ಗೋಕರ್ಣ: ಗೋಕರ್ಣದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ "ಸ್ವರಾತ್ಮ ಗುರುಕುಲಮ್"ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 13 ಮತ್ತು 14 ರಂದು "ಸ್ವರವರ್ಷ" ಪ್ರಥಮ ಶಾಸ್ತ್ರೀಯ ಸಂಗೀತೋತ್ಸವ ಬೆಳಗ್ಗೆ 9:00 ರಿಂದ ರಾತ್ರಿ 8 ರವರೆಗೆ ವಿ.ವಿ.ವಿ ಯ ಗುರುದೃಷ್ಟಿ ಸಭಾ ಭವನದಲ್ಲಿ ನಿರಂತರವಾಗಿ ನಡೆಯಲಿದೆ.
ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಹಿರಿಯ ಹಿಂದುಸ್ತಾನಿ ಕಲಾವಿದರಾದ ಶ್ರೀ ಪಂ. ಪರಮೇಶ್ವರ ಹೆಗಡೆಯವರು ಉದ್ಘಾಟಿಸಲಿದ್ದು, ಹಿರಿಯ ಹಿಂದುಸ್ತಾನಿ ಕಲಾವಿದರಾದ ಪಂ. ದತ್ತಾತ್ರೇಯ ಗಾಂವ್ಕರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ವರಾತ್ಮಗುರುಕುಲದಲ್ಲಿ ತರಬೇತಿ ಪಡೆದ 51 ಗಾಯಕ /ಗಾಯಕಿಯರ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದ್ದು 20 ಹಿರಿಯ ಸಹ ಕಲಾವಿದರು ತಬಲಾ- ಹಾರ್ಮೋನಿಯಂ ಹಾಗೂ ಪಿಟೀಲಿನೊಂದಿಗೆ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದ್ದು, ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಿ ಕೊಡಬೇಕೆಂದು ವಿ.ವಿ.ವಿಯ ವಿದ್ಯಾ ಪರಿಷತ್ತಿನ ಅಧ್ಯಕ್ಷ ಶ್ರೀ ಜಿ ಎಲ್ ಹೆಗಡೆ, ಅಶೋಕಾ ಲೋಕದ ಶ್ರೀ ಸಂಯೋಜಕರಾದ ಶ್ರೀ ಮಂಜುನಾಥ ಸುವರ್ಣಗದ್ದೆ, ವಿ.ವಿ.ವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ ಹಾಗೂ ಸ್ವರಾತ್ಮ ಗುರುಕುಲದ ಪ್ರಾಚಾರ್ಯ ಡಾ. ಹರೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

