ಮಂಗಳೂರು ಹವ್ಯಕ ಸಭಾದಿಂದ ಯಕ್ಷಗಾನ ತಾಳಮದ್ದಲೆ

Upayuktha
0


ಮಂಗಳೂರು: ಮಂಗಳೂರು ಹವ್ಯಕ ಸಭಾ ವತಿಯಿಂದ ಶನಿವಾರ (ಡಿ.13) ಆಯೋಜಿಸಲಾದ ಯಕ್ಷಗಾನ ತಾಳಮದ್ದಲೆ ಹಾಗೂ ಕಲಾವಿದ ಸನ್ಮಾನ ಕಾರ್ಯಕ್ರಮವು ಅತ್ಯಂತ ಸಡಗರ ಹಾಗೂ ಸಂಸ್ಕೃತಿಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.


ಮೊದಲಿಗೆ, ಹವ್ಯಕ ಸಭಾದ ಸಂಪ್ರದಾಯದಂತೆ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಜಿ. ಕೆ. ಭಟ್ ಸೇರಾಜೆಯವರು ಅಭಿನಂದನಾ ಭಾಷಣವನ್ನು ನೆರವೇರಿಸಿದರೆ, ಸನ್ಮಾನ ಪತ್ರ ವಾಚನವನ್ನು ಶ್ರೀ ಸುಬ್ರಹ್ಮಣ್ಯ ಭಟ್ ಕಾಟಿಪಳ್ಳ ಅವರು ನೆರವೇರಿಸಿದರು.


ಸಭಾದ ಅಧ್ಯಕ್ಷೆ ಶ್ರೀಮತಿ ಗೀತಾದೇವಿ ಚೂಂತಾರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಭಾರತೀ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಶ್ರೀ ಜಿ. ಕೆ. ಭಟ್ ಕೊಣಾಜೆ ಅವರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಶ್ರೀಮತಿ ಸೌಜನ್ಯ ಪದ್ಯಾಣ ಅವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಸಮಿತಿಯ ಸದಸ್ಯ ಶ್ರೀ ಡಾ. ಕೆ. ಕೃಷ್ಣಶರ್ಮ ಅವರು ವಂದನಾರ್ಪಣೆ ನೆರವೇರಿಸಿದರು. ಸಮಿತಿಯ ಸದಸ್ಯ ಶ್ರೀ ದಿವಾಣ ಗೋವಿಂದ ಭಟ್ಟರು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.


ತದನಂತರ, ಶ್ರೀ ಜಿ. ಕೆ. ಭಟ್ ಸೇರಾಜೆ ಹಾಗೂ ಶ್ರೀ ದಿವಾಣ ಗೋವಿಂದ ಭಟ್ಟರ ನೇತೃತ್ವದಲ್ಲಿ, ಶ್ರೀ ಸೇರಾಜೆ ಸೀತಾರಾಮ ಭಟ್ಟರಿಂದ ರಚಿಸಲ್ಪಟ್ಟ “ಅಕೇರಿಯಾಣ ಲಡಾಯಿ” ಯಕ್ಷಗಾನ ತಾಳಮದ್ದಲೆಯು ಅತ್ಯಂತ ಚೊಕ್ಕವಾಗಿ ಪ್ರದರ್ಶಿತವಾಯಿತು.


ಮುಮ್ಮೇಳದಲ್ಲಿ ಮೇರು ಕಲಾವಿದರಾದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ಸೇರಾಜೆ ಸೀತಾರಾಮ ಭಟ್, ಶ್ರೀ ಗಣರಾಜ ಕುಂಬ್ಳೆ, ಶ್ರೀ ಪೆರ್ವಡಿ ಸುಬ್ರಹ್ಮಣ್ಯ ಭಟ್, ಶ್ರೀ ಜಿ. ಕೆ. ಭಟ್ ಸೇರಾಜೆ ಹಾಗೂ ಶ್ರೀ ವೇಣುಗೋಪಾಲ ಭಟ್ ಮಾಂಬಾಡಿ ಇವರು ವಿಜೃಂಭಿಸಿದರೆ, ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಶ್ರೀ ಶಂಕರ ಭಟ್ ಕಲ್ಮಡ್ಕ ಹಾಗೂ ಶ್ರೀ ದಿವಾಣ ಕೃಷ್ಣ ಪ್ರಸಾದ್ ಇವರು ಉತ್ತಮವಾಗಿ ಸಹಕರಿಸಿದರು.


ಅಪರಾಹ್ನ ಗಂಟೆ 3:00 ರಿಂದ ಪ್ರಾರಂಭವಾದ ಕಾರ್ಯಕ್ರಮವು ಸಂಜೆ 6:30 ಕ್ಕೆ ಸರಿಯಾಗಿ ಮುಕ್ತಾಯಗೊಂಡಿತು. ಸುಮಾರು 90–100 ಕಲಾಪ್ರೇಮಿಗಳು ಬಹಳ ಆಸಕ್ತಿಯಿಂದ ತಾಳಮದ್ದಲೆಯನ್ನು ವೀಕ್ಷಿಸಿ ಆನಂದಿಸಿದರು.


ಶ್ರೀ ದಿವಾಣ ಗೋವಿಂದ ಭಟ್ ಹಾಗೂ ಶ್ರೀಧರ ಜೋಶಿ ಅವರು ಕಾರ್ಯಕ್ರಮಕ್ಕೆ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top