು ಬರೆಹ’, ‘ಕುವಲಯ’ ಗಜಲ್ ಸಂಕಲನ, ಜಯಕಿರಣ ಪ್ರಕಟಿತ ‘ಕಾವ್ಯಕಿರಣ’ ಕವನ ಸಂಕಲನಗಳು ವಿಶೇಷವಾಗಿ ಗಮನ ಸೆಳೆದಿವೆ.


ಬಂಟ್ವಾಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ, ಚಲನಚಿತ್ರ ನಟರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ (2022–24) ಕಾರ್ಯನಿರ್ವಹಿಸಿದ್ದಾರೆ.


ಜೇಸೀ ಸಂಸ್ಥೆಯ ಪೂರ್ವ ಅಧ್ಯಕ್ಷರು, ಹೆಚ್.ಜಿ.ಎಫ್. ಫೆಲೋಶಿಪ್ ಪಡೆದವರು, ಮೂಡುಬಿದಿರೆ ರೋಟರಿಯ ಮಾಜಿ ಸದಸ್ಯರು ಹಾಗೂ ಕದ್ರಿಹಿಲ್ಸ್ ಮಂಗಳೂರು ಲಯನ್ಸ್ ಕ್ಲಬ್‌ನ ಹಾಲಿ ಸದಸ್ಯರಾಗಿರುವ ಅವರು ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ‘ಶುಭ ಪ್ರಕಾಶನ’ ಎಂಬ ತಮ್ಮದೇ ಪ್ರಕಾಶನ ಸಂಸ್ಥೆಯ ಮೂಲಕ ಸಾಹಿತ್ಯ ಸೇವೆ ನಡೆಸುತ್ತಿದ್ದಾರೆ.


ವೈದ್ಯಕೀಯ ಹಾಗೂ ವೈದ್ಯಕೇತರ ಕ್ಷೇತ್ರಗಳಲ್ಲಿ ನೂರೈವತ್ತಕ್ಕೂ ಅಧಿಕ ಜಾಲತಾಣ ಪ್ರಶಸ್ತಿಗಳು ಹಾಗೂ ಮೂವತ್ತಕ್ಕೂ ಅಧಿಕ ವೇದಿಕಾ ಪ್ರಶಸ್ತಿಗಳನ್ನು ಪಡೆದಿರುವ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಗಜಲ್ ಕವಿ ಸನ್ಮಾನ, ‘ವಿಶ್ವ ವೈದ್ಯ ರತ್ನ’ ಪ್ರಶಸ್ತಿ ಹಾಗೂ ಕಾಸರಗೋಡಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸರ್ಕಾರದ ಆಪ್ತಮಿತ್ರ ವೈದ್ಯರಾಗಿ ಸೇವೆ ಸಲ್ಲಿಸಿ ‘ಕೋವಿಡ್ ವಾರಿಯರ್’ ಬಿರುದನ್ನೂ ಪಡೆದಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top