ಮಂಗಳೂರು: "ಸಮಾಜಕ್ಕೆ ಉತ್ತಮ ಸಂದೇಶವನ್ನು ಯಕ್ಷಗಾನ ಪೌರಾಣಿಕ ಪ್ರಸಂಗಗಳು ನೀಡುತ್ತವೆ. ಅದರ ಪ್ರಸಾರ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ಪಸರಿದೆ. ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ದಾಮೋದರ ನಿಸರ್ಗರು ಇಂತಹಾ ಅನೇಕ ಸಪ್ತಾಹಗಳನ್ನು ನಡೆಸಿದ್ದಾರೆ. ಇಂದು ಗರೋಡಿಯ ಬ್ರಹ್ಮ ಬೈದ್ಯರ್ಕಳ ಪುಣ್ಯಸ್ಥಳದಲ್ಲಿ ನಿಸರ್ಗರ ನೆನಪಿನ ಸಪ್ತಾಹ ನಡೆಸುತ್ತಿರುವುದರಿಂದ ಅದು ಆ ಚೇತನಕ್ಕೆ ತೃಪ್ತಿಯಾಗುವುದು. ಹಾಗಾಗಿ ತುಳುಕೂಟದ ಸಂಘಟನಾ ಪರ್ವ ಕಾರ್ಯ ಮುಂದುವರಿಯಲಿ" ಎಂದು ಹಿರಿಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.
ತುಳು ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷ ಕಲಾವಿದ ಜಬ್ಬಾರ್ ಸಮೋರನ್ನು ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗರು ಗೌರವಿಸಿದರು. ಪ್ರೊ. ಭಾಸ್ಕರ ರೈ, ಕುಕ್ಕುವಳ್ಳಿ, ನಾಗೇಶ ದೇವಾಡಿಗ, ವರ್ಕಾಡಿ ರವಿ ಅಲೆವೂರಾಯ, ಮಧುಸೂದನ ಅಲೆವೂರಾಯ, ಶಶಿಧರ ಪೊಯ್ಯತ್ತಬೈಲ್, ನ್ಯಾಯವಾದಿ ಗೋಪಾಲಕೃಷ್ಣ ಭಟ್, ಗುತ್ತಿಗಾರ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


