ಮಣಿಕೃಷ್ಣ ಸ್ವಾಮಿ ಅಕಾಡೆಮಿಯಿಂದ ಯುವ ಕಲಾಮಣಿ ಪ್ರಶಸ್ತಿ ಪ್ರದಾನ
ಮಂಗಳೂರು: ಮನುಷ್ಯನ ಸಕಲ ರೋಗಗಳಿಗೆ ದಿವ್ಯ ಔಷಧ ಸಂಗೀತ ಎಂದು ಒಡಿಯೂರು ಶ್ರೀ ಗುರುದೇವಾನಂದ ದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸುರತ್ಕಲ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸಂಸ್ಕೃತಿ ಸಚಿವಾಲಯ ನವ ದೆಹಲಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಗ ಸುಧಾರಸ 2025 ರ ಯುವ ಸಂಗೀತ ಸಾಧಕಿ ಕುಮಾರಿ ಆತ್ರೇಯ ಕೃಷ್ಣ ಇವರಿಗೆ ಯುವ ಕಲಾಮಣಿ ಪ್ರಶಸ್ತಿಯನ್ನು ವಿತರಿಸಿ ಆಶೀರ್ವಚನ ನೀಡಿದರು.
ಸಂಗೀತ ಕೇವಲ ಕೇಳುವ ಅನುಭವವಲ್ಲ ಬದಲಿಗೆ ಭಾವನೆಗಳನ್ನು ವ್ಯಕ್ತಪಡಿಸುವ ಸಂವಹನ ನಡೆಸುವ ಮತ್ತು ಮಾನವ ಅನುಭವವನ್ನು ಶ್ರೀಮಂತ ಗೊಳಿಸುವ ಒಂದು ಸಾರ್ವತ್ರಿಕ ಭಾಷೆಯಾಗಿದೆ ನಾವು ಆಧ್ಯಾತ್ಮಿಕರಾಗಬೇಕು ಭಾರತ ದೇಶವೇ ಭಾವರಾಗ ತಾಳಗಳಿಂದ ಮೇಲೆಸುವ ರಾಷ್ಟ್ರ. ಭಾರತೀಯ ಸಂಗೀತದ ಅಂತಿಮ ಗುರಿಯೇ ನಾದಬ್ರಹ್ಮೋಪಾಸನೆ ಎಂದರು.
ಮಣಿಕೃಷ್ಣ ಸ್ವಾಮಿ ಫೌಂಡೇಶನ್ ಚೆನ್ನೈ ಇದರ ಅಧ್ಯಕ್ಷರಾದ ಎಂ ಕೆ ಸುದರ್ಶನ್ ರವರು ಮಾತನಾಡುತ್ತಾ, ಸಂಗೀತ ಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಅದೇ ಚೌಕಟ್ಟಿನಲ್ಲಿ ಮುಂದುವರೆಯಬೇಕು ಎನ್ನುವ ಉದ್ದೇಶದಿಂದ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವಿದ್ವಾಂಸರಾದ ವಿಠಲ್ ರಾಮಮೂರ್ತಿ ಚೆನೈ, ಡಾ. ರಾಜ್ ಕುಮಾರ್ ಭಾರತೀ ಚೆನೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಣಿ ಮತ್ತು ಎಂ.ಕೆ ವಾರ್ಷಿಕ ಪ್ರಶಸ್ತಿಗೆ ಕು. ದಿವ್ಯಶ್ರೀ ಮಣಿಪಾಲ, ಈಶ್ವರಯ್ಯ ಮೆಮೋರಿಯಲ್ ಪ್ರಶಸ್ತಿಗೆ ವಿದುಷಿ ಉಮಾ ಶಂಕರಿ ಟಿ.ಕೆ ಮಣಿಪಾಲ ಇವರಿಗೆ ನೀಡಲಾಯಿತು.
ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪ್ರಸ್ತಾವಿಕವಾಗಿ ಮಾತನಾಡುತ್ತಾ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಪೂರ್ವಾರ್ಧದಲ್ಲಿ ಶ್ರೀವರ್ಚಸ್ ಧರ್ಮಸ್ಥಳ, ಅನುಶ್ರೀ ಮಳಿ ಸಂಗೀತ ಕಾರ್ಯಕ್ರಮ ನೀಡಿರುವರು.
ಉತ್ತರಾರ್ಧದಲ್ಲಿ ಚೆನೈಯ ಡಾ. ರಾಜ್ ಕುಮಾರ್ ಭಾರತೀ ಯವರ ಮನೋಜ್ಞ ಸಂಗೀತ ಕಾರ್ಯಕ್ರಮವು ವಿದ್ವಾಂಸರ ಮುಕ್ತ ಪ್ರಸಂಶೆಗೆ ಒಳಗಾಯಿತು. ಪಕ್ಕವಾದ್ಯದಲ್ಲಿ ವಯೊಲಿಮ್‌ನಲ್ಲಿ ವಿದ್ವಾನ್ ವಿಠಲ್ ರಾಮಮೂರ್ತಿ ಚೆನೈ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ವಿ ಪ್ರವೀಣ್, ಮೋರ್ಚಿಂಗ್ ನಲ್ಲಿ ವಿದ್ವಾನ್ ಬಾಲಕೃಷ್ಣ ಹೊಸಮನೆ ಸಹಕರಿಸಿದ್ದರು. ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್, ನಾಗರಿಕ ಸಮಿತಿಯ ರಾಮ್ ಮೋಹನ್ ರಾವ್, ವಿದುಷಿ ಪ್ರತಿಭಾ ಸಾಮಗ, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಎಂ ಸಾಮಗ, ವಿದುಷಿ ಗೀತಾ ಸರಳಾಯ, ವಿದುಷಿ ರಾಜಶ್ರೀ ಉಳ್ಳಾಲ್, ವಿದುಷಿ ಪ್ರತಿಮಾ ಶ್ರೀಧರ್, ಅಕಾಡೆಮಿಯ ಉಪಾಧ್ಯಕ್ಷ ಶ್ರೀಧರ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು. ಗಾಯತ್ರಿಯವರು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


