ಕಾಂತಾವರ ಕನ್ನಡ ಸಂಘದ 2025ರ ಸಾಲಿನ ವಾರ್ಷಿಕ ಪ್ರಶಸ್ತಿಗಳ ಘೋಷಣೆ

Upayuktha
0


ಉಡುಪಿ: ಕಾಂತಾವರ ಕನ್ನಡ ಸಂಘದ ವಾರ್ಷಿಕ (2025) ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು ಮೊಗಸಾಲೆ ಪ್ರತಿಷ್ಠಾನದಿಂದ ನೀಡುವ ‘ಸಾಹಿತ್ಯ ಪ್ರಶಸ್ತಿ’ಯನ್ನು ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರಿಗೆ, ಶ್ರೀಪತಿ ಮಂಜನಬೈಲು ದತ್ತಿನಿಧಿಯ ‘ರಂಗಸನ್ಮಾನ ಪ್ರಶಸ್ತಿ’ಯನ್ನು ಮಂಗಳೂರಿನ ರಂಗಕರ್ಮಿ ಶಶಿರಾಜ ಕಾವೂರು ಅವರಿಗೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಲ ಅವರ ದತ್ತಿನಿಧಿಯ ‘ಯಕ್ಷಗಾನ ಸಾಹಿತ್ಯ ಸಂಶೋಧನ ಪ್ರಶಸ್ತಿ’ಯನ್ನು ಶಿರಸಿಯ ಹಿರಿಯ ಸಾಹಿತಿ ಅಶೋಕ ಹಾಸ್ಯಗಾರ ಅವರಿಗೆ, ಸಂಘದ ‘ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಹುಲಿಮನೆ ಜಯರಾಮ ಹೆಗಡೆ ಮಿಜಾರು ಅವರಿಗೆ ನೀಡಲು ನಿರ್ಣಯಿಸಲಾಗಿದೆ. 


ಇವುಗಳಲ್ಲಿ ದತ್ತಿ ಪ್ರಶಸ್ತಿಗಳ ಮೌಲ್ಯ ರೂಪಾೈ ಹತ್ತು ಸಾವಿರವಾದರೆ ವಾರ್ಷಿಕ ಗೌರವ ಪ್ರಶಸ್ತಿಯು ರೂಪಾೈ ಐದು ಸಾವಿರದಾಗಿದ್ದು ಪ್ರತೀ ಪ್ರಶಸ್ತಿಗಳು ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿವೆ. ಇವುಗಳ ಪ್ರದಾನ ಸಮಾರಂಭವನ್ನು ಇದೇ ತಿಂಗಳ 28ರಂದು ಕಾಂತಾವರ ಕನ್ನಡ ಭವನದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಸುವುದೆಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಮತ್ತು ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಅವರು ಜಂಟಿಯಾಗಿ ಪ್ರಕಟಿಸಿದ್ದಾರೆ.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top