ಅನಂತಪುರ: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಕಾರ್ಯಕ್ರಮ ವೈವಿಧ್ಯ

Upayuktha
0


ಕುಂಬಳೆ: ಅನಂತಪುರ ಕಣ್ಣೂರು ದೇವಸ್ಯ ದೈವದ ಗದ್ದೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಬೈಲಕೋಲ ಸೇವೆ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ವತಿಯಿಂದ 149 ನೇ ವೈವಿಧ್ಯಮಯ  ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು.


ಸಂಸ್ಥೆಯ ಕಲಾ ನಕ್ಷತ್ರಗಳಾದ ಭವಿಷ್ಯ ಅವರಿಂದ ಶ್ರೀ ಗಣಪತಿ ಹಾಡಿಗೆ, ಪೂಜಾಶ್ರೀ ಅವರಿಂದ ಭರತನಾಟ್ಯ ಚರಿಷ್ಮಾ ಅವರಿಂದ ಕನ್ನಡ ಹಾಡಿಗೆ ನೃತ್ಯ ಹಾಗೂ ಹಲವು ಬಗೆಯ ನೃತ್ಯ ಪ್ರಕಾರಗಳು ನಡೆದು ಜನರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಡಾ. ವಾಣಿಶ್ರೀ ಅವರಿಗೆ ಸ್ಮರಣಿಕೆ ಕೊಟ್ಟು ಹರಸಲಾಯಿತು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ಕೊಟ್ಟು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರಾದ ಮನು ಅನಂತಪುರ, ಅಚ್ಯುತಭಟ್, ಶಾಂತ ಪಜಿಲ, ಶೋಭಿತ, ಸೀತಾರಾಮ್, ಪ್ರೀಜಿತ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top