ಮಂಗಳೂರು: ಕಳೆದ 40ಕ್ಕೂ ಮಿಕ್ಕಿದ ವರ್ಷಗಳಿಂದ ತುಳುಕೂಟ (ರಿ) ಕುಡ್ಲ ಸಂಘಟನೆಯ ವತಿಯಿಂದ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳಿಗೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ಬಿಸು ಪರ್ಬದ ದಿನ ನೀಡುವ ಪರಿಪಾಠವನ್ನು ನಡೆಸುತ್ತಾ ಬರುತ್ತಿದೆ. ಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಯ ಪ್ರಾಯೋಜನೆ ಮಾಡುತ್ತಾ ಬರುತ್ತಿದ್ದಾರೆ.
ಕೃತಿಯು ಇದುವರೆಗೆ ಎಲ್ಲೂ ಪ್ರದರ್ಶನ ಕಂಡಿರಬಾರದು. ಸ್ವತಂತ್ರ ಕೃತಿ ಎಂದು ಧೃಡೀಕರಿಸತಕ್ಕದ್ದು, ಹಾಳೆಯ ಒಂದೇ ಮಗ್ಗುಲಲ್ಲಿರಬೇಕು. ಇದು ತನಕ ಮೂರು ಬಾರಿ ಪ್ರಶಸ್ತಿ ಗೆದ್ದವರ ಕೃತಿ ಅಮಾನ್ಯವಾಗುತ್ತದೆ. ಉತ್ತಮ ಕೃತಿಗಳು ಮಾಡಿಬರಲು ಇದು ಸಹಾಯಕವಾಗುತ್ತದೆ. ತುಳು ಭಾಷೆಯಲ್ಲಿಯೇ ಇರಬೇಕು. ಪ್ರಶಸ್ತಿ ಮೊತ್ತವು ಪಥಮ: ರೂ.10000/ ; ದ್ವಿತೀಯ; 8000 / ಹಾಗೂ ತೃತೀಯಃ 6,000/ ಆಗಿರುತ್ತದೆ. ಅನುವಾದಿತ ಕೃತಿಯೂ ಸ್ವೀಕೃತವಲ್ಲ. ನಾಟಕ ಪ್ರತಿಗಳನ್ನು ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ, ನಿಸರ್ಗ ಮನೆ. ನಿಸರ್ಗ ಕ್ರಾಸ್,
ಮರೋಳಿ ಮಂಗಳೂರು ಇಲ್ಲಿಗೆ 2026 ನೇ ಜನವರಿ 30 ರೊಳಗೆ ಕಳುಹಿಸಿಕೊಡಬೇಕು ಎಂದು ತುಳು ಕೂಟದ ಪ್ರಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ವರ್ಕಾಡಿ (94811 63531) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


