ಆಳ್ವಾಸ್‌ನಿಂದ ಎರಡನೇ ಬಾರಿ ‘ಆಕ್ವಾ ಸೌಂಡ್ ಮೆಡಿಟೇಶನ್’ ಅಧಿವೇಶನ

Upayuktha
0


ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆನಂದಮಯ  ಆರೋಗ್ಯಧಾಮ ಆಯೋಜಿಸಿದ್ದ ‘ಆಕ್ವಾ ಸೌಂಡ್ ಮೆಡಿಟೇಶನ್’ ಕಾರ್ಯಕ್ರಮಕ್ಕೆ ದೊರೆತ ಅಪಾರ ಸ್ಪಂದನೆಯ ಹಿನ್ನೆಲೆಯಲ್ಲಿ, ಎರಡನೇ ಅಧಿವೇಶನ ಶನಿವಾರದಂದು  ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಈಜುಕೊಳದಲ್ಲಿ ನಡೆಯಿತು. 


ಆಕ್ವಾ ಸೌಂಡ್ ಮೆಡಿಟೇಶನ್‌ನಲ್ಲಿ ಪ್ರಾಚೀನ ಯೋಗಶಾಸ್ತ್ರ ಹಾಗೂ ಅನುಭವಾಧಾರಿತ ಚಿಕಿತ್ಸಾ ವಿಜ್ಞಾನವನ್ನು ಒಗ್ಗೂಡಿಸಿ  ಭಾಗವಹಿಸುವವರಿಗೆ ನೀರಿನ ಮೇಲೆ ತೇಲುತ್ತಾ ಶಬ್ದ ಧ್ಯಾನವನ್ನು ಅನುಭವಿಸುವ ವಿನೂತನ ವ್ಯವಸ್ಥೆ ಮಾಡಲಾಗಿದೆ. ಈಜು ಬಾರದವರಿಗೂ ಸಂಪೂರ್ಣ ಸುರಕ್ಷಿತವಾಗಿರುವಂತೆ ಕಾರ್ಯಕ್ರಮ ರೂಪುಗೊಂಡಿದ್ದು, ಎಲ್ಲಾ ವಯೋಮನದವರಿಗೆ ಮುಕ್ತ ಅವಕಾಶವಿರಲಿದೆ.  ಖ್ಯಾತ ಸೌಂಡ್ ಮೆಡಿಟೇಶನ್ ಫೇಸಿಲಿಟೇಟರ್ ಡಾ ಗ್ರೀಷ್ಮಾ ವಿವೇಕ ಆಳ್ವ ಸೇಷನ್ ನಡೆಸಿಕೊಟ್ಟರು. 


ಈ ಶಬ್ದ ಧ್ಯಾನವನ್ನು ಪ್ರಮಾಣಿತ ಸೌಂಡ್ ಮೆಡಿಟೇಶನ್ ಪರಿಣಿತರು ನಡೆಸಿಕೊಡಲಿದ್ದಾರೆ. ಚಕ್ರ ಸಮತೋಲನಕ್ಕೆ ಹೊಂದಿಸಲಾದ ಟಿಬೆಟಿಯನ್ ಸಿಂಗಿಂಗ್  ಬೌಲ್‌ಗಳ ಧ್ವನಿ ಕಂಪನಗಳು, ಔರಾ ಶುದ್ಧೀಕರಣ ಹಾಗೂ ಸೋನಿಕ್ ವಾಶ್ ತಂತ್ರಗಳ ಮೂಲಕ ಭಾಗವಹಿಸುವವರನ್ನು ಗಾಢ ಮಾನಸಿಕ ಶಾಂತಿಯ ಹಿಪ್ನಗೋಗಿಕ್ ಸ್ಥಿತಿಗೆ ಕರೆದೊಯ್ಯಲಾಗುತ್ತದೆ.


ಈ ಶಿಬಿರದಿಂದ ಚಕ್ರ ಸಮತೋಲನ, ಮಾನಸಿಕ ಸ್ಥಿರತೆ ಹಾಗೂ ಆಂತರಿಕ ಸಮತೋಲನ ಸಾಧನೆ ಸಾಧ್ಯವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಗಮನಕ್ಷಮತೆ ಹಾಗೂ ಸ್ಮರಣಶಕ್ತಿ ವೃದ್ಧಿ, ವಯಸ್ಕರಿಗೆ ಮನಸ್ಸಿನ ಸ್ಪಷ್ಟತೆ ಮತ್ತು ಭಾವನಾತ್ಮಕ ಸಮತೋಲನ, ದೀರ್ಘಕಾಲೀನ ಕಾಯಿಲೆಗಳಿಂದ ಬಳಲುವವರಿಗೆ ಮನೋಬಲ ವೃದ್ಧಿ ಮತ್ತು ಚಿಕಿತ್ಸೆಗೆ ಪೂರಕ ಸಹಕಾರ ಲಭಿಸುವ ನಿರೀಕ್ಷೆಯಿದೆ. 


ಮುಂದಿನ ದಿನಗಳಲ್ಲಿ ಈ ಅಧಿವೇಶನ  ನಿಯಮಿತವಾಗಿ ನಡೆಯಲಿದ್ಫು ಸೀಮಿತ ಆಸನಗಳಿರುವುದರಿಂದ ಪೂರ್ವ ನೋಂದಣಿ ಕಡ್ಡಾಯವಾಗಿರುತ್ತದೆ. ಆಸಕ್ತರು ನೋಂದಣಿ ಹಾಗೂ ಮಾಹಿತಿಗಾಗಿ ಈ ನಂಬರ್‌ನ್ನು  93805 36467ಸಂಪರ್ಕಿಸಲು ಕೋರಲಾಗಿದೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top