ಶಾಸ್ತ್ರೀಯ ಸಂಗೀತದ ಕಲಿಕೆಗೆ ಭಜನೆ ಪ್ರೇರಕ

Upayuktha
0


ಸುರತ್ಕಲ್‌: ಶಾಸ್ತ್ರೀಯ ಸಂಗೀತದ ಕಲಿಕೆಗೆ ಭಜನೆ ಪ್ರೇರಕವಾಗಿದ್ದು ಎಳೆಯರಿಗೆ ಇದರ ಕುರಿತು ಆಸಕ್ತಿ ಮೂಡಿಸ ಬೇಕು. ಸಂಗೀತದ ಕಲಿಕೆಗೆ ನಿರಂತರ ಅಭ್ಯಾಸ ಬೇಕಾಗಿದ್ದು ಸಂಗೀತ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದು ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ಅಧ್ಯಕ್ಷ ಧನುರಾಜ್ ಅತ್ತಾವರ ನುಡಿದರು.


ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಮತ್ತು ನಾಗರಿಕ ಸಲಹಾ ಸಮಿತಿ (ರಿ.) ಸುರತ್ಕಲ್ ಸಹಯೋಗದಲ್ಲಿ ಸುರತ್ಕಲ್ ಮೇಲುಸೇತುವೆ ಯ ತಳಭಾಗದ ಎಂ.ಸಿ.ಎಫ್. ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುತ್ತಿರುವ ಉದಯ ರಾಗ ಸರಣಿ ಕಾರ್ಯಕ್ರಮದ ಉದಯರಾಗ- 63 ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಮನೆಗಳಲ್ಲಿ ಭಜನೆ ಪದ್ಧತಿ ಮುಂದುವರಿದಾಗ ಮಕ್ಕಳಲ್ಲಿ ಸಹಜವಾಗಿ ಭಕ್ತಿಯೊಂದಿಗೆ ಸಂಗೀತದ ರಾಗ ತಾಳ ಶ್ರುತಿಯ ಅರಿವು ಸಹಜವಾಗಿ ಮೂಡಿ ಬರುತ್ತದೆ. ಅಪಾರವಾದ ದಾಸ ಸಾಹಿತ್ಯದ ಜ್ಞಾನ ಪರಂಪರೆಯನ್ನು ಅರಿತು ತಿಳಿದು ಕೊಳ್ಳುವ ಕಾರ್ಯ ಸಂಸ್ಕೃತಿ ನಮ್ಮದಾಗಬೇಕು ಎಂದರು.


ಶ್ರೀ ಕೃಷ್ಣ ಭಜನಾ ಮಂಡಳಿ ಸುರತ್ಕಲ್ ಇವರಿಂದ ಹರಿನಾಮ ಸಂಕೀರ್ತನೆ ನಡೆಯಿತು. ಅನಂತ ಪದ್ಮನಾಭ ಕುಲ್ಲಾಂಗಲು ಮತ್ತು ರೊ. ರಮೇಶ್ ರಾವ್ ಮಧ್ಯ ನಾಮ ಸಂಕೀರ್ತನೆ ನಡೆಸಿ ಕೊಟ್ಟರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಗೋಪಾಲಕೃಷ್ಣ ಉಪಾಧ್ಯಾಯ ತಬಲದಲ್ಲಿ, ವೆಂಕಟಕೃಷ್ಣ ಭಟ್ ಮತ್ತು ತಾಳದಲ್ಲಿ ಪ್ರತೀಕ್ಷಾ ಭಟ್ ಸಹಕರಿಸಿದರು.


ಕೃಷ್ಣಮೂರ್ತಿ ಸ್ವಾಗತಿಸಿದರು. ನಿತ್ಯಾನಂದ ರಾವ್ ಪಿ. ವಂದಿಸಿದರು. ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಮತ್ತು ಕಾರ್ಯದರ್ಶಿ ಸತೀಶ್ ಸದಾನಂದ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top