ಮಂಗಳೂರು: "ಸೇವೆಯೆಂಬದು ಆಡಂಬರವಲ್ಲ- ಆತ್ಮಾರ್ಪಣೆ. ಆಗ ಅದು ಭಗವದ್ ಪ್ರೀತಿಯಾಗುತ್ತದೆ. ಈ ಜಗತ್ತಿನಲ್ಲಿ ಕೇವಲ ಪ್ರಚಾರಕ್ಕಾಗಿ ಸೇವೆ ಮಾಡುವವರು; ಸೇವೆಯ ಹೆಸರಿನಲ್ಲಿ ಶೋಷಣೆ ನಡೆಸುವವರು ಸಿಗಬಹುದು. ಆದರೆ ಸೇವೆಯನ್ನು ಬದುಕಾಗಿ ಸೇವಿಸುವವರು ದೊರೆಯುವುದು ವಿರಳಾತಿ ವಿರಳ. ಸಮಾಜಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟು ಬಹಳ ಎಳವೆಯಲ್ಲೇ ಗರಿಷ್ಠ ಸಾಧನೆ ಮಾಡಿದವರು ಇಂಜಿನಿಯರ್ ಅರ್ಜುನ್ ಭಂಡಾರ್ಕರ್ ರವರು. ತಮ್ಮ ಮಡದಿಯ ಜೊತೆಯೊಂದಿಗೆ ತನ್ನನ್ನು ತಾನು ಸಮಾಜಕ್ಕರ್ಪಿಸಿಕೊಂಡು ಬಾಳಿದವರು ಈತ. ಹಾಗಾಗಿ ಅಶಕ್ತರಿಗೆ ನೆರವಾಗುವ, ರಕ್ತ ಪೂರಣದ ವ್ಯವಸ್ಥೆ ಮಾಡುವ, ಆರ್ಥಿಕ ಅಶಕ್ತರಿಗೆ ಮನೆಕಟ್ಟಿಕೊಡುವ ಮಹಾನ್ ಕೆಲಸವನ್ನು ಮಾಡುವ ಕಾರ್ಯವನ್ನು ಗುರುತಿಸಿ ಅರ್ಜುನ್ ರಿಗೆ ಶೀದೇವರ ಪ್ರಸಾದ ರೂಪದ ಸನ್ಮಾನ ಸಲ್ಲಿಸುವುದು ಅಭಿನಂದನೀಯ ಕಾರ್ಯ" ಎಂದು ಯಕ್ಷಗುರು ವರ್ಕಾಡಿ ರವಿ ಅಲೆವೂರಾಯರು ನುಡಿದರು.
ಅವರು ಬೆಂಕಿನಾಥೇಶ್ವರ ಮೇಳದ ಆರಂಭದ ದಿನ ಸನ್ಮಾನಿಸಲ್ಪಟ್ಟ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಇಂಜಿನಿಯರ್ ಅರ್ಜುನ್ ಭಂಡಾರ್ಕರರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು.
ಚಿತ್ತರಂಜನ್ ಶೆಟ್ಟಿ, ಕಳವಾರ ಗುತ್ತು, ಸಭಾದ್ಯಕ್ಷತೆ ವಹಿಸಿದ್ದರು. ಮೇಳದ ಅಧ್ಯಕ್ಷ ಶ್ರೀನಿವಾಸ ಭಟ್, ಮೇಳದ ಸಂಚಾಲಕರಾದ ಸುಕೇಂದ್ರ ಮಲ್ಲಿ, ಗುರುಪುರ, ಪ್ರಬಂಧಕ ರವಿ ಶೆಟ್ಟಿ, ಪೆರುವಾಯಿ ಉಪಸ್ಥಿತರಿದ್ದರು. ಕಳವಾರಿನ ನಿವೃತ್ತ ಅಧ್ಯಾಪಕ ರಮೇಶ್ ಭಟ್ ಧಾರೇಶ್ವರ್ ರವರು ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


