ಕುಟುಂಬಗಳ ಕ್ಷೀಣ ತಡೆಯಲು ಸಮಷ್ಠಿಯ ಭಾವ ಬರಬೇಕು: ರಾಘವೇಶ್ವರ ಶ್ರೀಗಳು

Upayuktha
0


ಪುತ್ತೂರು: ಕಾರ್ಯಕರ್ತರಲ್ಲಿ ಭಾವ ಭಕ್ತಿ ಇದ್ದಾಗ ಸಂಖ್ಯೆ ಮುಖ್ಯವಾಗುವುದಿಲ್ಲ. ಗುರು ಹಾಗೂ ಶಿಷ್ಯ ಪರಂಪರೆ ಅವಿಚ್ಛಿನ್ನವಾಗಿ ಮುನ್ನಡೆಯಬೇಕು. ಕುಟುಂಬಗಳು ಕ್ಷೀಣಿಸುತ್ತಿದ್ದು, ಇದನ್ನು ತಪ್ಪಿಸಲು ಸಮಷ್ಠಿಯ ಭಾವ ಬರಬೇಕಾಗಿದೆ. ಆತ್ಮ ಬಲ ತುಂಬಿದ ಶಿಷ್ಯರ ತುಲಾಭಾರ ಹೆಚ್ಚು ನಡೆಯಬೇಕು ಎಂದು ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.


ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀಗುರುಗಳ ಸುವರ್ಣ ವರ್ಧಂತಿ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಂಗಳೂರು ಹೋಬಳಿಯ ಶಿಷ್ಯಭಕ್ತರಿಂದ ನಡೆದ ನಾಣ್ಯಗಳಿಂದ ತುಲಾಭಾರ ಸೇವೆಯನ್ನು ಸ್ವೀಕರಿಸಿ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.


ಮಕ್ಕಳ ಹೃದಯದಲ್ಲಿ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಬೇಕು. ಊರು ಬಿಟ್ಟು, ಎಲ್ಲೋ ಹೋಗಿ ಸಾಧನೆ ಮಾಡಿ ಪ್ರಯೋಜನವಿಲ್ಲ. ಮನೆ, ಊರು ಶೂನ್ಯವಾಗುವುದರಿಂದ ಆಚರಣೆ, ಸಂಪ್ರದಾಯಗಳು ಮುಂದುವರಿಯುವುದಿಲ್ಲ. ಸಮಾಜ ಬೆಳೆಯಬೇಕೆಂಬ ಚಿಂತನೆ ಪ್ರತಿಯೊಬ್ಬರಿಗೆ ಇರಬೇಕು ಎಂದರು.


ಸುವರ್ಣ ವರ್ಧಂತಿ ವರ್ಷಾಚರಣೆ ಅಂಗವಾಗಿ ರುದ್ರ ಹವನ ಮತ್ತು ನವಚಂಡಿ ಹವನ, ಶ್ರೀಕರಾರ್ಚಿತ ದೇವರಿಗೆ ಕನಕಾಭಿಷೇಕ, ಶ್ರೀಕರಾರ್ಚಿತ ದೇವರ ಸಹಿತ ಶ್ರೀಸಂಸ್ಥಾನದವರಿಗೆ ನಾಣ್ಯಗಳಿಂದ ತುಲಾಭಾರ ನಡೆಯಿತು. 


ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ದಂಪತಿಗಳು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.


ಹವ್ಯಕ ಮಹಾಮಂಡಲ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಾತೃ ಪ್ರಧಾನೆ ದೇವಿಕಾ ಶಾಸ್ತ್ರಿ, ಮಂಗಳೂರು ಮಂಡಲ ಅಧ್ಯಕ್ಷ ರಮೇಶ್ ಭಟ್, ಉಪ್ಪಿನಂಗಡಿ ಮಂಡಲ ಅರವಿಂದ ದರ್ಬೆ, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top