ಲೇಖಾ ಲೋಕ-59: ಅದ್ಭುತ ಸಂಶೋಧಕ, ಸಾಹಿತಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್

Upayuktha
0


ಕ್ಷಗಾನ ಸಾಹಿತ್ಯದಲ್ಲಿ ಪರಿಣಿತರಾಗಿ, ಡಾಕ್ಟರೇಟ್ ಪಡೆದ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಅಧಿಕಾರಿಯಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ವಿದ್ವಾಂಸರು. ಬ್ಯಾಂಕಿನ ಕೆಲಸವಲ್ಲದೇ, ಸಂಶೋಧಕರಾಗಿ, ಸಾಹಿತಿಯಾಗಿ, ಅಷ್ಟಾವಧಾನಿಯಾಗಿದ್ದು ವಿಶೇಷ. ತೆಂಕತಿಟ್ಟು ಯಕ್ಷಗಾನ ಪ್ರಸಂಗಕರ್ತರಾಗಿ, ಕಲಾವಿದರಾಗಿ, ಅನೇಕ ಕಡೆ ಯಕ್ಷಗಾನ ಸಾಹಿತ್ಯ ಚರಿತ್ರೆ, ಯಕ್ಷಗಾನ ಛಂದಸ್ಸು, ಮುಕ್ತಕ ಸಾಹಿತ್ಯದ ವಿಷಯಗಳ ಬಗ್ಗೆ ಸಂಶೋಧನೆ ಮಾಡಿದ ವಿದ್ವಾಂಸರು.


ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಬ್ಬಿನಾಲೆಯಲ್ಲಿ ತಾ! 5-12-1961 ರಂದು ಜನಿಸಿದರು. ಇವರು ತುಳು ಅನುವಾದ ಮಾಡಿ, ಅನೇಕ ಸಂಶೋಧನೆಗಳು ಮಾಡಿ, ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನ, ಮತ್ತು ರಾಜ್ಯದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾದ ಕಲಾವಿದರು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಅನೇಕ ವಿಧ ಸಾಹಿತ್ಯದ ಕೊಡುಗೆಗಳನ್ನು ನಾಡಿಗೆ ನೀಡಿದ್ದಾರೆ. ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ, ಎಂಬ ಕವನ ಸಂಕಲನಗಳನ್ನು ಬಿಡುಗಡೆ ಮಾಡಿ ನಾಡಿಗೆ ಅರ್ಪಿಸಿದ್ದಾರೆ. ಸಂಶೋಧನೆಯಲ್ಲಿ ಯಕ್ಷಗಾನ ಛಂದೋಗತಿ, ಯಕ್ಷಗಾನ ಛಂದಸ್ಸು, ಯಕ್ಷಗಾನ ಸಾಹಿತ್ಯ ಚರಿತ್ರೆ ಪ್ರಮುಖವಾದವು. ತುಳುವಿನ ಪುರಂದರ ದಾಸರ ಪದೊಕುಲು ಪ್ರಸಿದ್ದ ಅನುವಾದ ಕೃತಿಯಾಗಿದೆ.


ಇವರಿಗೆ ಆರ್ಯಭಟ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಯಕ್ಷಗಾನ ಕಾರ್ಯಕ್ರಮ ಸಾಹಿತ್ಯ, ಅನುವಾದ, ಸಂಶೋಧನೆ ಇವರ ದಿನ ನಿತ್ಯ ಕಾರ್ಯಕ್ರಮಗಳಾಗಿ ಜನಾನುರಾಗಿ ಮೆಚ್ಚುಗೆಗೆ ಪಾತ್ರರಾದ ಮಹನೀಯರು. ಯಕ್ಷಗಾನ ಕವಿ ಕಾವ್ಯ ವಿಹಾರ ಕೃತಿ ರಚಿಸಿದ ವಿದ್ವಾಂಸರು. ವಸಂತ ಷೋಡಶಿ, ಶ್ರೀ ರಾಮ ಲೀಲಾ ದರ್ಶನಂ ಎಂಬ ಕೃತಿಗಳು ಇವರಿಂದ ರಚಿತವಾಗಿವೆ. ಕನ್ನಡದ ಕಾವ್ಯಗಳ ಬಗ್ಗೆ ಇನ್ನಷ್ಟು ಅಧ್ಯಯನ ಅವಶ್ಯ ಎಂದು ಡಾ! ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ತಮ್ಮ ಕಳಕಳಿ ವ್ಯಕ್ತಪಡಿಸಿ, ಸರ್ಕಾರ ಇತ್ತ ಕಡೆ ತಕ್ಷಣ ಗಮನ ಹರಿಸಬೇಕೆಂದು ತಿಳಿಸಿದ್ದಾರೆ.

ಕನ್ನಡದ ಕಾವ್ಯಗಳ ಅಧ್ಯಯನದ ಕೊರತೆಯಿಂದ ಕನ್ನಡದ ಕಾವ್ಯಗಳಿಗೆ ಶರೀರವೇ ಇಲ್ಲದಂತಾಗಿದೆ ಎಂದು ತಿಳಿ ಹೇಳಿದ್ದಾರೆ. ಆದಿ ಕವಿ ಪಂಪ ಬನವಾಸಿ ವರ್ಣಿಸಿದಂತೆ, ಕುರುಕ್ಷೇತ್ರವನ್ನೂ ವರ್ಣಿಸಿ, ಆತನ ಕಾವ್ಯ ಎಲ್ಲ ಕವಿಗಳು ಅನುಸಂಧಾನ ಮಾಡುವಂತಹ ಅಂಶಗಳು ಅಡಗಿವೆ ಎಂದು ಮತ್ತು ಮಾದರಿಯಾಗಿವೆ ಎಂದು ಕವಿಯನ್ನು ವರ್ಣಿಸಿದ್ದಾರೆ. ಪಂಪನ ಸಕಲ ಮೌಲ್ಯಗಳನ್ನು, ಆದರ್ಶಗಳನ್ನು ನಾವು ಅಳವಡಿಸಿಕೊಂಡು ಸದಾ ಆತನನ್ನು ಸ್ಮರಿಸಬೇಕೆಂದು ಬನವಾಸಿಯಲ್ಲಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.


ಪಂಪ ಕನ್ನಡ ಸಾಹಿತ್ಯದಲ್ಲಿ  ಹೊಸ ಹೊಸ ಶಬ್ಧಗಳನ್ನು ಪರಿಚಯಿಸಿ ಆ ಶಬ್ದಗಳು ಈಗಲೂ ಜೀವಂತವಾಗಿರುವುದು ವಿಶೇಷ. ಮುದ್ಣಣನ ಬಗ್ಗೆ ಹಲವಾರು ವಿಶೇಷ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತುಳು ಭಾಷೆಯಲ್ಲಿ ಕಂರ್ಬುದ ಪೇರ್ ಎಂಬ ತುಳು ಗೀತರಚನೆಕಾರರಾಗಿ ಪ್ರಸಿದ್ಧರಾದ ಪಂಡಿತರು.


ಡಾ !ಕಬ್ಬಿನಾಲೆ ವಸಂತ ಭಾರಧ್ವಾಜ್ ಅವರು ಕುವೆಂಪುರವರ ಪ್ರಸಿದ್ಧ ಕಾವ್ಯವಾದ ಶ್ರೀ ರಾಮಾಯಣ ದರ್ಶನಂ ಕೃತಿಯ ಆಧಾರಿತ ಕೃತಿಯಾದ ಶ್ರೀ ರಾಮಲೀಲಾದರ್ಶನಂ ರಚಿಸಿ ಕನ್ನಡ ನಾಡಿಗೆ ನೀಡಿದ್ದಾರೆ. ಅದೇ ರೀತಿ ವಸಂತಷೋಡಶಿ ಎಂಬ ಕಾವ್ಯ ಸಂಕಲನ ರಚಿಸಿ, ಅದರಲ್ಲಿ ಹದಿನಾರು ಯಕ್ಷಗಾನ ಕಾವ್ಗಗಳನ್ನು ಅಳವಡಿಸಿದ ಲೇಖಕರು. ಸದಾ ಚಟುವಟಿಕೆಗಳ ವ್ಯಕ್ತಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top