ಲೇಖಾ ಲೋಕ-61: ಗಮಕ ಸಾಹಿತ್ಯ ಸಂಗೀತ ಕಲಾವಿದರು- ಎಂ.ಆರ್ ಸತ್ಯನಾರಾಯಣ

Upayuktha
0




ಕನ್ನಡ ನಾಡಿನ ಹೆಸರಾಂತ ಗಮಕ ಕಲಾವಿದರಾಗಿದ್ದ ಎಂ ರಾಘವೇಂದ್ರ ರಾವ್ ಅವರ ಪುತ್ರರಾದ ಎಂ ಆರ್ ಸತ್ಯನಾರಾಯಣ ಅವರು ಬಹುಶ್ರುತ ವಿದ್ವಾಂಸರು. ಇವರ ತಂದೆ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕರು ಹಾಗೂ ಕನಕ-ಪುರಂದರ ಪ್ರಶಸ್ತಿ ಪುರಸ್ಕೃತರು. ಅದಲ್ಲದೇ ಕರ್ನಾಟಕ ನೀಡಿದ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪುರಸ್ಕೃತರಾದ ಮಹನೀಯರು. ಎಂ ಆರ್ ಸತ್ಯನಾರಾಯಣ ಅವರು 

ಆಕಾಶವಾಣಿ, ಬೆಂಗಳೂರಿನಲ್ಲಿ ಹಿರಿಯ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಪೂರೈಸಿ ನಿವೃತ್ತರಾದ ಅಧಿಕಾರಿ.


ಗಮಕ, ಸಾಹಿತ್ಯ, ಸಂಗೀತ ಹಾಗೂ ಗಮಕ ಸಂಗೀತ ನೃತ್ಯ ರೂಪಕ ರಚನೆಯಲ್ಲಿ ಪರಿಣಿತರು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರು ಮತ್ತು   ಕುವೆಂಪುರವರ  ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಗಮಕ ರೂಪ ಪ್ರಸ್ತುತಿ ಪಡಿಸಿ, ಜನ ಮೆಚ್ಚುಗೆಗೆ ಪಾತ್ರರಾದ ಮಹಾನುಭಾವರು. ಇವರು ಕರ್ನಾಟಕ ಸರಕಾರದ ಪ್ರತಿಷ್ಠಿತ ಕುಮಾರವ್ಯಾಸ ಪ್ರಶಸ್ತಿ ಆಯ್ಕೆ ಸಮಿತ ಸದಸ್ಯರು ಮತ್ತು ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದಾರೆ.


ಅನೇಕ ರೂಪಕಗಳ ರಚನೆಕಾರರು, ಸರಣಿ ಕಾರ್ಯಕ್ರಮಗಳ ಗಾಯಕರು ನಿರ್ದೇಶಕರು, ನಿರ್ಮಾಪಕರಾಗಿಯೂ ಸಹ ಕೆಲಸ ಮಾಡಿದ್ದಾರೆ. ಕನ್ನಡದ ಕಣ್ಮಣಿಗಳು ರಚನೆ, ಪರಿಕಲ್ಪನೆ, ನಿರ್ಮಾಣ ಮಾಡಿದ ಸಾಧಕರು. 2007ರಲ್ಲಿ ಆಕಾಶವಾಣಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಗಮಕ ಕಲಾವಿದರು. ಅನೇಕ ಕನ್ನಡ ಕವಿ ಶ್ರೇಷ್ಠ ಮಹನೀಯರ ಬಗ್ಗೆ ಗಮಕ ಸಂಗೀತ, ಕಾವ್ಯ ವಾಚನ ಮಾಡಿ ಜನ ಮನಸೂರೆಗೊಂಡ ಕಲಾವಿದರು.


ಆಕಾಶವಾಣಿ, ದೂರದರ್ಶನದ ಅನೇಕ ಕಾರ್ಯಕ್ರಮಗಳಲ್ಲಿ ಗಮಕ, ಕಾವ್ಯ ಸಂಗೀತ ಸುಧೆ ಹರಿಸಿ, ಜನಾನುರಾಗಿ ನಾಡಿಗೆ ಹೆಸರು ತಂದ ಮಹನೀಯರು ಸತತ 30 ವರ್ಷಗಳ ಕಾಲ ಕಾವ್ಯ ವಾಚನ ಕಾರ್ಯಕ್ರಮ, ಅನೇಕ ಗಮಕ ರೂಪಕಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಸಂಗೀತ ಕಲಾವಿದರು.


ಪಂಪನಿಂದ ಕುಮಾರವ್ಯಾಸನವರೆಗೆ ಕಾವ್ಯ ಪರಂಪರೆಯ ಪ್ರಸಾರ ಮಾಡಿ ಅನೇಕ ಕನ್ನಡ ಅಧ್ಯಾಪಕರಿಗೆ ಗಮಕ ಕಲಾ ಶಿಕ್ಷಣ ಶಿಬಿರ ಏರ್ಪಡಿಸಿದ್ದರು.


ವ್ಯಾಖ್ಯಾನಕಾರರ ಪ್ರತಿಭೆ ಬೆಳಕಿಗೆ ಬರಲು ವೇದಿಕೆ ನಿರ್ಮಾಣ ಮಾಡಿದ ಗಮಕ ಕಲಾವಿದರು. ದ್ರೌಪದಿ ಸ್ವಯಂವರ ಧ್ವನಿ ಸುರಳಿ ಬಿಡುಗಡೆ ಮಾಡಿ ನಾಡಿಗೆ ನೀಡಿದ್ದಾರೆ. ಅನೇಕ ಹೆಸರಾಂತ ನೃತ್ಯ ರೂಪಕಗಳನ್ನು ರಚಿಸಿ,ಪ್ರಸಿದ್ಧ ನೃತ್ಯ ಪಟುಗಳಿಂದ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿಸಿ, ನಾಡಿನಲ್ಲಿ ಪ್ರಸಿದ್ಧರಾದ ವಿದ್ವಾಂಸರು. ಆಕಾಶವಾಣಿಗಾಗಿ ನಿರ್ಮಿಸಿದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ರೂವಾರಿ. ಹರಿದಾಸ ಕೃತಿಗಳ ದಾಸಾಮೃತ ಕಾರ್ಯಕ್ರಮ ಲೋಕೋಕ್ತಿ, ಕ್ಷೇತ್ರ ಜ್ಞಾನ ಪದ, ಸಂಗೀತ ರೂಪಕ, ಅರಿವಿನ ಗುರು ಅಲ್ಲಮ ನಿರ್ದೇಶನ  ಮಾಡಿ, ಆಕಾಶವಾಣಿಯಲ್ಲಿ ಗುರುತಿಸಿಕೊಂಡಿದ್ದ ಅಧಿಕಾರಿ.


ಎಂ ಆರ್ ಸತ್ಯನಾರಾಯಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಉಡುಪಿಯ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಸ್ವರಕಲಾ  ಗೌರವ ಪ್ರಶಸ್ತಿ, ವರ್ಷದ ಕಲಾವಿದ ಪ್ರಶಸ್ತಿ ಗಾಯನ ಸಮಾಜದಿಂದ ಗೌರವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರು, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಡಾ. ಹೆಚ್ ಶಾಂತಾ ರಾಮ್ ಪ್ರಶಸ್ತಿ, ನಾದಜ್ಯೋತಿ ಶ್ರೀ ತ್ಯಾಗರಾಜ ಸ್ವಾಮಿ ಭಜನಾ ಸಭಾದಿಂದ ಸನ್ಮಾನಿತರು, ವಿಶೇಷ ಪುರಸ್ಕಾರ ದಿ. ಡಿ ಸುಬ್ಬರಾಮಯ್ಯ ಚಾರಿಟಲ್ ಟ್ರಸ್ಟ್ ಸಂಗೀತ ಸಂಸ್ಥೆ, ಬೆಂಗಳೂರು ಇವರಿಂದ ದೊರೆತ ಮಹನೀಯರು.


ಇತ್ತೀಚೆಗೆ ಇವರಿಗೆ ಶ್ರೀ ರಾಮ ಸೇವಾ ಮಂಡಳಿಯಿಂದ ಲೈಫ್ ಟೈಂ ಅಚೀವ್ ಮೆಂಟ್ ಪುರಸ್ಕಾರ, ಹಾಗೂ ಡಾಕ್ಟರೇಟ್ ಪದವಿಯನ್ನು ಸಹ ಇವರಿಗೆ ಮೈಸೂರಿನ ಗಂಗೂಬಾಯಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನೀಡಿದೆ. ಪ್ರಸ್ತುತ ಎಂ ಆರ್ ಸತ್ಯನಾರಾಯಣ ಅವರು ಗಿರಿನಗರ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದು  ರಾಷ್ಟ್ರೀಯ ಸಂತ ಕವಿಗಳಾದ ಕನಕದಾಸ ಸಂಶೋಧನಾ ಮತ್ತು ಅಧ್ಯಯನ ಕೇಂದ್ರದ ಸಮನ್ವಯದ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top