ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಂಸ್ಕೃತಿಕ ಸಂಭ್ರಮ

Upayuktha
0


ಕಾಸರಗೋಡು: ಡಾ. ವಾಣಿಶ್ರೀ ಅವರ ನೇತೃತ್ವದ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇವರ ವತಿಯಿಂದ ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 163ನೇ ಸಾಂಸ್ಕೃತಿಕ ಕಾರ್ಯಕ್ರಮ ಭವ್ಯವಾಗಿ ಜರಗಿತು. ಸಾಹಿತ್ಯಾಮೃತ–ಗಾನಾಮೃತ: ಕನ್ನಡ ಕೋಗಿಲೆಗಳ ಸ್ವರನಿನಾದ ಎಂಬ ಕಾರ್ಯಕ್ರಮವು ಶ್ರೋತೃಗಳ ಮನಗೆದ್ದಿತು.


ಸಂಸ್ಥೆಯ ಸಂಗೀತ ಕಲಾವಿದ ದಿವಾಕರ ಕಾಸರಗೋಡು ಅವರು ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು. ಡಾ. ವಾಣಿಶ್ರೀ ಅವರು ಕನ್ನಡ ಸಾಹಿತ್ಯ ಪ್ರಸ್ತುತಿ ನಡೆಸಿದರು. ಅಚ್ಯುತ ಭಟ್ ಸಂಸ್ಕೃತ ಶ್ಲೋಕ ಪಠಣ ಮಾಡಿದರು. ಸಂಗೀತ ಕಲಾರತ್ನ ದಿವಾಕರ ಕಾಸರಗೋಡು, ಸುರೇಶ್ ಪೈಕ ಹಾಗೂ ಶಶಿಕಲಾ ಅವರು ಸುಶ್ರಾವ್ಯ ಕನ್ನಡ ಭಕ್ತಿಗೀತೆಗಳನ್ನು ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.


ಕಾರ್ಯಕ್ರಮದ ಅಂತ್ಯದಲ್ಲಿ ಡಾ. ವಾಣಿಶ್ರೀ ಅವರಿಗೆ ಫಲ–ಪುಷ್ಪ–ಪ್ರಸಾದ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವಧನ ಹಾಗೂ ರಾಣಿ ಅಬ್ಬಕ್ಕ ಜೊತೆ ಪಯಣ ಪುಸ್ತಕ ನೀಡಿ ಪುರಸ್ಕರಿಸಲಾಯಿತು. ಅಚ್ಯುತ ಭಟ್ ಮತ್ತು ಶಶಿಕಲಾ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ದೇವಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top