ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಬುಧವಾರ (ಡಿ.10) ಸಂಜೆ "ತಿಂಗಳ ಬೆಳಕಲ್ಲಿ ಪರಿಷತ್ತು" ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವೃಷಭರಾಜ್ ಜೈನ್ ಅವರು ಕರ್ಮ ಸಿದ್ಧಾಂತದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಹಲವಾರು ವರ್ಷಗಳಿಂದ ನಿರಂತರವಾಗಿ ಪಾಸಿಟಿವ್ ಲೈಫ್ ಸಲ್ಯೂಷನ್ಸ್, ತಿಂಗಳ ಬೆಳಕು ಮುಂತಾದ ಸಮಾಜಮುಖಿ ಸತ್ಸಂಗದ ಕಾರ್ಯವನ್ನು ಮಾಡುತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರ ಪ್ರೊ. ವೃಷಭರಾಜ್ ಜೈನ್‌ರನ್ನು ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅವರ ಶ್ರೀಮತಿಯವರಾದ ಪ್ರೊ. ಕೀರ್ತಿ ದೇವಿಯವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಎಸ್. ರೇವಣಕರ್, ಅಧ್ಯಕ್ಷರು, ಕ.ಸಾ.ಪ. ಮಂಗಳೂರು ತಾಲೂಕು ವಹಿಸಿದ್ದರು. ಸಾಯಿ ಗ್ರ್ಯಾಂಡಿಯರ್ ಅಪಾರ್ಟ್ಮೆಂಟ್, B- ಬ್ಲಾಕ್, ರೂಫ್ ಟಾಪ್, ಸುಬ್ರಹ್ಮಣ್ಯ ಸದನ ಬಳಿ, ಜೈಲ್ ರಸ್ತೆ, ಮಂಗಳೂರು ಇಲ್ಲಿ ಈ ವಿಶೇಷ ಕಾರ್ಯಕ್ರಮ ಜರುಗಿತು. ಕ.ಸಾ.ಪ. ಕಾರ್ಯದರ್ಶಿ ಗೌರವ ಗಣೇಶ್ ಪ್ರಸಾದ್ ಜೀ ಕಾರ್ಯಕ್ರಮ ನಿರ್ವಹಿಸಿದರು.
ಡಾ. ಮುರಲೀ ಮೋಹನ್ ಗೌರವ ಕಾರ್ಯದರ್ಶಿಗಳು, ಕ.ಸಾ.ಪ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇವರು ವಂದನಾರ್ಪಣೆ ಮಾಡಿದರು. ಕೋಶಾಧಿಕಾರಿ ಸುಬ್ರಾಯ ಭಟ್ ಸ್ವಾಗತಿಸಿದರು. ಶ್ರೀಮತಿ ಡಾ.ಮೀನಾಕ್ಷಿರಾಮಚಂದ್ರ, ಸನತ್ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


