ಹಾಸನ: ಇಪ್ಪತ್ತೊಂದನೇ ಶತಮಾನದ ಕಾಲಮಾನಕ್ಕೆ ಲೇಖಕ ಕೆ.ಎನ್. ಚಿದಾನಂದರವರ 'ಸಿರಿವನದ ಕುಸುಮಗಳು' ಕೃತಿ ಅಗತ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೌಲ್ಯಗಳು ಕಾಣದಾಗುತ್ತಿವೆ. ಕೃತಿಯಲ್ಲಿ ಮೂವತ್ತು ಜನರ ವ್ಯಕ್ತಿ ಚಿತ್ರಣಗಳನ್ನು ನೀಡಲಾಗಿದೆ. ಐತಿಹಾಸಿಕ ಪುರುಷರು, ತತ್ವಜ್ಞಾನಿಗಳು, ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ಸ್ವಾತಂತ್ರ ಹೋರಾಟಗಾರರ ಕುರಿತು ಕೃತಿಯು ಉಪಯುಕ್ತ ಮಾಹಿತಿ ನೀಡುತ್ತದೆ ಎಂದು ಕವಿ ಮತ್ತು ಸಾಹಿತಿಗಳಾದ ಡಾ. ಐಚನಹಳ್ಳಿ ಕೃಷ್ಣಪ್ಪನವರು ತಿಳಿಸಿದರು.
ತಾಲ್ಲೂಕಿನ ಸಮೀಪ ಗ್ರಾಮವಾದ ಮುತ್ತತ್ತಿ ಗೇಟ್ ನಲ್ಲಿರುವ ಕಂಚುಮಾರನಹಳ್ಳಿ ಕಾಂತಣ್ಣನವರ ತೋಟದ ಮನೆಯಲ್ಲಿ ರೋಟರಿ ಕ್ಲಬ್ ಆಫ್ ಸೆಂಟ್ರಲ್, ಹಾಸನ ಇವರ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದು, ವಿಶೇಷ ಹಾಗೂ ಅವಿಸ್ಮರಣೀಯವಾದ ನೆನಪು ಇದಾಗಿದೆ. ನಂತರ ಪುಸ್ತಕವನ್ನು ಪರಿಚಯಿಸುತ್ತಾ, ಈ ಕೃತಿಯನ್ನು ಇಂದಿನ ವಿದ್ಯಾರ್ಥಿಗಳು ಮತ್ತು ಯುವಜನತೆ ಅವಶ್ಯವಾಗಿ ಓದಬೇಕಾಗಿದೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತಿನಂತೆ ಈ ಶ್ರೇಷ್ಠ ವ್ಯಕ್ತಿಗಳ ಜೀವನಗಳನ್ನು ಓದಿ ತಿಳಿಯುವ ಮೂಲಕ ಅವರ ವ್ಯಕ್ತಿತ್ವದ ಉತ್ತಮ ಮೌಲ್ಯಗಳನ್ನು ಇಂದು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾ ಗಟ್ಟಿಯಾದಂತಹ ಮತ್ತು ಜೀವಂತಿಕೆಯ ಕ್ರಿಯಾಶೀಲ ಲೇಖಕರು ಕನ್ನಡ ಸಾಹಿತ್ಯಕ್ಕೆ ದೊರಕಿದ್ದಾರೆ. ಸಮರ್ಥವಾದ ಲೇಖನಗಳನ್ನು ಬರೆದಿರುವ ಲೇಖಕರಾದ ಕೆ.ಎನ್. ಚಿದಾನಂದ ರವರು ಸಾಹಿತ್ಯ ಮತ್ತು ಜ್ಞಾನದ ಲೋಕಕ್ಕೆ ಉತ್ತಮ ಕೃತಿಯನ್ನು ನೀಡಿದ್ದಾರೆ ಎಂದರು. ಈ ನಡುವೆ ಚಿದಾನಂದ ದಂಪತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರೊಟೇರಿಯನ್ ಕೆ.ಎಲ್. ರಮೇಶ್ ರವರು ಕಾರ್ಯಕ್ರಮದ ನಿರೂಪಿಸಿದರೆ, ರೊಟೇರಿಯನ್ ಬಿ.ಆರ್. ಬೊಮ್ಮೆಗೌಡರು ಸರ್ವರನ್ನು ರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊಟೇರಿಯನ್ ನಾಗೇಶ್, ಕಾರ್ಯದರ್ಶಿಗಳಾದ ರೊಟೇರಿಯನ್ ಅಶೋಕ್, ಖಜಾಂಚಿಗಳಾದ ರೊಟೇರಿಯನ್ ಯೋಗೇಶ್, ಕಂಚುಮಾರನಹಳ್ಳಿ ಕಾಂತಣ್ಣ ಮತ್ತಿತರ ರೊಟೇರಿಯನ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


