ಆಹಾರ ವಸ್ತುಗಳಲ್ಲಿರುವ ಕಲಬೆರಕೆ ಪತ್ತೆ ಹಚ್ಚುವಿಕೆ: ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ

Upayuktha
0


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಪದವಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ವಿವಿಧ ಆಹಾರ ಪದಾರ್ಥಗಳಲ್ಲಿರುವ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಮಾಡುವ ಪರೀಕ್ಷೆಗಳನ್ನು ಮಾಡಿ ತೋರಿಸಿ ಜಾಗ್ರತಿ ಮೂಡಿಸುವ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ದಿನ ನಿತ್ಯ ಬಳಕೆ ಮಾಡುವ ಹಾಲು, ಸಕ್ಕರೆ, ಬೆಲ್ಲ, ಜೇನುತುಪ್ಪ, ಅರಿಶಿನ ಹುಡಿ, ಗೋಧಿ ಹುಡಿ, ಅಕ್ಕಿ ಹಿಟ್ಟು, ಬೆಣ್ಣೆ, ತುಪ್ಪ, ತೆಂಗಿನ ಎಣ್ಣೆ...ಮುಂತಾದ ಆಹಾರ ಪದಾರ್ಥಗಳಲ್ಲಿರುವ ಕಲಬೆರಕೆಯನ್ನು ಪತ್ತೆ ಮಾಡಿ ತೋರಿಸಲಾಯಿತು. ಆಹಾರ ವಸ್ತುಗಳಲ್ಲಿ ಕಲಬೆರಕೆ ಮತ್ತು ಅದರ ದುಷ್ಪರಿಣಾಮದ ಬಗ್ಗೆ ಅಂತಿಮ ಬಿ.ಎಸ್.ಸಿ. ಪದವಿಯ ವಿದ್ಯಾರ್ಥಿನಿ ಮಧುಶ್ರೀಯವರು ಮಾಹಿತಿಯನ್ನು ನೀಡಿದರು. ಇಂದಿನ ಯುವಜನಾಂಗದ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ತಮ್ಮ ಹೆತ್ತವರಿಗೆ, ಬಂಧು ಮಿತ್ರರಿಗೆ ಹಾಗು ನೆರೆ ಹೊರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ವ್ಯಾಪಾರಿಗಳು ಹಾಗು ಮಧ್ಯವರ್ತಿಗಳು ಹೆಚ್ಚು ಹಣ ಗಳಿಸುವ ದುರುದ್ದೇಶದಿಂದ ಕಲಬೆರಕೆ ಮಾಡುತ್ತಾರೆ. ಇದರಿಂದಾಗಿ ಜನಸಾಮಾನ್ಯರು ವಿವಿಧ ರೋಗ ರುಜಿನಗಳಿಗೆ ತುತ್ತಾಗುವುದನ್ನು ತಪ್ಪಿಸಲು ಈ ರೀತಿಯ ತರಬೇತಿ ಕಾರ್ಯಕ್ರಮ ಪ್ರಯೋಜನಕಾರಿಯಾಗಿರುತ್ತದೆ. 


ಕಾಲೇಜಿನ ರಸಾಯನ ಶಾಸ್ತ್ರ ವಿಭಾಗ ಹಮ್ಮಿಕೊಂಡ ಈ ಸಮಾಜಮುಖಿ ತರಬೇತಿ ಕಾರ್ಯಕ್ರಮದಲ್ಲಿ ಅಂತಿಮ ಬಿ.ಎಸ್.ಸಿ. ಪದವಿಯ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉಜಿರೆಯ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ವಿಭಾಗದ ಮುಖ್ಯಸ್ಥರಾದ ನಂದಕುಮಾರಿ ಕೆ. ಪಿ. ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಈ ಕಾರ್ಯಕ್ರಮವನ್ನು ಉಪನ್ಯಾಸಕಿಯಾದ ದಿವ್ಯ ರವರು ಸಂಯೋಜಿಸಿದರು. ಉಪನ್ಯಾಸಕಿಯರಾದ, ಸಂಗೀತ ಬಿ., ವರ್ಷಿತಾ, ಹಾಗೂ ಉಪನ್ಯಾಸಕರಾದ ಡಾ. ನಾರಾಯಣ್ ಹೆಬ್ಬಾರ್, ಅಮಿತ್ ಕುಮಾರ್ ಇವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top