ಲೆಜೆಂಡ್ಸ್ ಪ್ರೊ T20 ಲೀಗ್ ಗೆ ಗೋವಾ ಟೂರಿಸಂ ಬೆಂಬಲ

Upayuktha
0




ಬೆಂಗಳೂರು: ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್ (WLPTL) ತನ್ನ ಬಹುನಿರೀಕ್ಷಿತ ಪ್ರಥಮ ಆವೃತ್ತಿಗೆ ಗೋವಾ ಟೂರಿಸಂ ಅನ್ನು ‘ಪವರ್ಡ್ ಬೈ’ ಪ್ರಾಯೋಜಕರಾಗಿ ಘೋಷಿಸಿದೆ. ಈ ಲೀಗ್ ಜನವರಿ 26 ರಿಂದ ಗೋವಾದಲ್ಲಿರುವ 1919 ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.


ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್ ಒಂದು ಅಪೂರ್ವ ಮಟ್ಟದ ಅಂತರರಾಷ್ಟ್ರೀಯ ಕ್ರಿಕೆಟ್ ಈವೆಂಟ್ ಆಗಿದ್ದು, ಆರು ತಂಡಗಳಿಗಾಗಿ ಒಟ್ಟು 90 ಕ್ರಿಕೆಟಿಗರನ್ನು ಆಯ್ಕೆ ಮಾಡಲಾಗಿದೆ. ಶೇನ್ ವಾಟ್ಸನ್, ಡೇಲ್ ಸ್ಟೇನ್, ಜಾಕ್ವಿಸ್ ಕಾಲಿಸ್, ಕ್ರಿಸ್ ಗೇಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಅಂತರರಾಷ್ಟ್ರೀಯ ದಿಗ್ಗಜರು ಹಾಗೂ ಶಿಖರ್ ಧವನ್, ದಿನೇಶ್ ಕಾರ್ತಿಕ್, ಹರ್ಭಜನ್ ಸಿಂಗ್ ಸೇರಿದಂತೆ ಭಾರತೀಯ ಕ್ರಿಕೆಟ್ ಲೆಜೆಂಡ್ಸ್‌ಗಳು ಈ ಪ್ರಾರಂಭಿಕ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಗೋವಾದ ಕ್ರಿಕೆಟ್ ಅಭಿಮಾನಿಗಳಿಗೆ ಟಿ20 ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರರನ್ನು ನೇರವಾಗಿ ನೋಡುವ ಅಪೂರ್ವ ಅವಕಾಶ ಸಿಗಲಿದೆ.


ನಾಲ್ಕು ದಶಕಕ್ಕೂ ಹೆಚ್ಚು ಕಾಲ ಗೋವಾ ಟೂರಿಸಂ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಗೋವಾವನ್ನು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಎಂದು ಸ್ಥಾಪಿಸಿದೆ. ಇದೀಗ ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್ ಎಂಬ ಅಂತರರಾಷ್ಟ್ರೀಯ ಕ್ರೀಡಾ ವೈಭವ ಗೋವಾಕ್ಕೆ ಆಗಮಿಸುತ್ತಿದ್ದು, ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಸಿದ್ಧ ಆಟಗಾರರನ್ನು ಈ ಲೀಗ್ ಒಳಗೊಂಡಿದೆ.


ಗೋವಾ ಸರ್ಕಾರದ ಪ್ರವಾಸೋದ್ಯಮ ಸಚಿವರಾದ ರೋಹನ್ ಖಾಂಟೆ ಅವರು ಮಾತನಾಡಿ, “ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್‌ಗೆ ಗೋವಾ ಆತಿಥ್ಯ ವಹಿಸುವುದು ನಮ್ಮ ಪ್ರವಾಸೋದ್ಯಮ ಮತ್ತು ಈವೆಂಟ್ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಲೀಗ್ ಜಾಗತಿಕ ಕ್ರಿಕೆಟ್ ದಿಗ್ಗಜರು ಮತ್ತು ಅಭಿಮಾನಿಗಳನ್ನು ಒಟ್ಟುಗೂಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ನೀಡುತ್ತದೆ,” ಎಂದು ಹೇಳಿದರು.


ಈ ಕುರಿತು ಮಾತನಾಡಿದ SGSE ಸಂಸ್ಥೆಯ ಸಿಇಒ ಮಹೇಶ್ ಭೂಪತಿ ಅವರು, “ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್‌ಗೆ ಗೋವಾ ಟೂರಿಸಂ ಅನ್ನು ‘ಪವರ್ಡ್ ಬೈ’ ಪ್ರಾಯೋಜಕರಾಗಿ ಸ್ವಾಗತಿಸುವುದಕ್ಕೆ ನಾವು ಅತ್ಯಂತ ಸಂತೋಷಪಡುತ್ತೇವೆ. ಈ ಲೀಗ್ ಗೋವಾವನ್ನು ಅಂತರರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳ ಪ್ರಮುಖ ತಾಣವಾಗಿ ಸ್ಥಾಪಿಸಲು ನೆರವಾಗುತ್ತದೆ,” ಎಂದು ಹೇಳಿದರು.


ವರ್ಲ್ಡ್ ಲೆಜೆಂಡ್ಸ್ ಪ್ರೋ T20 ಲೀಗ್‌ನಲ್ಲಿ ಲೆಜೆಂಡರಿ ಆಟಗಾರರು ಮತ್ತೆ ಮೈದಾನಕ್ಕಿಳಿಯುವ ಕ್ಷಣಗಳನ್ನು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾದು ನೋಡುತ್ತಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top