ಹಲ್ಲೆಗೊಳಗಾದ ರೋಗಿಗಳಿಗೆ ಮೊದಲು ಆರೋಗ್ಯ ಸೇವೆ ಒದಗಿಸಿ: ಸಂತೋಷ್‍ಎಂ.ಎಸ್.

Upayuktha
0


ಶಿವಮೊಗ್ಗ: ಮಾನಸಟ್ರಸ್ಟ್, ಕಟೀಲ್‍ಅಶೋಕ್ ಪೈ ಸ್ಮಾರಕ ನರ್ಸಿಂಗ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರ ಸಹಯೋಗದಲ್ಲಿ ಶುಕ್ರವಾರ ನರ್ಸಿಂಗ್ ಕಾಲೇಜಿನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ದಿನ – 2025ರ ಆಚರಣೆಯ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ವಿಭಾಗದ ಮಾನ್ಯ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಶ್ರೀಯುತ ಸಂತೋಷ್‍ ಎಂ.ಎಸ್.ರವರು ಉದ್ಘಾಟಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತೋಷ್‍ರವರು “ಎಲ್ಲರಿಗೂ ಮತ್ತು ಎಲ್ಲೆಡೆಯೂ ಆರೋಗ್ಯ ಸೇವೆ” ಎಂಬ ಧ್ಯೇಯದಿಂದ 2012 ರಂದು ಯುನೈಟೆಡ್ ನೇಷನ್ಸ್‍ನಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ದಿನ ವೆಂದು ಪ್ರಾರಂಭಿಸಲಾಯಿತು. ಅದರ ಸವಿನೆನಪಿಗಾಗಿ ಪ್ರತಿ ವರ್ಷವೂಡಿಸೆಂಬರ್ 12 ರಂದು ಈ ದಿನವನ್ನುಆಚರಿಸುತ್ತೇವೆ ಎಂದು ತಿಳಿಸಿದರು.ಆರೋಗ್ಯ ಸೇವೆ ಮತ್ತು ಕಾನೂನಿನ ಸಂಬಂಧಗಳ ಬಗ್ಗೆ ತಿಳಿಸಿದ ಅವರು  “ಹಲ್ಲೆಗೊಳಗಾದ ರೋಗಿಗಳಿಗೆ ಮೊದಲುಆರೋಗ್ಯ ಸೇವೆ ಒದಗಿಸಿ: ನಂತರ ಕಾನೂನಿನ ಸೇವೆಗೆ ಸಲಹೆ ನೀಡುವುದುಆರೋಗ್ಯ ಸಿಬ್ಬಂದಿಗಳ ಜವಾಬ್ದಾರಿಯಾಗಿರುತ್ತದೆ” ಎಂದು ಮಾಹಿತಿ ನೀಡಿದರು. ಜಿಲ್ಲಾ ಕಾನೂನು ಪ್ರಾಧಿಕಾರದಲ್ಲಿ ದೊರೆಯುವ ಉಚಿತ ಕಾನೂನು ಸೌಲಭ್ಯಗಳು ನೊಂದವರಿಗಾಗಿ ದೊರೆಯುವ ಸೌಲಭ್ಯಗಳು, Victim Protection Scheme ಗಳ ಬಗ್ಗೆ ಅರಿವು ನೀಡಿದರು. ಉಚಿತ ಸಹಾಯವಾಣಿಯ-15100 ಬಗ್ಗೆ ಮಾಹಿತಿ ನೀಡಿದಲ್ಲದೆಅವರುಆರೋಗ್ಯ ಸಿಬ್ಬಂದಿಗಳು ಕಾನೂನಿನ ನಿಬಂಧನೆಗಳನ್ನು ತಿಳಿದುಕೊಳ್ಳುವುದು ಈಗಿನ ಕಾಲಘಟ್ಟದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ತಿಳಿಸಿರುತ್ತಾರೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸಟ್ರಸ್ಟ್‍ನ ನಿರ್ದೇಶಕರಾದ ಡಾ|| ರಜನಿ ಎ ಪೈ ಅವರು ವಹಿಸಿದ್ದರು. ಕಟೀಲ್‍ಅಶೋಕ್ ಪೈ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಡಾ.ರಾಜೇಂದ್ರಚೆನ್ನಿ, ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ, ಪ್ರಾಂಶುಪಾಲರಾದ ಪ್ರೊ.ಮಲ್ಲಿಕಾರ್ಜುನಅವರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಕುಮಾರಿ ದೀಪಶ್ರೀ ನಿರೂಪಿಸಿದರು. ಕುಮಾರಿ ಅನುಷ ಸ್ವಾಗತಿಸಿದರು. ಶ್ರೀಮತಿ ಗೀತಾ ವಂದಿಸಿದರು ಹಾಗೂ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top